ತ್ವರಿತವಾಗಿ 1000 ರನ್ ಗಳಿಕೆ, ಎಬಿಡಿ ದಾಖಲೆ ಮುರಿದ ಕೊಹ್ಲಿ

Posted By:
Subscribe to Oneindia Kannada

ಕೋಲ್ಕತಾ, ಜನವರಿ 23: ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಸೋತರೂ,ನಾಯಕನಾಗಿ ಕೊಹ್ಲಿ ಮತ್ತೊಂದು ಸರಣಿ ಜಯ ದಾಖಲಿಸಿದ್ದಾರೆ. ಇದರ ಜತೆಗೆ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದಿದ್ದಾರೆ. ನಾಯಕನಾಗಿ ಅತಿಕಡಿಮೆ ಇನ್ನಿಂಗ್ಸ್ ಗಳಲ್ಲಿ 1,000 ರನ್ ಗಳಿಸಿದ್ದಾರೆ.

ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು 20 ರನ್ ಗಳಿಸಿದ್ದಾಗ ದಾಖಲೆ ಪುಸ್ತಕ ಸೇರಿದರು. ಈ ಮೂಲಕ ಕೇನ್ ವಿಲಿಯಮ್ಸನ್, ಅಲೆಸ್ಟರ್ ಕುಕ್, ಸೌರವ್ ಗಂಗೂಲಿ ಅಲ್ಲದೆ, ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್ ದಾಖಲೆ ಮುರಿದರು.

ಎಬಿ ಡಿ ವಿಲಿಯರ್ಸ್ ಅವರು 18 ಇನ್ನಿಂಗ್ಸ್ ಗಳಲ್ಲಿ 1000 ರನ್ ಗಳಿಸಿದ್ದರೆ, ಕೊಹ್ಲಿ 17 ಇನ್ನಿಂಗ್ಸ್ ನಲ್ಲಿ ಈ ಗಡಿ ದಾಟಿದ್ದಾರೆ.

Virat Kohli becomes fastest to score 1000 ODI runs as captain, surpasses AB de Villiers' record


ತ್ವರಿತ ಗತಿ 1,000 ರನ್ ಗಳಿಸಿದ ನಾಯಕರು:
* 17 ಇನ್ನಿಂಗ್ಸ್ : ವಿರಾಟ್ ಕೋಹ್ಲಿ (ಭಾರತ)
* 18 ಇನ್ನಿಂಗ್ಸ್ : ಎಬಿ ಡಿ ವಿಲಿಯರ್ಸ್(ದಕ್ಷಿಣ ಆಫ್ರಿಕಾ)
* 20 ಇನ್ನಿಂಗ್ಸ್ : ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
* 21 ಇನ್ನಿಂಗ್ಸ್ : ಅಲೆಸ್ಟರ್ ಕುಕ್ (ಇಂಗ್ಲೆಂಡ್)
* 22 ಇನ್ನಿಂಗ್ಸ್ : ಸೌರವ್ ಗಂಗೂಲಿ

ನಾಯಕನಾಗಿ ವಿರಾಟ್ ಕೊಹ್ಲಿ ಇದೇ ಸರಣಿಯಲ್ಲಿ ರನ್ ಚೇಸಿಂಗ್ ನಲ್ಲಿ 17 ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's skipper and star batsman Virat Kohli, on Sunday (Jan 22), claimed another record under his belt to become fastest captain to score 1,000 ODI runs.
Please Wait while comments are loading...