ಮಿಸ್ ಫೀಲ್ಡಿಂಗ್ : ರಾಯುಡು-ಹರ್ಭಜನ್ ಸಿಂಗ್ ಕಿತ್ತಾಟ

Posted By:
Subscribe to Oneindia Kannada

ಪುಣೆ, ಮೇ 02: ಮುಂಬೈ ಇಂಡಿಯನ್ಸ್ (ಎಂಐ) ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ತಂಡದ ಆಟಗಾರ ಅಂಬಟಿ ರಾಯುಡು ಜತೆ ಫೀಲ್ಡ್ ನಲ್ಲೇ ಗುದ್ದಾಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ನಿಜಕ್ಕೂ ನಡೆದಿದ್ದು ಏನು? ವಿಡಿಯೋ ಕೆಳಗಿದೆ ನೋಡಿ

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 9ರ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭಾನುವಾರ (ಮೇ 1) ಆನ್ ಫೀಲ್ಡ್ ನಲ್ಲೇ ಇಬ್ಬರು ಕೋಪಗೊಂಡು ಕೆಕ್ಕರಿಸಿಕೊಂಡು ನೋಡಿದ್ದಾರೆ. [ಸ್ಲಾಪ್ ಗೇಟ್ ಓಪನ್ ಮಾಡಿದ ಶ್ರೀಶಾಂತ್]

VIDEO: MI's Harbhajan Singh and Ambati Rayudu in on-field alteraction at IPL 2016

ಪಂದ್ಯದ 11ನೇ ಓವರ್ ನಲ್ಲಿ ಇದೆಲ್ಲ ನಡೆದಿದೆ. ಪುಣೆ ತಂಡದ ಸೌರವ್ ತಿವಾರಿ ಸಕತ್ ಆಗಿ ಬ್ಯಾಟ್ ಬೀಸುವ ಸಮಯದಲ್ಲಿ ಹರ್ಭಜನ್ ಅವರು ಬೌಲಿಂಗಿಗೆ ಇಳಿದಿದ್ದಾರೆ. ಅದು ಹರ್ಭಜನ್ ಅವರ 2ನೇ ಓವರ್ ಆಗಿತ್ತು. ಭಜ್ಜಿ ಎಸೆತವನ್ನು ಬೌಂಡರಿ ಗೆರೆ ಕಡೆದ ತಿವಾರಿ ಚೆಚ್ಚಿದ್ದಾರೆ. ಡೈವ್ ಹೊಡೆದು ಚೆಂಡನ್ನು ತಡೆಯಲು ಯತ್ನಿಸಿದ ರಾಯುಡು ವಿಫಲರಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹರ್ಭಜನ್, ರಾಯುಡುರನ್ನು ನಿಂದಿಸಿ, ಕೂಗಾಡಿದ್ದಾರೆ.

ಹರ್ಭಜನ್ ಅವರ ನಿಂದನೆಯನ್ನು ಸಹಿಸದ ರಾಯುಡು, ಹರ್ಭಜನ್ ಇರುವ ಕಡೆಗೆ ಧಾವಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಹರ್ಭಜನ್ ಅವರ ಸಮಜಾಯಿಷಿಯಿಂದ ಸಮಾಧಾನಗೊಳ್ಳದ ರಾಯುಡು ಕೈ ಗೊಡವಿಗೊಂಡು ಅಳುಮುಖ ಮಾಡಿಕೊಂಡು ಮತ್ತೆ ಫೀಲ್ಡಿಂಗ್ ಮಾಡಲು ತೆರಳುತ್ತಾರೆ.

ನಂತರ ಇಬ್ಬರು ಪೀಟರ್ ಹ್ಯಾಂಡ್ಸ್ ಕೊಂಬ್ ವಿಕೆಟ್ ಬಿದ್ದಾಗ ಒಟ್ಟಿಗೆ ಸಂಭ್ರಮಾಚಾರಣೆಯಲ್ಲಿ ತೊಡಗುತ್ತಾರೆ. ಮುಂಬೈ ತಂಡ 8 ವಿಕೆಟ್ ಗಳಿಂದ ಈ ಪಂದ್ಯವನ್ನು ಗೆಲ್ಲುತ್ತದೆ.

ಐಪಿಎಲ್ 2008 ವೇಳೆಯಲ್ಲಿ ಹರ್ಭಜನ್ ಸಿಂಗ್ ಅವರು ಕಿಂಗ್ಸ್ XI ಪಂಜಾಬ್ ನ ವೇಗಿ ಎಸ್ ಶ್ರೀಶಾಂತ್ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Indians' (MI) veteran off-spinner Harbhajan Singh and his team-mate Ambati Raydu were involved in an ugly on-field altercation during their match against Rising Pune Supergiants (RPS) in the Indian Premier League 2016 (IPL 9) on Sunday (May 1).
Please Wait while comments are loading...