ವಿಡಿಯೋ: ಪಂದ್ಯದ ವೇಳೆ ಸ್ಪಿನ್ನರ್ ಓಜಾ ತಲೆಗೆ ಪೆಟ್ಟು

Posted By:
Subscribe to Oneindia Kannada

ಗ್ರೇಟರ್ ನೋಯಾಡಾ, ಸೆ. 07: ದುಲೀಪ್ ಟ್ರೋಫಿ ಪಂದ್ಯದ ವೇಳೆ ಸ್ಪಿನ್ನರ್ ಪ್ರಗ್ನಾನ್ ಓಜಾ ಅವರ ತಲೆಗೆ ಬುಧವಾರ (ಸೆಪ್ಟೆಂಬರ್ 07) ಪೆಟ್ಟು ಬಿದ್ದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಗ್ರೀನ್ ಹಾಗೂ ಇಂಡಿಯಾ ಬ್ಲೂ ನಡುವಿನ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇಂಡಿಯಾ ಗ್ರೀನ್ ಪರ ಫೀಲ್ಡಿಂಗ್ ಮಾಡುತ್ತಿದ್ದ ಎಡಗೈ ಸ್ಪಿನ್ನರ್ ಓಜಾ ಅವರು ಮಿಡ್ ಆನ್ ನಲ್ಲಿದ್ದಾಗ ಚೆಂಡು ಅವರ ತಲೆಗೆ ಬಡಿದಿದೆ.

VIDEO: Pragyan Ojha suffers freak head injury during Duleep Trophy, taken to hospital

ಇಂಡಿಯಾ ಬ್ಲೂ ತಂಡದ ಬ್ಯಾಟ್ಸ್ ಮನ್ ಪಂಕಜ್ ಸಿಂಗ್ ಅವರು ಶ್ರೇಯಸ್ ಗೋಪಾಲ್ ಎಸೆತವನ್ನು ಬಲವಾಗಿ ಬಾರಿಸಿದ್ದಾರೆ.


ಚೆಂಡು ಓಜಾ ಅವರ ಗ್ರಹಿಕೆಗಿಂತ ಹೆಚ್ಚು ಪುಟಿದ ಕಾರಣ ಅವರ ತಲೆಗೆ ಬಲವಾಗಿ ಬಡಿದಿದೆ. ಪಂದ್ಯದ 2ನೇ ಇನ್ನಿಂಗ್ಸ್ ನ 63ನೇ ಓವರ್ ನ ಮೊದಲ ಎಸೆತದಲ್ಲಿ ಈ ಘಟನೆ ಸಂಭವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India Green's left-arm spinner Pragyan Ojha was today (September 7) taken to a hospital for tests after suffering a "freak head injury" during their Duleep Trophy match against India Blue here.
Please Wait while comments are loading...