ವಾಟ್ಸನ್ ಕೊಟ್ಟ ಸುದ್ದಿ ಕೇಳಿ ಥ್ರಿಲ್ ಆದ ಆರ್ ಸಿಬಿ ಫ್ಯಾನ್ಸ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನ 10ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಇಲ್ಲದೆ ತಂಡ ಕೊಂಚ ಮಂಕಾಗಿದೆ, ಫ್ಯಾನ್ಸ್ ಕೂಡಾ ಡಲ್ ಆಗಿದ್ದಾರೆ. ಆದರೆ, ಎಲ್ಲರು ಥ್ರಿಲ್ ಆಗುವಂಥ ಸುದ್ದಿಯನ್ನು ಹಂಗಾಮಿ ನಾಯಕ ಶೇನ್ ವಾಟ್ಸನ್ ಕೊಟ್ಟಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿಯ ನಾಯಕ ವಿರಾಟ್ ಕೊಹ್ಲಿ ಅವರು ಬಲ ಭುಜದ ಗಾಯದಿಂದ ಬಳಲುತ್ತಿದ್ದು, ಈಗ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾದ 360 ಡಿಗ್ರಿ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು ಫಿಟ್ ಆಗಿದ್ದಾರೆ. ಇಬ್ಬರು ಕೂಡಾ ಮುಂದಿನ ಪಂದ್ಯಕ್ಕೆ ಲಭ್ಯರಾಗಿದ್ದಾರೆ ಎಂಬ ಸುದ್ದಿಯನ್ನು ಶೇನ್ ವಾಟ್ಸನ್ ನೀಡಿದ್ದಾರೆ.

Virat Kohli, AB de Villiers to Return for RCB's Next Match hinst Shane Watson

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಸಂಜಯ್ ಮಂಜ್ರೇಕರ್ ಅವರು ವಾಟ್ಸನ್ ಅವರನ್ನು ಮಾತನಾಡಿಸುತ್ತಾ, ನಿಮ್ಮ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳ ಫಿಟ್ನೆಸ್ ಹೇಗಿದೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ವಾಟ್ಸನ್, ಬಹುಶಃ ಇಬ್ಬರು ಮುಂದಿನ ಪಂದ್ಯಕ್ಕೆ ಲಭ್ಯ ಎಂದರು.


ಗುಡ್ ಇದು ನಂಬಲರ್ಹವಾದ ಮೂಲದಿಂದ ಬಂದ ಸುದ್ದಿಯೇ ಎಂದು ಮಂಜ್ರೇಕರ್ ಕೇಳಿದರು. ಅದಕ್ಕೆ ವಾಟ್ಸನ್ ನಗಾಡುತ್ತಾ, ತಮ್ಮ ಮಾತನ್ನು ತಿದ್ದಲು ಯತ್ನಿಸಿದರು. ವಿಡಿಯೋದಲ್ಲಿ ನೋಡಿ..(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The stand-in captain Shane Watson hinted that the regular skipper Virat Kohli and AB de Villiers would be back in action in the next match.
Please Wait while comments are loading...