ವಿಡಿಯೋ : ಉಗ್ರ ಪ್ರತಾಪಿ ಗಂಭೀರ್ ಕುರ್ಚಿ ಒದ್ದು ಚೀರಿದ್ದು ಏಕೆ?

Posted By:
Subscribe to Oneindia Kannada

ಬೆಂಗಳೂರು, ಮೇ 03: ಡೆಲ್ಲಿಯ ಅದ್ಭುತ ಪ್ರತಿಭೆಗಳಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮುಖಾಮುಖಿಯಾಗುತ್ತಿದ್ದರೆ ಎಂದರೆ ಏನೋ ಕಾದಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆರ್ ಸಿಬಿ vs ಕೆಕೆಆರ್ ನಡುವೆ ನಡೆದ ಸೋಮವಾರದ ಪಂದ್ಯದಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವೆ ಅಂಥದ್ದೇನು ಚಕಮಕಿ ನಡೆಯಲಿಲ್ಲ. ಆದರೆ, ಗಂಭೀರ ವದನದ ಗೌತಮ್ ಮಾತ್ರ ತನ್ನ ಸಿಟ್ಟು ಅಡಗಿಸಿಕೊಳ್ಳಲು ಆಗಲೇ ಇಲ್ಲ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಅಷ್ಟಲ್ಲದೇ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಇಬ್ಬರು ಉಗ್ರ ಪ್ರತಾಪಿಗಳಾಗಿ ತಮ್ಮ ಭಾವನೆಗಳನ್ನು ತಕ್ಷಣವೇ ಹೊರ ಹಾಕುವ ಆಟಗಾರರು. ಮೇ 2 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ಪಂದ್ಯದಲ್ಲಿ ಕೂಡಾ ಇಂಥ ಭಾವನಾತ್ಮಕ, ರೋಚಕ ಸನ್ನಿವೇಶಗಳು ಕಡಿಮೆ ಇರಲಿಲ್ಲ. [ಚಿನ್ನಸ್ವಾಮಿ ಸ್ಟೇಡಿಯಂ: ಗೆದ್ದಿದ್ದು ಪ್ರೇಕ್ಷಕರು ಹಾಗೂ ವೈಫೈ]

IPL 2016 VIDEO: Angry KKR captain Gautam Gambhir kicks chair, throws towel

ರನ್ ಚೇಸ್ ಮಾಡುತ್ತಿದ್ದ ಕೆಕೆಆರ್ 10 ಓವರ್ 69 ರನ್​ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಯೂಸುಫ್ ಅಜೇಯ 60 (29 ಎಸೆತಗಳು) ಹಾಗೂ ರಸೆಲ್ 39ರನ್ (24ಎಸೆತಗಳು) ಜೋಡಿ ತಂಡವನ್ನು ಗೆಲುವು ತಂದಿತ್ತರು.

ಡಗ್ ಔಟ್ ನಲ್ಲಿ ಕುರ್ಚಿ ಕಿಕ್: ಔಟಾದ ಬಳಿಕ ಡಗ್ ಔಟ್ ನಲ್ಲಿ ಪ್ಯಾಡ್ ಕಳಚದೆ ಫುಲ್ ಟೆನ್ಶನ್ ನಲ್ಲಿದ್ದ 34ವರ್ಷದ ಗೌತಮ್ ಗಂಭೀರ್ ಅವರು ಒಂದು ಕ್ಷಣ ತಾಳ್ಮೆ ಕಳೆದುಕೊಂಡರು.

ಎಡಗೈ ಬೌಲರ್ ಶಮ್ಸಿ ಬೌಲಿಂಗ್ ನಲ್ಲಿ ಸೂರ್ಯ ಕುಮಾರ್ ಯಾದವ್ ಅವರು ಬೌಂಡರಿ ಹೊಡೆದು ಗೆಲುವಿನ ಅಂತರವನ್ನು 8 ಎಸೆತಗಳಲ್ಲಿ 2 ರನ್ ಹಂತಕ್ಕೆ ತಂದಾಗ ಗಂಭೀರ್ ಅವರು ಹಿಂದಕ್ಕೆ ತಿರುಗಿ ಕುರ್ಚಿಯನ್ನು ಒದ್ದು, ಟವೆಲ್ ಎಸೆದು ವೀರಾವೇಶದಲ್ಲಿ ಗೆಲುವು ನಮ್ಮದೇ ಎಂಬಂತೆ ಚೀರಿದರು.

ಇದೇ ವೇಳೆ ಆರ್ ಸಿಬಿ ಬೌಲರ್ ಗಳ ಕಳಪೆ ಪ್ರದರ್ಶನದಿಂದ ಕಂಗೆಟ್ಟ ವಿರಾಟ್ ಕೊಹ್ಲಿ ಹ್ಯಾಪ್ ಮೋರೆ ಹಾಕಿಕೊಂಡು ಪೆವಿಲಿಯನ್ ಕಡೆಗೆ ನಡೆದರು. ಕೆಕೆಆರ್ ಹಾಗೂ ಆರ್ ಸಿಬಿ ಎರಡನೇ ಸುತ್ತಿನ ಕದನ ಮೇ 16ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolkata Knight Riders' (KKR) captain Gautam Gambhir does not hide his emotions when he is playing cricket. Be it at the international stage or in domestic or like last night (May 2) in the Indian Premier League 2016 (IPL 9) here at M Chinnaswamy Stadium.
Please Wait while comments are loading...