ಪತ್ರಕರ್ತ ಎಸೆದ ನಿವೃತ್ತಿ ಪ್ರಶ್ನೆಗೆ ಧೋನಿ ಸಿಕ್ಸರ್ ಬಾರಿಸಿದ್ದು ಹೀಗೆ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 01 : ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದೇ ತಡ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನಿವೃತ್ತಿ ವಿಚಾರದ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಆದರೆ, ಕೂಲ್ ಕ್ಯಾಪ್ಟನ್ ಧೋನಿ ಮಾತ್ರ ನಿವೃತ್ತಿ ಬಗ್ಗೆ ಪ್ರಶ್ನಿಸಿದ ಪತ್ರಕರ್ತರೊಬ್ಬರಿಗೆ ಕೂಲ್ ಆಗಿಯೇ ಟಾಂಗ್ ನೀಡಿ ಕಳುಹಿಸಿದ್ದಾರೆ.

ಮುಂಬೈನ ವಾಂಖೇಡೆ ಮೈದಾನದಲ್ಲಿ ಮಾರ್ಚ್ 31 ರಂದು ವಿಂಡೀಸ್ ವಿರುದ್ಧ ಪರಾಭವಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಧೋನಿಗೆ ಪತ್ರಕರ್ತರೊಬ್ಬರು ಈ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದರು.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ಇದನ್ನು ಲಘುವಾಗಿ ಪರಿಗಣಿಸಿದ ಧೋನಿ, ಪತ್ರಕರ್ತರನ್ನು ಕರೆದು ತಮ್ಮ ಬಳಿ ಕೂರಿಸಿಕೊಂಡು, ನಾನು ನಿವೃತ್ತಿ ಹೇಳಬೇಕೆ? ನಾನು ಫಿಟ್ ಆಗಿದ್ದೇನೆ ಅಲ್ಲವೇ? ನೀವೂ ನನ್ನ ರನ್ನಿಂಗ್ ನೋಡಿಲ್ಲವೇ? ಎಂದು ಪ್ರಶ್ನಿಸಿದರು.[ಭಾರತದ ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು]

Video:'Do you want me to retire?', 'journalist' MS Dhoni stuns scribe after World T20 exit

ಇದಕ್ಕೆ ಪತ್ರಕರ್ತ ಹೌದು ನೀವು ತುಂಬ ಫಾಸ್ಟ್ ಇದ್ದೀರಾ ನೀವು ನಿವೃತ್ತಿ ಹೇಳುವುದು ಬೇಡ(ನೋ) ಎಂದಿದ್ದಾರೆ. ಈ ಉತ್ತರಕ್ಕೆ ಧೋನಿ ನೀವು ನನಗೆ ಕೇಳಿದ ಪ್ರಶ್ನೆಗೆ ನೀವೇ ಉತ್ತರ ನೀಡಿದ್ದೀರಿ ಎಂದು ಹೇಳಿ ಸರಿಯಾಗಿಯೇ ಟಾಂಗ್ ಕೊಟ್ಟು ಅವರನ್ನು ಕಳುಹಿಸಿದ್ದಾರೆ.[ವಿಲನ್ ಆದ ಆ ಎರಡು ನೋಬಾಲ್ಸ್ ]

ಈ ಜಾಣತನದ ಉತ್ತರ ಮೂಲಕ ಧೋನಿ ತಾವು ಅಂತರಾಷ್ಟ್ರೀಯ ಕ್ರಿಕೆಟ್‍ ಗೆ ನಿವೃತ್ತಿ ಹೇಳುತ್ತಾರೆಂದು ಬಹುದಿನಗಳಿಂದ ಅಭಿಮಾನಿಗಳಲ್ಲಿ ಮೂಡಿಸಿದ್ದ ಗೊಂದಲಕ್ಕೆ ಈಗ ಧೋನಿ ತೆರೆ ಎಳೆದು ಅಭಿಮಾನಿಗಳಿಗೆ ತಮ್ಮ ಸ್ಪಷ್ಟ ನಿರ್ಧಾರವನ್ನು ಈ ಮೂಲಕ ತಿಳಿಸಿದ್ದಾರೆ.

ಇದಲ್ಲದೇ ಕೆಲವು ದಿನಗಳ ಹಿಂದೆ ಭಾರತ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಧೋನಿ 2019ರ ವರೆಗೂ ತಂಡದ ನಾಯಕರಾಗಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Despite the pain of India's exit from the ICC World Twenty20 semi-final last night (March 31), captain Mahendra Singh Dhoni displayed his funny side when asked about retirement. (Scroll down to watch the video)
Please Wait while comments are loading...