ಲಂಡನ್ನಿನಲ್ಲಿ ಮಗನ ಜತೆ ಮಲ್ಯ, ವಿಡಿಯೋ ಟ್ರೆಂಡಿಂಗ್

Posted By:
Subscribe to Oneindia Kannada

ಲಂಡನ್, ಜೂನ್ 01: ಮನಿಲಾಂಡ್ರಿಂಗ್, ಸಾಲದ ಸುಳಿಯಲ್ಲಿ ಸಿಲುಕಿ ದೇಶ ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್ನಿನಲ್ಲೇ ನೆಲೆಸಿದ್ದಾರೆ ಎಂಬುದಕ್ಕೆ ಮತ್ತೆ ಪುರಾವೆ ಸಿಕ್ಕಿದೆ. ಮಗ ಸಿದ್ಧಾರ್ಥ್ ಜತೆ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ವಿಡಿಯೋ ಈಗಲೂ ಸಾಮಾಜಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. [2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

ಒಂದು ಕಾಲದಲ್ಲಿ ಅರ್​ಸಿಬಿ ಪ್ರತಿ ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸಿ ಹುರಿದುಂಬಿಸುತ್ತಿದ್ದ ಅಪ್ಪ ಮಗ ಈಗ ದೂರದ ದೇಶದಲ್ಲಿ ಕುಳಿತು ಅಭಿಮಾನಿಗಳಂತೆ 'ಚಿಯರ್' ಮಾಡಿದ್ದಾರೆ.

Vijay Mallya enjoyes IPL 9 final with son Siddharth in London

ಮಲ್ಯ ಅವರು ಆರ್ ಸಿಬಿ ತೊರೆದ ಮೇಲೆ ಆರ್ ಸಿಬಿ ಲಕ್ ತಿರುಗಿದೆ ಈ ಬಾರಿ ಫೈನಲ್ ಗೆಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಸನ್​ರೈಸರ್ ವಿರುದ್ಧದ ಫೈನಲ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿರುವುದು ಈಗ ಇತಿಹಾಸ.[ಆರ್ ಸಿಬಿ ಮಣಿಸಿ ಕಪ್ ಎತ್ತಿದ ವಾರ್ನರ್ ಪಡೆ]

9,600 ಕೋಟಿ ರು ಗೂ ಅಧಿಕ ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯ ಅವರು ಮಾರ್ಚ್ 2 ರಂದೇ ಭಾರತ ಬಿಟ್ಟು ಲಂಡನ್ನಿಗೆ ಹಾರಿದ್ದಾರೆ. ರೆಡ್ ಕಾರ್ನರ್ ನೋಟಿಸ್, ಸಮನ್ಸ್ ಬಂದರೂ ಧೃತಿಗೆಟ್ಟಿಲ್ಲ, ಇಂಗ್ಲೆಂಡ್ ಕೂಡಾ ಮಲ್ಯರನ್ನು ಗಡಿಪಾರು ಮಾಡುವುದಿಲ್ಲ ಎಂದಿದೆ. ಹೀಗಾಗಿ ಯಾವುದೇ ಚಿಂತೆ ಇಲ್ಲದೆ ಎಫ್ 1 ರೇಸ್, ಐಪಿಎಲ್ ಫೈನಲ್ ವೀಕ್ಷಣೆ ಮಾಡಿ ಮಲ್ಯ ಎಂಜಾಯ್ ಮಾಡಿದ್ದಾರೆ. [ಯಾರಿಗೆ ಯಾವ ಪ್ರಶಸ್ತಿ, ಕಿರೀಟ, ಪುರಸ್ಕಾರ]

ಮಲ್ಯ ಹಾಗೂ ಇತರೆ ಆಪ್ತರೊಂದಿಗೆ ಐಪಿಎಲ್ 2016 ಫೈನಲ್ ವೀಕ್ಷಣೆ ಮಾಡಿದ್ದರ ಬಗ್ಗೆ ಸಿದ್ ಮಲ್ಯ ವಿಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು ಈ ಸಮಯಕ್ಕೆ 155K views, 719 ಹಂಚಿಕೆ, 5.3K ಲೈಕ್ಸ್ ಬಂದಿದೆ. ಇನ್ನೂ ಕಾಮೆಂಟ್ ಗಳು ಬರುತ್ತಿವೆ. ಮೊನಾಕೊ ಎಫ್ 1 ಗ್ರಾಂಡ್ ಪ್ರೀನಲ್ಲಿ ಫೋರ್ಸ್ ಇಂಡಿಯಾ ಮೂರನೇ ಸ್ಥಾನ ಪಡೆದಿದ್ದು, ಮಲ್ಯ ಅವರಿಗೆ ಸಂತಸ ತಂದರೆ, ಆರ್ ಸಿಬಿ ಸೋಲು ಕಹಿ ನೀಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijay Mallya had good time with son Siddharth on Sunday(May 29) at London, as the duo along with several others watched the Indian Premier League (IPL) final between Royal Challengers Bangalore (RCB) and Sunrisers Hyderabad.
Please Wait while comments are loading...