ಸ್ಟಾರ್ ಕ್ರಿಕೆಟರ್ಸ್ ನಿಂದ ಅಮ್ಮನಿಗಾಗಿ ವಿಡಿಯೋ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ಕ್ರಿಕೆಟ್ ಸ್ಟಾರ್ ಗಳನ್ನು ಬಳಸಿಕೊಂಡು ಸ್ಟಾರ್ ಇಂಡಿಯಾದವರು ವಿಶಿಷ್ಟವಾದ ವಿಡಿಯೋ ಅಭಿಯಾನ ಆರಂಭಿಸಿದೆ. ಈ ಮೂಲಕ ಕ್ರಿಕೆಟರ್ಸ್ 'ಅಮ್ಮನಿಗೆ ವಿಶೇಷ ಗೌರವ' ಸಲ್ಲಿಸಿದ್ದಾರೆ.

ಕ್ರಿಕೆಟ್ ತಾರೆಯರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರು ತಮ್ಮ ಸರ್ ನೇಮ್ ಬಿಟ್ಟು ಮದರ್ ನೇಮ್ ಮುಂದಿಟ್ಟುಕೊಂಡು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಇಂಡಿಯಾ ಅಭಿಯಾನದ ವಿಡಿಯೋದಲ್ಲಿ ತಮ್ಮ ತಾಯಿ ಹೆಸರಿನ ಜರ್ಸಿ ತೊಟ್ಟಿದ್ದಾರೆ.

'ಎಂಎಸ್ ಧೋನಿ: ದಿ ಅನ್​ಟೋಲ್ಡ್ ಸ್ಟೋರಿ' ಸಿನಿಮಾದಲ್ಲಿ ಎಂಎಸ್ ಧೋನಿ ಅವರ ತಾಯಿ ದೇವಕಿ ಅವರು ತಮ್ಮ ಮಗನ ಕ್ರೀಡಾಬದುಕಿನ ಸಾಧನೆಗೆ ಬೆಂಬಲವಾಗಿ ನಿಂತಿದ್ದನ್ನು ಕಾಣಬಹುದು.

ವಿರಾಟ್ ಕೊಹ್ಲಿ ಅವರ ತಾಯಿ ಸರೋಜ್ ಅವರ ಜತೆ ಈ ಹಿಂದೆ ಮಹಿಳಾ ದಿನಾಚರಣೆಯಂದು ಸೆಲ್ಫಿ ಫೋಟೊ ಹಾಕಿ ತಾಯಿಯ ಮಹತ್ವ ಸಾರಿದ್ದರು. ಸರೋಜ್ ಅವರು ಪತಿಯ ಅಕಾಲಿಕ ನಿಧನದ ನಡುವೆಯೂ ಮಗನ ಕ್ರಿಕೆಟ್ ವೃತ್ತಿ ಬದುಕು ರೂಪಿಸಲು ಶ್ರಮಿಸಿದರು.

ಸ್ಟಾರ್ ಪ್ಲಸ್ ನ ನಯೀ ಸೋಚ್ ಅಭಿಯಾನ

ಸ್ಟಾರ್ ಪ್ಲಸ್ ನ ನಯೀ ಸೋಚ್ ಅಭಿಯಾನ

ಮಹಿಳಾ ಪರ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿರುವ ‘ಸ್ಟಾರ್ ಪ್ಲಸ್' ಚಾನಲ್​ನ ‘ನಯೀ ಸೋಚ್' ಅಭಿಯಾನದಲ್ಲಿ ಕ್ರಿಕೆಟಿಗರ ತಾಯಿಯ ಕೊಡುಗೆಗಳನ್ನು ತೋರಿಸಲಾಗಿದೆ.

ರಹಾನೆ ತಾಯಿ ಸುಜಾತಾ

ಇನ್ನು ರಹಾನೆ ತಾಯಿ ಸುಜಾತಾ ತಮ್ಮ ಮಗನ ಬಾಲ್ಯದಲ್ಲಿ ಕಿಟ್​ಬ್ಯಾಗ್ ಕೂಡ ಹೊತ್ತುಕೊಳ್ಳುವ ಮೂಲಕ ಬೆಂಬಲ ಕೊಟ್ಟವರಾಗಿದ್ದಾರೆ. ಈ ವಿಡಿಯೋ 2,088,140 ಬಾರಿ ವೀಕ್ಷಣೆ ಪಡೆದುಕೊಂಡಿದೆ.

ದೇವಕಿ ಸುತ ಧೋನಿ

ಧೋನಿ, ಕೊಹ್ಲಿ, ರಹಾನೆ ತಮ್ಮ ಹೆಸರಿಗೆ ಬದಲಾಗಿ ಹೆಮ್ಮೆಯಿಂದ ಕ್ರಮವಾಗಿ ದೇವಕಿ, ಸರೋಜ್, ಸುಜಾತಾ ಎಂದು ತಾಯಿಯ ಹೆಸರಿರುವ ಜೆರ್ಸಿಯೊಂದಿಗೆ ಫೋಸ್ ನೀಡಿದ್ದಾರೆ. 2,972,209 ವೀಕ್ಷಣೆಯನ್ನು ಧೋನಿ ಅವರ ವಿಡಿಯೋ ಪಡೆದುಕೊಂಡಿದೆ.

ನನ್ನ ಜರ್ಸಿ ಮೇಲೆ ಯಾರ ಹೆಸರಿದೆ ಗೊತ್ತಾ

ನನ್ನ ಜರ್ಸಿ ಮೇಲೆ ಯಾರ ಹೆಸರಿದೆ ಗೊತ್ತಾ? ನಾನು ಇವತ್ತು ಏನು ಆಗಿದ್ದೇನೋ ಅದಕ್ಕೆ ನನ್ನ ತಾಯಿ ಕಾರಣ. ನನ್ನ ವ್ಯಕ್ತಿತ್ವಕ್ಕೆ ನನ್ನ ತಂದೆ ಜತೆಗೆ ತಾಯಿ ಸರೋಜ್ ಕೂಡಾ ಕಾರಣ, ನಾನು ಸರೋಜ್ ಅವರ ಮಗ ಕೊಹ್ಲಿ ಎಂದು ಹೇಳುವ ವಿರಾಟ್ ಕೊಹ್ಲಿ ಅವರ ವಿಡಿಯೋ 2,819,201 ಬಾರಿ ವೀಕ್ಷಣೆ ಪಡೆದುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English:
English summary
Indian cricketers Mahendra Singh Dhoni, Virat Kohli and Ajinkya Rahane are making their mothers proud during the One Day International series against New Zealand, in a new campaign.
Please Wait while comments are loading...