ವಿಡಿಯೋ: ಬೌಂಡರಿ ಬಳಿ ಫೀಲ್ಡಿಂಗ್, ಕೊಹ್ಲಿ ಬಲ ಭುಜಕ್ಕೆ ಪೆಟ್ಟು

Posted By:
Subscribe to Oneindia Kannada

ರಾಂಚಿ, ಮಾರ್ಚ್ 16:ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಟೀಂ ಇಂಡಿಯಾದ ಅಭಿಮಾನಿಗಳು ಆತಂಕದಿಂದ ಬೌಂಡರಿ ಗೆರೆ ಕಡೆಗೆ ನೋಡುವ ಘಟನೆ ನಡೆಯಿತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡ ಘಟನೆಯೇ ಫ್ಯಾನ್ಸ್ ಆತಂಕಕ್ಕೆ ಕಾರಣ.

ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಚೆಂಡು ತಡೆಯುವ ಪ್ರಯತ್ನದಲ್ಲಿ ಕೆಳಗೆ ಬಿದ್ದು, ಬಲ ಭುಜಕ್ಕೆ ಗಾಯ ಮಾಡಿಕೊಂಡರು. ಕೊಹ್ಲಿಗೆ ಪೆಟ್ಟು ತಗುಲಿದ್ದು ಹೇಗೆ ವಿಡಿಯೋ ನೋಡಿ...[ಕೊಹ್ಲಿಗೆ ಐಸ್ ಪ್ಯಾಕ್ ಟ್ರೀಟ್ಮೆಂಟ್]

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ದಿನದ ಅಂತ್ಯಕ್ಕೆ ನಾಯಕ ಸ್ಮಿತ್ ಅವರ ಶತಕದ ನೆರವಿನಿಂದ 299ರನ್ ಗಳಿಸಿದೆ. ಪಂದ್ಯದ 40ನೇ ಓವರ್ ನಲ್ಲಿ ಕೊಹ್ಲಿ ಅವರು ಡೀಪ್ ಮಿಡ್ ವಿಕೆಟ್ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡು ಬೌಂಡರಿ ಗೆರೆ ಬಂದಾಗ ಡೈವ್ ಹೊಡೆದು ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಅವರ ಬಲ ಭುಜ ಬಲವಾಗಿ ನೆಲಕ್ಕೆ ಅಪ್ಪಳಿಸಿದೆ.

ನೋವಿನಿಂದ ಕೆಲಕಾಲ ಮೇಲೆ ಏಳಲು ಆಗದೆ, ಮುಖ ಕಿವುಚಿಕೊಂಡು ಕೊಹ್ಲಿ ನರಳುವ ದೃಶ್ಯ ಅಭಿಮಾನಿಗಳ ಮನಕಲುಕಿತು. ನಂತರ ಟೀಂ ಇಂಡಿಯಾದ ಫಿಜಿಯೋ ಪ್ಯಾಟ್ರಿಕ್ ಅವರು ತಕ್ಷಣವೇ ಕೊಹ್ಲಿ ಅವರತ್ತ ಧಾವಿಸಿ ಬಂದು ಭುಜಕ್ಕೆ ಐಸ್ ಪ್ಯಾಕ್ ಇಟ್ಟು ಪೆವಿಲಿಯನ್ ಗೆ ಕರೆದೊಯ್ದರು. ಸದ್ಯ ಕೊಹ್ಲಿ ಅವರ ಭುಜದ ಸ್ಕ್ಯಾನ್ ಮಾಡಲಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ, ಕೊಹ್ಲಿ ಅವರು ಎರಡನೆ ದಿನದ ಆಟಕ್ಕೆ ಮರಳಬಹುದು ಎಂಬ ಸುದ್ದಿ ಸಿಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India captain Virat Kohli suffered a serious injury scare after he walked off the field after injuring his right shoulder while preventing a boundary on the opening day of the third Test against Australia here on Thursday (March 16).
Please Wait while comments are loading...