ಕ್ಯಾಪ್ಟನ್ ಕೂಲ್ ಧೋನಿ ಧೋತಿ ಡ್ಯಾನ್ಸ್ ವಿಡಿಯೋ

Posted By:
Subscribe to Oneindia Kannada

ಬೆಂಗಳೂರು, ಜ. 11: ಟೀಂ ಇಂಡಿಯಾದ ಏಕದಿನ ಅಂತಾರಾಷ್ಟ್ರೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಆಸ್ಟ್ರೇಲಿಯಾ ಸರಣಿಗೆ ಪೂರ್ವ ತಯಾರಿ ನಡೆಸಿರುವ ಬಗ್ಗೆ ಸಾಕಷ್ಟು ಕುತೂಹಲ ಎಲ್ಲರಲ್ಲೂ ಇದೆ. ಹೊಸ ಕೇಶವಿನ್ಯಾಸದ ವಿಡಿಯೋಗಳು ನೋಡಿರಬಹುದು. ಈಗ ಜನವರಿ 12ರಿಂದ ಆರಂಭವಾಗಲಿರುವ 5 ಏಕದಿನ ಪಂದ್ಯಗಳ ಸರಣಿಗಾಗಿ ಧೋನಿ ಹೊಸ ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ.

'ಕ್ಯಾಪ್ಟನ್ ಕೂಲ್' ಧೋನಿ ಅವರು ಆನ್ ಅಂಡ್ ಆಫ್ ದಿ ಫೀಲ್ಡ್ ನಿರ್ಭಾವುಕರಾಗಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಸ್ಟೈಲ್ ಡ್ಯಾನ್ಸ್ ಮಾಡುವುದರಲ್ಲಿ ಧೋನಿ ಯಾರಿಗೇನು ಕಮ್ಮಿ ಇಲ್ಲ. ಹೊಚ್ಚ ಹೊಸ ಟಿವಿ ಜಾಹೀರಾತಿನಲ್ಲಿ ಧೋತಿ ಉಟ್ಟ ಧೋನಿ ಅವರು ಜನಪ್ರಿಯ ಡ್ಯಾನ್ಸರ್ ಕಮ್ ನಟ, ನಿರ್ದೇಶಕ ಪ್ರಭು ದೇವ ಜೊತೆ ಹೆಜ್ಜೆ ಹಾಕಿದ್ದಾರೆ.[ಧೋನಿ ವಿರುದ್ಧ ಮತ್ತೊಮ್ಮೆ ಜಾಮೀನು ರಹಿತ ವಾರೆಂಟ್]

MS Dhoni

ಇದು ಟಿವಿಎಸ್ ಸ್ಟಾರ್ ಬೈಕಿನ ಜಾಹೀರಾತಾಗಿದ್ದು, ಧೋನಿ ಅವರ ಡ್ಯಾನ್ಸ್ ನೋಡಿ ಅಬಿಮಾನಿಗಳು ಖುಷಿಯಾಗಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಸಹ ಆಟಗಾರರ ಜೊತೆಗೆ ವಿಷಲ್ ಪೋಡು ಎನ್ನುತ್ತಾ ಲುಂಗಿ ಉಟ್ಟು ಧೋನಿ ಸ್ಟೆಪ್ಸ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಕೂಡಾ ಸಕತ್ ಡ್ಯಾನ್ಸ್ ಮಾಡಿದ್ದರು. [ನಿವೃತ್ತಿ ಬಗ್ಗೆ ಧೋನಿ ಹೇಳಿದ್ದಾದರೂ ಏನು?]

ಮಂಗಳವಾರದಿಂದ ಆರಂಭವಾಗಲಿರುವ 5 ಪಂದ್ಯಗಳ ಏಕದಿನ ಸರಣಿ ನಂತರ 3 ಟಿ 20 ಪಂದ್ಯಗಳನ್ನು ಭಾರತ ಆಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's limited overs captain Mahendra Singh Dhoni is preparing to face Australia in the 1st of the 5-match ODI series starting tomorrow (January 12) in Perth but a video of his has become a big hit in the country since yesterday (January 10).
Please Wait while comments are loading...