ವಿಡಿಯೋ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ದೆಹಲಿಯ ಬಾಲಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಪ್ರಥಮ ದರ್ಜೆ ಕ್ರಿಕೆಟ್ ಗೆ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆಯುತ್ತಿರುವ ಬಾಲಕ ರುದ್ರ ಪ್ರತಾಪ್‌ ಸಿಂಗ್‌ ಈಗ 'ಟಾಕ್ ಆಫ್ ದಿ ಟೌನ್'

14 ವರ್ಷದೊಳಗಿನವರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ದೆಹಲಿ ತಂಡದಲ್ಲಿ 5 ವರ್ಷದ ಬಾಲಕ ರುದ್ರ ಪ್ರತಾಪ್‌ ಸಿಂಗ್‌ ಸ್ಥಾನ ಪಡೆದಿದ್ದಾರೆ. ರುದ್ರ ಪ್ರತಾಪ್‌ ಸಿಂಗ್‌ ಬ್ಯಾಟಿಂಗ್‌ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

Video: 5-year-old boy plays in an U-14 cricket tournament

15ವರ್ಷ ವಯಸ್ಸಿದ್ದಾಗ ಸಚಿನ್ ತೆಂಡೂಲ್ಕರ್ ಅವರು ಮೊಟ್ಟ ಮೊದಾಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು ಆ ಕಾಲಕ್ಕೆ ದೊಡ್ಡ ಸುದ್ದಿಯಾಗಿತ್ತು. ಇದಾದ ಒಂದು ವರ್ಷದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಸಚಿನ್ ಅವರು ಮಾಸ್ಟರ್ ಬ್ಲಾಸ್ಟರ್ ಆಗಿ ವಿಶ್ವ ಶ್ರೇಷ್ಠ ಕ್ರಿಕೆಟರ್ ಆಗಿದ್ದು ಈಗ ಇತಿಹಾಸ.


ಬಾಲಕ ರುದ್ರ ಪ್ರತಾಪ್‌ ಸಿಂಗ್‌ ಅವರು ಸಚಿನ್ ದಾಖಲೆ ಮುರಿದು, ಅಂಡರ್ 14 ಟೂರ್ನಮೆಂಟ್ ನಲ್ಲಿ ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಮಾಡುತ್ತಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಕ್ರಿಕೆಟ್ ಭಾರತದಲ್ಲಿ ಹೊಸ ಪ್ರತಿಭೆಗಳ ಉದಯಕ್ಕೆ ನಾಂದಿ ಹಾಡುತ್ತಿದೆ. ವಂಡರ್ ಕಿಡ್ ಗಳು ಮುಂದೆ ಮಾಸ್ಟರ್ ಬ್ಲಾಸ್ಟರ್ ಆಗುತ್ತಾರೋ ಅಥವಾ ಹೆಚ್ಚು ಪ್ರಚಾರಕ್ಕೆ ಸಿಲುಕಿ ಮಂಕಾಗುತ್ತಾರೋ ಕಾಲವೇ ಉತ್ತರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 5-year-old kid Rudra Pratap playing cricket at a U-14 tournament has gone viral on social media.
Please Wait while comments are loading...