ಕೊಹ್ಲಿ -ಎಬಿಡಿ ಜೋಡಿ ಬ್ಯಾಟ್ ಮನ್- ಸೂಪರ್ ಮ್ಯಾನ್ ಇದ್ದಂತೆ!

Posted By:
Subscribe to Oneindia Kannada

ಕೋಲ್ಕತ್ತಾ, ಮೇ 17: ಕೋಲ್ಜತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೊತೆಯಾಟ ನೋಡಿ 'ಯೂನಿವರ್ಸಲ್ ಬಾಸ್' ಕ್ರಿಸ್ ಗೇಲ್ ಕೂಡಾ ಸಕತ್ ಥ್ರಿಲ್ ಆಗಿದ್ದಾರೆ. ಕೊಹ್ಲಿ-ಎಬಿಡಿ ಜೋಡಿಯನ್ನು ಬ್ಯಾಟ್ ಮನ್ -ಸೂಪರ್ ಮ್ಯಾನ್ ಜೋಡಿ ಎಂದು ಹಾಡಿ ಹೊಗಳಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಗುಜರಾತ್ ಲಯನ್ಸ್​ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿ ದಾಖಲೆಗಳನ್ನು ನುಚ್ಚುನೂರು ಮಾಡಿದ್ದ ಕೊಹ್ಲಿ ಹಾಗೂ ಎಬಿಡಿ ಹೊಂದಾಣಿಕೆ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]

ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅಜೇಯ 75ರನ್( 51ಎಸೆತ, 5X4, 3X6) ಹಾಗೂ ಎಬಿಡಿ ವಿಲಿಯರ್ಸ್ ಅಜೇಯ 59ರನ್(31ಎಸೆತ, 5X4, 3X6) ಗಳಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು.[ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೊಹ್ಲಿ !]

Virat Kohli and AB de Villiers are like 'Batman-Superman': Chris Gayle

ಇವರಿಬ್ಬರ ಆಟದ ನಡುವೆ ಕ್ರಿಸ್ ಗೇಲ್ ಕೂಡಾ ಲಯಕ್ಕೆ ಮರಳಿ ಮತ್ತೊಮ್ಮೆ ಸಿಕ್ಸರ್ ಸಿಡಿಸಲು ಆರಂಭಿಸಿರುವುದು ಆರ್ ಸಿಬಿ ಫ್ಯಾನ್ಸಿಗೆ ಥ್ರಿಲ್ ಕೊಟ್ಟಿದೆ. ಆದರೆ, ಕೊಹ್ಲಿ ಅವರ ಆಟದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ಗೇಲ್, ನಿಜಕ್ಕೂ ಆಟ ನೋಡುವುದೇ ಆನಂದ. ಎಬಿಡಿ-ಕೊಹ್ಲಿ ಇಬ್ಬರು ಇದ್ದರೆ ಆರ್ ಸಿಬಿಗೆ ಯಾವುದೇ ಭಯವಿಲ್ಲ ಎಂದಿದ್ದಾರೆ.[ಎಬಿಡಿ-ಕೊಹ್ಲಿ ನಿರ್ಮಿಸಿದ ದಾಖಲೆಗಳತ್ತ ಒಂದು ನೋಟ]

ಐಪಿಎಲ್ 9ರಲ್ಲಿ ಇಬ್ಬರು ಸೇರಿ 12 ಪಂದ್ಯಗಳಿಂದ 1,349ರನ್ ಕಲೆ ಹಾಕಿದ್ದಾರೆ. ಇದರಲ್ಲಿ 752ರನ್ ಕೊಹ್ಲಿಯವರದ್ದಾಗಿದೆ. ಎಲ್ಲಾ ಬಗೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಲೀಲಾಜಾಲವಾಗಿ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಾರೆ.

ಟಿ20 ಪಂದ್ಯದಲ್ಲಿ 229ರನ್ ಜೊತೆಯಾಟ ಎಂದರೆ ಸುಮ್ಮನೆಯಲ್ಲ. ಒತ್ತಡದ ಪರಿಸ್ಥಿತಿಯಲ್ಲಿ ಇಬ್ಬರು ಆಡುವ ರೀತಿ ಅನುಕರಣೀಯ ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ. [ಪಂದ್ಯದ ಸ್ಕೋರ್ ಕಾರ್ಡ್] | [ಅಂಕ ಪಟ್ಟಿ]

ಆರ್ ಸಿಬಿಯ ಬ್ಯಾಟ್ ಮನ್- ಸೂಪರ್ ಮ್ಯಾನ್

ಆರ್ ಸಿಬಿಯ ಬ್ಯಾಟ್ ಮನ್- ಸೂಪರ್ ಮ್ಯಾನ್

-
-
-
-
-
-
-
-
-
-
-
-
-
-

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್, ನಾಯಕ ಗೌತಮ್ ಗಂಭೀರ್ 51 ರನ್(34 ಎಸೆತ, 7X4) ಹಾಗೂ ಮನೀಷ್ ಪಾಂಡೆ 50 ರನ್(35 ಎಸೆತ, 5X4, 2X6) ಆಟದ ನೆರವಿನಿಂದ 5 ವಿಕೆಟ್​ಗೆ 183 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಆರ್ ಸಿಬಿ ತಂದ ಗೇಲ್ ಅವರ ವಿಕೆಟ್ ಕಳೆದುಕೊಂಡು 18.4 ಓವರ್ ಗಳಲ್ಲಿ 186ರನ್ ಗಳಿಸಿ ವಿಜಯೋತ್ಸವ ಆಚರಿಸಿತು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Simply blown away by their pyrotechnics, West Indies left-hander Chris Gayle compared Virat Kohli and AB de Villiers to fictional superheroes 'Batman' and 'Superman', as the duo lit up the Indian Premier League with some dazzling display of top quality batsmanship.
Please Wait while comments are loading...