ಸಚಿನ್ ಗಿಂತ ಕಾಂಬ್ಳಿ ಹೆಚ್ಚು ಪ್ರತಿಭಾವಂತ: ಕಪಿಲ್ ದೇವ್

Posted By:
Subscribe to Oneindia Kannada

ಮುಂಬೈ, ಮೇ 09: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತ ಅವರ ಗೆಳೆಯ ವಿನೋದ್ ಕಾಂಬ್ಳಿ ಹೆಚ್ಚು ಪ್ರತಿಭಾವಂತ ಎಂದು ಮಾಜಿ ಕ್ರಿಕೆಟರ್ ಕಪಿಲ್ ದೇವ್ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ಸಚಿನ್ ಹಾಗೂ ವಿನೋದ್ ಒಂದೇ ಕಾಲ ಘಟ್ಟದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಆದರೆ, ಸಚಿನ್​ ಅವರಿಗೆ ಸಿಕ್ಕ ಅವಕಾಶ, ಪ್ರೋತ್ಸಾಹ, ವಿನೋದ್ ಕಾಂಬ್ಳಿಗೆ ಸಿಕ್ಕಿರಲಿಲ್ಲ. [ಸಚಿನ್ ಬಗ್ಗೆ ಮಾತಾಡಿದ ಕಾಂಬ್ಳಿಗೆ ಟ್ವೀಟ್ ಟಾಂಗ್!]

ನಮ್ಮಲ್ಲಿ ಅನೇಕ ಪ್ರತಿಭೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗುವುದಿಲ್ಲ, ಇದಕ್ಕೆ ಅವರ ಸುತ್ತಮುತ್ತಲಿನ ವಾತಾವರಣ, ಕುಟುಂಬದ ಬೆಂಬಲ, ಸ್ನೇಹಿತರು, ಕೋಚ್ ಎಲ್ಲರೂ ಕಾರಣರಾಗುತ್ತಾರೆ. ಸಚಿನ್ ಹಾಗೂ ಕಾಂಬ್ಳಿ ಅವರ ವೃತ್ತಿ ಬದುಕನ್ನು ಗಮನಿಸಿದರೆ ಪರಸ್ಪರ ವಿರುದ್ಧವಾಗಿದ್ದು, ಸಚಿನ್ ಅವರಿಗೆ ಸೂಕ್ತ ಅವಕಾಶ ಸಿಕ್ಕಿದ್ದರಿಂದ ಅವರು ಸುಧೀರ್ಘವಾಗಿ 21 ವರ್ಷಗಳ ಕಾಲ ಕ್ರಿಕೆಟ್ ಜೀವನ ನಡೆಸಿದರು ಎಂದು ಮಾಜಿ ನಾಯಕ ಕಪಿಲ್ ಹೇಳಿದ್ದಾರೆ. [ಕ್ರಿಕೆಟ್ ದೇವರ ಮೆಚ್ಚುಗೆ ಪಡೆಯುವಲ್ಲಿ ಸೋತ ಕಪಿಲ್]

Kambli was more talented than Tendulkar, says Kapil Dev

ಸಚಿನ್ ಹಾಗೂ ಕಾಂಬ್ಳಿ ಅವರು ಸಹಪಾಠಿಗಳಾಗಿ ಶಾಲಾ ದಿನಗಳಲ್ಲಿ ದಾಖಲೆಗಳನ್ನು ಬರೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಕಾಂಬ್ಳಿ ಅವರು ಟೀಂ ಇಂಡಿಯಾ ಪರ 104 ಏಕದಿನ ಪಂದ್ಯ ಆಡಿದ್ದು 2,477 ರನ್ ಪೇರಿಸಿದ್ದಾರೆ. 17 ಟೆಸ್ಟ್ ಪಂದ್ಯದಲ್ಲಿ 1084 ರನ್ ಗಳಿಸಿದ್ದಾರೆ.. ಶ್ರೀಲಂಕಾ ವಿರುದ್ಧ ಅಕ್ಟೋಬರ್ 29, 2000ರಲ್ಲಿ ತಮ್ಮ ಕೊನೆ ಪಂದ್ಯವನ್ನಾಡಿದರು. [ಸಚಿನ್ ಕೆಪಾಸಿಟಿ ಬಗ್ಗೆ ಕೊಂಕು ನುಡಿದ ಕಪಿಲ್]

ಸಚಿನ್ ಅವರಿಗೆ ದ್ವಿಶತಕ, ತ್ರಿಶತಕ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸುವ ಸಾಮರ್ಥ್ಯವಿದ್ದರೂ ಹೇಗೆ ಗುರಿ ಮುಟ್ಟಬೇಕು ಎಂಬುದು ತಿಳಿದಿರಲಿಲ್ಲ ಎಂದಿದ್ದಾರೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಬೇಡಿ. ಸಚಿನ್ ಗೆ ಅಗಾಧ ಪ್ರತಿಭೆ ಇತ್ತು. ಅದರೆ, ಪ್ರತಿಭೆಗೆ ತಕ್ಕ ನ್ಯಾಯ ಒದಗಿಸಲಿಲ್ಲ. ಆತ ಈಗ ಗಳಿಸಿರುವ ಹೆಸರು, ದಾಖಲೆಗಿಂತ ಹೆಚ್ಚಿನ ಪ್ರಮಾಣದ ಗುರಿ ಮುಟ್ಟಬಹುದಾಗಿತ್ತು ಎಂದು ನನಗೆ ಯಾವಾಗಲೂ ಅಂದುಕೊಳ್ಳುತ್ತಿದ್ದೆ ಎಂದು ಕಪಿಲ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಸಚಿನ್, ರಿಚರ್ಡ್ಸ್,ಲಾರಾಗಿಂತ ಕೊಹ್ಲಿ ಬೆಸ್ಟ್: ಕಪಿಲ್]

ಸಚಿನ್ ಅವರ ಪ್ರತಿಭೆ ಬಗ್ಗೆ ಎದುರಾಳಿಗೆ ತಂಡಕ್ಕೆ ಗೌರವವಿತ್ತೇ ಹೊರತೂ ಯಾರಿಗೂ ಭೀತಿ ಹುಟ್ಟುತ್ತಿರಲಿಲ್ಲ. ನಾನು ಸಚಿನ್ ಗೆ ಸೆಹ್ವಾಗ್ ಹಾಗೂ ರಿಚರ್ಡ್ಸ್ ರೀತಿ ಬ್ಯಾಟ್ ಮಾಡಲು ಹೇಳುತ್ತಿದ್ದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Comparing batting maestro Sachin Tendulkar and his fellow teammate and childhood friend Vinod Kambli, former captain Kapil Dev said the latter was more talented but failed to reach the top because of a lack of good support system.
Please Wait while comments are loading...