ವಿಜಯ್ ಹಜಾರೆ ಟ್ರೋಫಿ: ಫೈನಲ್, ಸೆಮಿಫೈನಲ್ ಪಂದ್ಯ ಮುಂದೂಡಿಕೆ

Posted By:
Subscribe to Oneindia Kannada

ನವದೆಹಲಿ, ಮಾರ್ಚ್. 17 : ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಹ ಆಟಗಾರರು ತಂಗಿದ್ದ ದೆಹಲಿಯ ಹೊಟೇಲ್ ವೊಂದರಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದರಿಂದ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿ) ಮುಂದೂಡಿದೆ.

ಮಾರ್ಚ್ 17ರಂದು ಬಂಗಾಳ ಮತ್ತು ಜಾರ್ಖಾಂಡ್ ನಡುವಣ ಸೆಮಿಫೈನಲ್ ಪಂದ್ಯ ನಡೆಯಬೇಕಿದ್ದರಿಂದ ಉಭಯ ತಂಡಗಳು ಹೋಟೆಲ್ ನಲ್ಲಿ ತಂಗಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಹಿನ್ನಲೆಯಲ್ಲಿ ಪಂದ್ಯವನ್ನು ಮಾರ್ಚ್ 18 ಫಿರೋಷಾ ಕೊಟ್ಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿ ತಿಳಿಸಿದೆ.[ಧೋನಿ ತಂಗಿದ್ದ ದೆಹಲಿ ಹೊಟೇಲ್ ನಲ್ಲಿ ಬೆಂಕಿ ಅನಾಹುತ]

Vijay Hazare Trophy semi-final and final rescheduled, after fire at Jharkhand team's hotel

ಮಾರ್ಚ್ 19ರಂದು ನಡೆಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯವನ್ನು ಮಾರ್ಚ್ 20 ಸೋಮವಾರದಂದು ದೆಹಲಿಯ ಫಿರೋಷಾ ಕೊಟ್ಲಾ ಮೈದಾನದಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

ಈ ಅವಘಡದಿಂದ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಪ್ರಸ್ತುತ ಆಟಗಾರರನ್ನು ಬೇರೆ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) on Friday (March 17) rescheduled the second semi-final of Vijay Hazare Trophy between Jharkhand and Bengal and the final due to a fire accident in a Delhi hotel.
Please Wait while comments are loading...