ವಿಡಿಯೋ: ಫ್ಯಾನ್ಸ್ ಫೋನ್ ಕಿತ್ತೆಸೆದ ಉಗ್ರ ಪ್ರತಾಪಿ ಆರ್ ಪಿ ಸಿಂಗ್

Posted By:
Subscribe to Oneindia Kannada

ಇಂದೋರ್, ಜನವರಿ 15: ಚೊಚ್ಚಲ ರಣಜಿ ಗೆದ್ದ ಸಂಭ್ರಮದಲ್ಲಿರುವ ಗುಜರಾತ್ ತಂಡದ ಆಟಗಾರ ಆರ್ ಪಿ ಸಿಂಗ್ ಅವರು ಪಂದ್ಯದ ವೇಳೆ ಸೆಲ್ಫಿ ಫೋಟೋ ಕೇಳಿದ ಅಭಿಮಾನಿಯೊಬ್ಬರ ಮೊಬೈಲ್ ಫೋನ್ ಕಿತ್ತೆಸೆದ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಆರ್ ಪಿ ಸಿಂಗ್ ಅವರ ವರ್ತನೆಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇಂದೋರಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ತಂಡ ಮುಂಬೈ ವಿರುದ್ಧ ಗುಜರಾತ್ ತಂಡದ ಪ್ರದರ್ಶನದ ಬಗ್ಗೆ ಅಪಾರ ಮೆಚ್ಚುಗೆ ಕೇಳಿ ಬಂದಿದೆ. ಆದರೆ, ಗುಜರಾತ್ ಪರ ಆಡುತ್ತಿರುವ ವೇಗಿ ರುದ್ರ ಪ್ರತಾಪ್ ಸಿಂಗ್ ಉಗ್ರಪ್ರತಾಪಕ್ಕೆ ವ್ಯಾಪಕ ಟೀಕೆಗಳು ಬಂದಿವೆ.[ಶೇಷ ಭಾರತ ತಂಡ ಪ್ರಕಟ, ಪೂಜಾರಾ ನಾಯಕ]

RP Singh gets angry on fan, throws his cell phone on ground

ಫೈನಲ್ ಪಂದ್ಯದ ವೇಳೆ ಬೌಂಡರಿ ಗೆರೆ ಬಳಿ ವೇಗಿ ಆರ್.ಪಿ ಸಿಂಗ್ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸಿಂಗ್ ಬಳಿ ಸೆಲ್ಪಿಗೆ ಪೋಸ್ ನೀಡುವಂತೆ ಕೇಳಿಕೊಂಡಿದ್ದಾನೆ. ಇಷ್ಟಕ್ಕೇ ಸಿಟ್ಟಿಗೆದ್ದ ಸಿಂಗ್, ಏಕಾಏಕಿ ಬಾಲಕನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪಕ್ಕಕ್ಕೆ ಎಸೆದಿದ್ದಾರೆ. ಸಿಂಗ್ ಅವರ ವರ್ತನೆಯನ್ನು ಯಾರೋ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 300ನೇ ವಿಕೆಟ್ ಪಡೆದಿರುವ ಸಿಂಗ್ ಅವರು ಈ ಹಿಂದೆ ಪ್ರೇಕ್ಷಕರೊಬ್ಬರಿಗೆ ಮಧ್ಯ ಬೆರಳು ತೋರಿಸಿ ವಿವಾದಕ್ಕೆ ತುತ್ತಾಗಿದ್ದರು. ಈಗ ಈ ಕೆಟ್ಟ ನಡವಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಗಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A video has surfaced in which RP Singh is seen walking towards a set of fans. A few of them were holding out their cell phones demanding selfies. Singh, instead of obliging or even refusing to do so, simply snatched a phone out of the hands of one of the fans and threw it to the side.
Please Wait while comments are loading...