ಕೊಹ್ಲಿ ತಂಡ ಕೆರೆಬಿಯನ್‌ನಲ್ಲಿ ಮಾಡುತ್ತಿರುವುದೇನು?

Written By:
Subscribe to Oneindia Kannada

ಬೆಂಗಳೂರು, ಜುಲೈ, 08: ಕ್ರಿಕೆಟ್ ಆಟಗಾರರು ಬ್ಯಾಟ್ ಬೀಸಿದ್ದು, ಬೌಲಿಂಗ್ ಮಾಡಿದ್ದು, ಫೀಲ್ಡಿಂಗ್ ಮಾಡಿದ್ದನ್ನು ನೋಡಿ ಆನಂದಿಸಿದವರಿಗೆ ಟೀಂ ಇಂಡಿಯಾ ಆಟಗಾರರ ಮತ್ತೊಂದು ರೂಪ ದರ್ಶನವಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲು ವಿರಾಟ್ ಕೊಹ್ಲಿ ಪಡೆ ಕೆರೆಬಿಯನ್ ಗೆ ಭೇಟಿ ನೀಡಿದ್ದು ವಿವಿಧ ಆಟಗಳಲ್ಲಿ ನಿರತವಾಗಿದೆ. ತಂಡದ ಆಟಗಾರರು ಸಮುದ್ರ ದಂಡೆಯ ಮೇಲೆ ವಾಲಿಬಾಲ್ ಆಡಿ, ಯೋಗ ಮಾಡಿದರು.[ವಿರಾಟ್ ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಶಿಖರ್ ಧವನ್, ರವೀಂದ್ರ ಜಡೇಜಾ ಸೇರಿದಂತೆ ತಂಡದ ಆಟಗಾರರು ಒಟ್ಟಾಗಿ ವಾಲಿಬಾಲ್ ಆಡಿದರು. ಯೋಗದ ವಿವಿಧ ಆಸನಗಳನ್ನು ಮಾಡಿ ಆರೋಗ್ಯದ ಗುಟ್ಟು ಅರಿತುಕೊಂಡರು. ಭಾರತದ ಆಟಗಾರರ ಯೋಗಾಭ್ಯಾಸ ಮತ್ತು ವಾಲಿಬಾಲ್ ಆಟವನ್ನು ಚಿತ್ರಗಳಲ್ಲಿ ನೋಡಿ...

ಯೋಗಾಸನ ನೋಡಿ

ಯೋಗಾಸನ ನೋಡಿ

ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಸೇರಿದಂತೆ ಆಟಗಾರರ ಯೋಗಾಸನ.

ಹೊಸ ಗುರು ಮಾರ್ಗದರ್ಶನ

ಹೊಸ ಗುರು ಮಾರ್ಗದರ್ಶನ

ಹೊಸ ಗುರು ಅನಿಲ್ ಕುಂಬ್ಳೆ ನೇತೃತ್ವದ ತಂಡ ವಿವಿಧ ಅಭ್ಯಾಸದಲ್ಲಿ ನಿರತವಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಜುಲೈ 21ರಿಂದ ಆರಂಭವಾಗಲಿದೆ.

ಕೊಹ್ಲಿಗೆ ವೆಸ್ಟ್ ಇಂಡಿಸ್ ಮೊದಲ ಅನುಭವ

ಕೊಹ್ಲಿಗೆ ವೆಸ್ಟ್ ಇಂಡಿಸ್ ಮೊದಲ ಅನುಭವ

ತಂಡದ ಮುಖ್ಯ ಕೋಚ್ ಆಗಿ ಇದು ಕುಂಬ್ಳೆಯ ಮೊದಲ ಹುದ್ದೆಯಾಗಿದ್ದು, ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕರಾಗಿ ಕೇರಿಬಿಯನ್‌ಗೆ ಮೊದಲ ಪ್ರವಾಸ ಹಮ್ಮಿಕೊಂಡಿದ್ದಾರೆ.

ಅಭ್ಯಾಸ ಪಂದ್ಯಗಳು

ಅಭ್ಯಾಸ ಪಂದ್ಯಗಳು

ಭಾರತವು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವನ್ ವಿರುದ್ಧ ಜುಲೈ 9-10ರವರೆಗೆ ಮತ್ತು ಜುಲೈ 14-16ರವರೆಗೆ ಬೆಸೆಟ್ಟೆರೆಯ ವಾರ್ನರ್ ಪಾರ್ಕ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ನಾಲ್ಕು ಟೆಸ್ಟ್ ಪಂದ್ಯ

ನಾಲ್ಕು ಟೆಸ್ಟ್ ಪಂದ್ಯ

ಸರಣಿಯಲ್ಲಿ ಭಾರತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಜುಲೈ 21ರಿಂದ 25ರವರೆಗೆ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ, ಜುಲೈ 30ರಿಂದ ಆಗಸ್ಟ್ 3ರವರೆಗೆ ಕಿಂಗ್‌ಸ್ಟನ್‌ನಲ್ಲಿ 2ನೇ ಟೆಸ್ಟ್ ಆಡಲಿದೆ.

ಇನ್ನೆರಡು ಟೆಸ್ಟ್

ಇನ್ನೆರಡು ಟೆಸ್ಟ್

ಆಗಸ್ಟ್ 9ರಿಂದ 13ರವರೆಗೆ ಗ್ರಾಸ್ ಐಲೆಟ್‌ನಲ್ಲಿ ಮೂರನೇ ಟೆಸ್ಟ್ ಹಾಗೂ ಟ್ರಿನಿಡಾಡ್‌ನಲ್ಲಿ ಆ. 18ರಿಂದ 22ರವರೆಗೆ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A day before Team India's two-day warm-up game against WICB President's XI here on July 9, Virat Kohli & Co. is enjoying the sun and sand of Caribbean beaches.The BCCI has shared images of the young Indian side led by skipper Virat Kohli, playing beach volleyball along the sandy beaches of St Kitts.
Please Wait while comments are loading...