'ಅನುಷ್ಕಾ' ಎಂದ ಪತ್ರಕರ್ತರ ಮೇಲೆ ಬ್ಯಾಟ್ ಬೀಸಿದ ಕೊಹ್ಲಿ

Subscribe to Oneindia Kannada

ನವದೆಹಲಿ, ಏಪ್ರಿಲ್, 26: ಪ್ರೀತಿ, ಪ್ರೇಮ, ಪ್ರಣಯ, ಮುನಿಸು , ಕೋಪ, ಪರಿತಾಪ ಎಲ್ಲವೂ ಎಲ್ಲರ ಬದುಕಿನಲ್ಲೂ ಸಾಮಾನ್ಯ. ಇದು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಬಿಟ್ಟಿಲ್ಲ.

ಗೆಳತಿ, ನಟಿ ಅನುಷ್ಕಾ ಶರ್ಮಾ ಅವರೊಂದಿಗಿನ ಸಂಬಂಧ ಪ್ಯಾಚ್ ಅಪ್ ಆಗಿದೆ ಎನ್ನುವ ಸುದ್ದಿಗಳ ನಡುವೆ ಮತ್ತೊಮ್ಮೆ ವಿರಾಟ್ ತಮ್ಮ ಬ್ಯಾಟ್ ಬೀಸುವ ಶೈಲಿಯಲ್ಲೇ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.[ಚಿಗುರಿತೇ ಪ್ರೇಮ! ಕೊಹ್ಲಿ ಜತೆ ಅನುಷ್ಕಾ ಸೀಕ್ರೆಟ್ ಡಿನ್ನರ್]

ಸೋಮವಾರ ಮುಂಬೈಯಲ್ಲಿ 'ವಿರಾಟ್ಸ್ ಫ್ಯಾನ್ ಬಾಕ್ಸ್' ಆಪ್ ಬಿಡುಗಡೆಯ ವೇಳೆ ಪತ್ರಕರ್ತೆಯೊಬ್ಬಳು ಕೇಳಿದ ಪ್ರಶ್ನೆಗೆ ಅಸಮಾಧಾನದಿಂದಲೇ ವಿರಾಟ್ ಉತ್ತರಿಸಿದ್ದಾರೆ. "ನನ್ನ ವೈಯಕ್ತಿಕ ಜೀವನದ ಬಗ್ಗೆ ನಿಮಗೇಕೆ ಇಷ್ಟು ಆಸಕ್ತಿ ಎನ್ನುವುದೇ ಗೊತ್ತಾಗುತ್ತಿಲ್ಲ. ಅನುಷ್ಕಾ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಬೇಡಿ, ನಾನು ಉತ್ತರಿಸುವುದಿಲ್ಲ ಎಂದು ಸಿಕ್ಸರ್ ಬಾರಿಸಿದಂತೆ ಉತ್ತರ ನೀಡಿದ್ದಾರೆ.[ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್]

ನನ್ನ ಜೀವನದ ಪ್ರತಿಯೊಂದು ಅಂಶಗಳನ್ನು ಬಿಚ್ಚಿ ಇಡಬೇಕು ಅಂಥ ಏನಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪ್ರಶ್ನೆ ಕೇಳುವುದು ಒಳಿತು ಎಂದು ಪತ್ರಕರ್ತರಿಗೆ ಸಲಹೆಯನ್ನು ನೀಡಿದ್ದಾರೆ.

ಜೋಡಿ ಹಕ್ಕಿ

ಜೋಡಿ ಹಕ್ಕಿ

ವಿರಾಟ್-ಮತ್ತು ಅನುಷ್ಕಾ ಪ್ರಣಯದ ಹಕ್ಕಿಗಳಾಗಿ ವಿಹರಿಹಿಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. 2015ರ ಏಕದಿನ ವಿಶ್ವ ಕಪ್ ವೇಳೆ ಜತೆಯಾಗಿ ಕಾಣಿಸಿಕೊಂಡಿದ್ದು, ಭಾರತ ಸೋತು ಹಿಂದಿರುಗಿದ್ದು ಎಲ್ಲ ಘಟನೆಗಳ ನಂತರ ಸೋಲಿಗೆ ಅನುಷ್ಕಾನೇ ಕಾರಣ ಎಂದು ಜನರು ಮಾತನಾಡಿಕೊಂಡಿದ್ದರು.

ಬ್ರೇಕ್ ಅಪ್ ಗೆ ಕಾರಣವೇನಾಗಿತ್ತು?

ಬ್ರೇಕ್ ಅಪ್ ಗೆ ಕಾರಣವೇನಾಗಿತ್ತು?

ಅನುಷ್ಕಾ ಸಿನಿಮಾದಲ್ಲಿ ಬ್ಯುಸಿಯಾದರೆ ಕೊಹ್ಲಿಗೆ ಒಂದರ ಹಿಂದೆ ಒಂದು ಕ್ರಿಕೆಟ್ ಸರಣಿಗಳು ಎದುರಾದವು. ಚಿಕ್ಕ ಪುಟ್ಟ ಭಿನ್ನಾಭಿಪ್ರಾಯ ಮತ್ತು ಮಾತುಕತೆ ಕೊರತೆ ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು. ಇದಕ್ಕೆ ಮಾಧ್ಯಮದವರು ವಿಶೇಷ ಒತ್ತು ನೀಡಿದ್ದು ಬ್ರೇಕ್ ಅಪ್ ಹಂತ ತಲುಪಿತು.

