ಧೋನಿ- ಯುವಿ ವಿಡಿಯೋ- ಇಂಡೋ ಪಾಕ್ ಅಣ್ಣ ತಂಗಿ ಟ್ವೀಟ್ಸ್

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಎಂಎಸ್ ಧೋನಿ ತಮ್ಮ ನಾಯಕತ್ವದ ಕೊನೆಯ ಪಂದ್ಯದ ಬಳಿಕ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್- ಧೋನಿ ಜತಗೂಡಿ ತಮ್ಮ 10 ವರ್ಷದ ಕ್ರಿಕೆಟ್ ಬದುಕು ಮತ್ತು ಸ್ನೇಹದ ಕುರಿತು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಟ್ವೀಟ್ ನಡುವೆ ಇಂಡೋ ಪಾಕ್ ಅಣ್ಣ ತಂಗಿ ಟ್ವೀ ಕುತೂಹಲ ಕೆರಳಿಸಿದೆ.

ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಎ ತಂಡವನ್ನು ಮುನ್ನಡೆ ಸಿದ ಧೋನಿ, ಗೆಲುವಿನ ವಿದಾಯ ಪಡೆಯಲು ವಿಫಲರಾದರು. ಆ ಬಳಿಕ ಯುವರಾಜ್ ಸಿಂಗ್ ಜತೆ ಧೋನಿ ವಿಡಿಯೋ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದು, ಸಿಕ್ಸರ್ ಸಿಡಿಸುವಂಥ ಎಸೆತಗಳು ಸಿಕ್ಕಲ್ಲಿ ಇನ್ನು ಮುಂದೆ ಅವು ಖಂಡಿತವಾಗಿಯೂ ಸಿಕ್ಸರ್​ಗಳಾಗುತ್ತವೆ ಎಂದು ಹೇಳಿದ್ದರು.[ಇಂಗ್ಲೆಂಡ್ ಸರಣಿಗಾಗಿ ಟೀಂ ಇಂಡಿಯಾಕ್ಕೆ ಸಿಕ್ತು ಸೂಪರ್ ಜರ್ಸಿ!]

'ನಾನು ಎಣಿಸಿದ್ದ ಸ್ಥಳದಲ್ಲಿ ಚೆಂಡನ್ನು ಎಸೆದಲ್ಲಿ ಹಾಗೂ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಅಂಥ ಎಸೆತಗಳು ಸಿಕ್ಸರ್​ಗಳಾಗಲಿವೆ' ಎಂದು ಧೋನಿ ಹೇಳಿದರು, ಬಳಿಕ ನಮ್ಮ ನಾಯಕತ್ವದ ಅವಧಿಯ ಬಗ್ಗೆ ಧೋನಿ ಮಾತನಾಡಿದರು. ಈ ನಡುವೆ ಧೋನಿ ನಮಗೆ ಬೇಕು ಎಂದು ಪಾಕಿಸ್ತಾನಿ ಅಭಿಮಾನಿಯೊಬ್ಬ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.

ಈ ಪ್ರಯಾಣ ಅದ್ಭುತ ಹಾಗೂ ಅಮೋಘ

ಈ ಪ್ರಯಾಣ ಅದ್ಭುತ ಹಾಗೂ ಅಮೋಘ

ಈ ಪ್ರಯಾಣ ಅದ್ಭುತ ಹಾಗೂ ಅಮೋಘವಾಗಿತ್ತು. ನಿಮ್ಮಂಥ ಆಟಗಾರರು ಇದ್ದ ಕಾರಣ ನನ್ನ ಕೆಲಸ ಇನ್ನಷ್ಟು ಸುಲಭವಾಯಿತು. 10 ವರ್ಷದ ಅವಧಿಯನ್ನು ಸಂಭ್ರಮಿಸಿದ್ದೇನೆ. ಮುಂದಿನ ದಿನಗಳನ್ನೂ ಸಂಭ್ರಮದಿಂದ ಕಳೆಯುವ ವಿಶ್ವಾಸವಿದೆ' ಎಂದರು.

 ಧೋನಿ ನಾನ್ ಸ್ಟ್ರೈಕರ್​

ಧೋನಿ ನಾನ್ ಸ್ಟ್ರೈಕರ್​

ಚೊಚ್ಚಲ ಆವೃತ್ತಿಯ ವಿಶ್ವ ಟಿ20ಯಲ್ಲಿ ಯುವರಾಜ್ ಅವರು 6 ಎಸೆತಗಳಲ್ಲಿ 6 ಸಿಕ್ಸರ್​ ಬಾರಿಸಿದ್ದರ ಬಗ್ಗೆ ಧೋನಿ ಮಾತನಾಡಿದರು. 'ಅತ್ಯುತ್ತಮ ಸ್ಥಳದಲ್ಲಿ ನಿಂತು, ನೀವು 6 ಬಾಲ್​ಗೆ 6 ಸಿಕ್ಸರ್ ಸಿಡಿಸಿದ್ದಕ್ಕೆ ಸಾಕ್ಷಿಯಾಗಿದ್ದೇನೆ. ಅದಕ್ಕೆ ನಿಮಗೆ ಥ್ಯಾಂಕ್ಸ್' ಎಂದರು. ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ ಯುವರಾಜ್ ಅಬ್ಬರಿಸಿದ್ದಾಗ ಧೋನಿ ನಾನ್ ಸ್ಟ್ರೈಕರ್​ನಲ್ಲಿದ್ದರು.

ಧೋನಿಗೆ ಪ್ರಶ್ನೆ ಹಾಕಿದ ಯುವಿ

ಮೂರು ಪ್ರಮುಖ ಟೂರ್ನಿ ಗೆದ್ದಿರುವ ಧೋನಿಯನ್ನು ಪರಿಚಯಿಸುವ ಬದಲು ಹಳೆ ಧೋನಿ ಪರಿಚಯಿಸುವೆ ಎಂದು ಯುವರಾಜ್ ಟ್ವೀಟ್

ಪಾಕಿಸ್ತಾನಕ್ಕೆ ಧೋನಿ ಬೇಕಾಗಿದ್ದಾರೆ

ಪಾಕಿಸ್ತಾನಕ್ಕೆ ಧೋನಿ ಬೇಕಾಗಿದ್ದಾರೆ, ದಯವಿಟ್ಟು ಕಳಿಸಿಕೊಡಿ ಎಂದ ಅಭಿಮಾನಿ.

ಕ್ಷಮಿಸಿ ಅಣ್ಣ ಧೋನಿ ಕಳಿಸಲ್ಲ

ಕ್ಷಮಿಸಿ ಅಣ್ಣ ಧೋನಿ ಕಳಿಸಲ್ಲ, ನಮಗೆ ಧೋನಿ ಈ ಹಿಂದೆಗಿಂತ ಹೆಚ್ಚು ಅಗತ್ಯವಿದೆ ಎಂದ ಭಾರತೀಯ ಟ್ವೀಟರ್.

ಧೋನಿ ಕೊಡಿ ಎಂದ ಪಾಕಿಸ್ತಾನಿ

ನಿಮಗಾಗಿ ಕೊಹ್ಲಿ ಇದ್ದಾರೆ, ನಮಗೆ ಧೋನಿ ಕೊಡಿ, ನೆರೆಯವರಿಗೆ ನೆರವಾಗಿ ಎಂದ ಪಾಕಿಸ್ತಾನಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
They have seen several highs and lows in their international careers as team-mates. They have mutual respect for each other. It was again on view as one of them turned an interviewer.
Please Wait while comments are loading...