ಚಿತ್ರಗಳು: ತಂದೆ ಧೋನಿಯೊಂದಿಗೆ ಮಗಳು ಝೀವಾ ತುಂಟಾಟ

Written By:
Subscribe to Oneindia Kannada

ನವದೆಹಲಿ, ಏಪ್ರಿಲ್ 16 : ತಂದೆ-ಮಗಳ ಸಂಬಂಧಕ್ಕೆ ಹೊಸ ಅರ್ಥವನ್ನು ಹುಡುಕುವ ಮಾತೆ ಇಲ್ಲ. ಅಲ್ಲೊಂದು ಉತ್ಕಟ ಪ್ರೀತಿ ಸದಾ ಮನೆ ಮಾಡಿರುತ್ತದೆ.

ಮಡಿಲಲ್ಲಿ ಮಗಳನ್ನು ಮಲಗಿಸಿಕೊಂಡಿದ್ದ ಫೋಟೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿದ್ದ ಸಾಕ್ಷಿ ಧೋನಿ ಇದೀಗ ತಂದೆ ಎಂಎಸ್ ಧೋನಿಯೊಂದಿಗೆ ಮಗಳು ಝೀವಾ ಆಡುತ್ತಿರುವ ಫೋಟೋವನ್ನು ಹಾಕಿದ್ದಾರೆ. ಚಿತ್ರ ವೈರಲ್ ಆಗಿದೆ.[ಝೀವಾ ಜತೆ ವಿರಾಟ್, ಹರ್ಭಜನ್ ಬ್ರಾವೋ ಫೋಟೋ]

ms dhoni

ಧೋನಿ ಮಲಗಿಕೊಂಡಿದ್ದರೆ ಪುತ್ರಿ ಝಿವಾ ಅಪ್ಪನ ತಲೆ ಮೇಲೆ ಕೈಹಾಡಿಸುತ್ತಾ ಆಟವಾಡಿದ್ದಾಳೆ. " ಡ್ಯಾಡಿ ಇನ್ನೊಂದು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿರಿ" ಎಂದು ಹೇಳುತ್ತಿದ್ದಾಳೆನೋ?

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೈ ಲೈಫ್ ಎಂದು ಟ್ವೀಟ್ ಮಾಡಿರುವ ಸಾಕ್ಷಿ ಹಿಂದೆಯೂ ಸಹ ಮಗಳ ಫೋಟೋವನ್ನು ಹಂಚಿಕೊಂಡಿದ್ದರು. ಐಪಿಎಲ್ 9 ನೇ ಆವೃತ್ತಿಯಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಎಂಎಸ್ ಮುನ್ನಡೆಸುತ್ತಿದ್ದಾರೆ.[ವಿಡಿಯೋ: ಗೇಲ್‌ರೊಂದಿಗೆ ಇಂಜಿ ಹುಡುಗರ ಡ್ಯಾನ್ಸ್..ಡ್ಯಾನ್ಸ್]

ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಸ್ಥಾನಕ್ಕೆ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ ನಂತರಸಾಕ್ಷಿ ಧೋನಿ ಕೂಡ ಆಮ್ರಪಾಲಿ ನಿರ್ದೇಶಕರುಗಳ ಮಂಡಳಿ ಸ್ಥಾನ ತ್ಯಜಿಸಿ ಹೊರಬಂದಿದ್ದಾರೆ. ಆಮ್ರಪಾಲಿ ಗ್ರೂಪ್ ನಡೆಸುತ್ತಿರುವ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಧೋನಿ ರಾಯಭಾರಿಯಾಗಿದ್ದರು. ಸಾಕ್ಷಿ ನಿರ್ದೇಶಕರ ಮಂಡಳಿಯಲ್ಲಿ ಸದಸ್ಯೆಯಾಗಿದ್ದರು.

ಮಹೇಂದ್ರ ಸಿಂಗ್ ಧೋನಿಯೊಂದಿಗೆ ಮಗಳ ಆಟದ ನೋಟವನ್ನು ನೋಡಿಕೊಂಡು ಬನ್ನಿ.....

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Days after she shared an adorable 'sleepy-eyed' image of her daughter Ziva, Sakshi Dhoni has shared another picture on Twitter which is going viral over social media.
Please Wait while comments are loading...