ಭಗ್ನ ಪ್ರೇಮಿ ಕೈಗೆ ಬ್ಯಾಟ್ ಕೊಡಬಾರದು

ಭಗ್ನ ಪ್ರೇಮಿ ಕೈಗೆ ಬ್ಯಾಟ್ ಕೊಡಬಾರದು

ಟಿ-20 ವಿಶ್ವಕಪ್ ನಲ್ಲಿ ವಿರಾಟ್ ಆಡಿದ ಇನಿಂಗ್ಸ್ ಗಳನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ "ಭಗ್ನ ಪ್ರೇಮಿ ಕೈಗೆ ಬ್ಯಾಟ್ ಕೊಡಬಾರದು" ಎಂದು ಕಮೆಂಟ್ ಮಾಡಿದ್ದರು.

ಪ್ಯಾಚ್ ಅಪ್ ಮಾಡಿದ್ದು ಯಾರು?

ಪ್ಯಾಚ್ ಅಪ್ ಮಾಡಿದ್ದು ಯಾರು?

ಪ್ರೇಮಿಗಳನ್ನು ಒಂದು ಮಾಡಿದ್ದು ಯಾರು ಎಂಬುದಕ್ಕೂ ಉತ್ತರ ಸಿಕ್ಕಿತ್ತು. ಪಾಕ್ ವಿರುದ್ಧದ ವಿಶ್ವ ಕಪ್ ಟಿ-20 ಪ೦ದ್ಯದಲ್ಲಿ ಅಮೋಘ ನಿವ೯ಹಣೆ ನೀಡಿದ್ದಕ್ಕೆ ಅಭಿನ೦ದನೆ ಸಲ್ಲಿಸುವ ಸಲುವಾಗಿ ಅನುಷ್ಕಾ, ಕೊಹ್ಲಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದುರು. ಇನ್ನೊಂದು ಕಡೆ ಅನುಷ್ಕಾ ಸಹೋದರ ಕಣೀ೯ಶ್ ಶಮ೯ ಮೂಲಕವೂ ಕೊಹ್ಲಿ ಜತೆ ಮಾತನಾಡಿದ್ದರು.

ಅನ್ ಫ್ರೆಂಡ್ ಮಾಡಿಕೊಂಡಿದ್ದರು

ಅನ್ ಫ್ರೆಂಡ್ ಮಾಡಿಕೊಂಡಿದ್ದರು

ಸಾಮಾಜಿಕ ತಾಣಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪರಸ್ಪರ ಅನ್ ಫ್ರೆಂಡ್ ಮಾಡಿಕೊಂಡಿದ್ದರು. ಅಲ್ಲದೇ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದು ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಸೀಕ್ರೆಟ್ ಡಿನ್ನರ್

ಸೀಕ್ರೆಟ್ ಡಿನ್ನರ್

ಏಪ್ರಿಲ್ ಮೊದಲ ವಾರದದಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಹಾಕ್ಸನ್ ಕ್ಲಬ್ ನಲ್ಲಿ ಕಷ್ಟ-ಸುಖಗಳನ್ನು ಮಾತನಾಡುತ್ತ ಕೊಹ್ಲಿ-ಅನುಷ್ಕಾ ಒಟ್ಟಿಗೆ ಡಿನ್ನರ್ ಮಾಡಿದ್ದರು. ಇಲ್ಲಿಗೆ ಪ್ರಣಯ ಪಕ್ಷಿಗಳು ಮತ್ತೆ ಒಂದಾಗುತ್ತಿವೆ ಎಂಬ ಸೂಚನೆಯೂ ಸಿಕ್ಕಿತ್ತು.

 ಎಂದಿಗೂ ಅನುಷ್ಕಾ ಬೈಯದ ಕೊಹ್ಲಿ

ಎಂದಿಗೂ ಅನುಷ್ಕಾ ಬೈಯದ ಕೊಹ್ಲಿ

ಇಷ್ಟೆಲ್ಲಾ ಗಾಸಿಪ್ ಮತ್ತು ಗೊಂದಲಗಳು ಉಂಟಾಗಿದ್ದರೂ ವಿರಾಟ್ ಎಂದಿಗೂ ಅನುಷ್ಕಾ ಅವರನ್ನು ಬೈದಿರಲಿಲ್ಲ. ಸದಾ ಅವರ ಪರವಾಗಿಯೇ ಮಾತನಾಡುತ್ತ ಬಂದಿದ್ದರು.

ಅಭಿಮಾನಿಗಳಿಗೆ ಇನ್ನೇನು ಬೇಕು?

ಅಭಿಮಾನಿಗಳಿಗೆ ಇನ್ನೇನು ಬೇಕು?

ಹೌದು, ವಿರಾಟ್ ಮತ್ತು ಅನುಷ್ಕಾ ಅಭಿಮಾನಿಗಳಿಗೆ ಇನ್ನೇನು ಬೇಕು. ಜೋಡಿ ಒಂದಾಗಿ ಮತ್ತೆ ವಿಹರಿಸಿದರೆ ಅವರಿಗಿಂತ ಅವರ ಅಭಿಮಾನಿಗಳೇ ಹೆಚ್ಚಿನ ಸಂತಸ ಪಡುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At the launch of Virat’s Fan Box in Mumbai on Monday, April 25, when he was asked about his patch-up with Anushka, he almost blasted at the journalist and said , "That’s for no one else to know. I wouldn’t like to comment on it." The tongue-in-cheek Virat also asked the female journalist, “How is your personal life going?” He added - Fans will get access to my personalized content but that doesn’t mean that they have access to everything that goes on in my life.
Please Wait while comments are loading...