ಪಾಕಿಸ್ತಾನ ತಂಡದ ಕೋಚ್ ಆಗಲು ರೆಡಿ ಎಂದ ಕಾಂಬ್ಳಿ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 07 : ಪಾಕಿಸ್ತಾನ ಮತ್ತು ಭಾರತ ಈ ಎರಡು ರಾಷ್ಟ್ರಗಳ ನಡುವೆ ಹಾವು ಮುಂಗಸಿಯಂತೆ ಕಾದಾಡುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ, ಪಾಕ್ ಕ್ರಿಕೆಟ್ ತಂಡದ ಕೋಚ್ ಆಗಲು ಒಲವು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತ ಪ್ರಧಾನಿ ನರೆಂದ್ರ ಮೋದಿ ಅವರು ಪಾಕ್ ವಿದೇಶಾಂಗ ಸಚಿವರೊಬ್ಬರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೌದು ವಿಶ್ವ ಟಿ20 ಟೂರ್ನಿಯಲ್ಲಿ ಕಳೆಪೆ ಪ್ರದರ್ಶನದಿಂದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಹಿದ್ ಅಫ್ರಿದಿ ಸ್ಥಾನಕ್ಕೆ ಸರ್ಫಾಜ್ ಅಹ್ಮದ್ ನೇಮಕಗೊಂಡಿದ್ದಾರೆ. ವಾಕರ್ ಯೂನಿಸ್ ಸಹ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರಿಂದ ಪಾಕ್ ಕ್ರಿಕೆಟ್ ಕೋಚ್ ಸ್ಥಾನವನ್ನು ತುಂಬಲು ಪಿಸಿಬಿ ಕಸರತ್ತು ನಡೆಸಿದೆ.

Vinod Kambli Troll Pakistan Team Coach appointment PCB

ಪಾಕ್ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅರ್ಹರು ಬೇಕಾಗಿದ್ದಾರೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಟ್ವಿಟ್ಟರ್ ಮೂಲಕ ಜಾಹೀರಾತು ಪ್ರಕಟಿಸಿದೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳೆ ನಾನು ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲು ಸಿದ್ದ ಎಂದು ಪಾಕ್ ಪತ್ರಕರ್ತ ಅಸಮ್ ಶಿರಾಜ್ ಅವರಿಗೆ ಟ್ವಿಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಾರತ ಟೆನಿಸ್ ತಾರೆ ಸಾನೀಯಾ ಮಿರ್ಜಾ ಅವರು ಪಾಕಿಸ್ಥಾನ ಕ್ರಿಕೆಟ್ ತಂಡ ಆಟಗಾರ ಶೋಯಬ್ ಮಲಿಕ್ ರನ್ನು ವಿವಾಹವಾಗಿದ್ದರಿಂದ ಅವರು ಭಾರತ ಪರ ಟೆನಿಸ್ ಆಡುವುದು ಬೇಡ ಎಮದು ಸಾನೀಯಾ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗಿದ್ದವು.

ಆದರೆ, ಈಗ ವಿನೋದ್ ಕಾಂಬ್ಳೆ ನಾನು ಪಾಕ್ ಕೋಚ್ ಹುದ್ದೆಯ ಜವಬ್ದಾರಿಯನ್ನು ಹೊರಲು ಸಿದ್ದನಾಗಿದ್ದೇನೆಂದು ಟ್ವಿಟ್ಟರ್ ಮೂಲಕ ಕೊಂಚ ಸೀರಿಯಸ್ ಆಗಿ ತಮಾಷೆ ಸಂದೇಶವನ್ನು ರವಾನಿಸಿದ್ದಾರೆ. ಕಾಂಬ್ಳೀ ತಮಾಷೆ ಅರ್ಥವಾಗದಿದ್ದರೆ ಭಾರತದಲ್ಲಿ ವಿರೋಧಗಳು ವ್ಯಕ್ತವಾದರೂ ಅಚ್ಚರಿ ಪಡಬೇಕಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Cricketer Kambli tweeted to Asma Shiraz, a Pakistani journalist that he is ready to fill in Waqar's boots as Pakistan team coach. "@asmashirazi. SalamAlekhum Asma ji.I heard PCB is looking for a Head coach .I am " Available"," read his post on twitter.
Please Wait while comments are loading...