2017 ವಿಶ್ವಕಪ್ ಗೆ ಅರ್ಹತೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡ

Posted By: Ramesh
Subscribe to Oneindia Kannada

ಕೊಲಂಬೊ, ಫೆಬ್ರವರಿ, 17 : ಐಸಿಸಿ ಮಹಿಳೆಯರ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡವನ್ನು 9 ವಿಕೆಟ್ ಗಳ ಮಣಿಸಿ ಭಾರತದ ವನಿತೆಯರು 2017 ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡರು.

ಕೊಂಲಬೊನಲ್ಲಿ ನಲ್ಲಿ ನಡೆದ ಐಸಿಸಿ ಮಹಿಳೆಯರ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬಾಂಗ್ಲಾಕ್ಕೆ ಮೊದಲ ಬ್ಯಾಟಿಂಗ್ ನೀಡಿತು. ಬಾಂಗ್ಲಾದೇಶದ ವನಿತೆಯರು ನಿಗದಿತ 50 ಓವರ್ ಗಳಲ್ಲಿ ಭಾರತದ ಬಿಗಿ ಬೌಲಿಂಗ್ ನಿಂದ 8 ವಿಕೆಟ್ ಕಳೆದುಕೊಂಡು ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು.[ಥೈಲ್ಯಾಂಡ್ ವಿರುದ್ಧ ಭಾರತ ವನಿತೆಯರಿಗೆ 9 ವಿಕೆಟ್ ಗಳ ಜಯ]

Victorious India women qualify for ICC World Cup 2017

ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 33.3 ಓವರ್ ಗಳಲ್ಲಿ 158 ರನ್ ಬಾರಿಸಿ ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ಭಾರತ ವನಿತೆಯರು ಇಂಗ್ಲೆಂಡ್ ನಲ್ಲಿ ಜೂನ್ ನಿಂದ ಆರಂಭವಾಗಲಿರುವ 2017 ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡರು.

ಭಾರತ ಪರ ಮೋನಾ ಮೆಶ್ರಮ್ 78 (ನಾಟೌಟ್) ಮತ್ತು ಮಿಥಲಿ ರಾಜ್ 73 (ನಾಟೌಟ್) ಅವರ ಅಮೋಘ ಅರ್ಧಶತಕದ ನೆರವಿನಿಂದ ಭಾರತ ಗೆಲುವಿನ ನಗೆ ಬೀರಿತು.

ಬಾಂಗ್ಲಾ ಪರ ಫರ್ಗನಾ 107 ಎಸೆತಗಳಲ್ಲಿ (50) ಅರ್ಧಶತಕ ಹಾಗೂ ಶರ್ಮಿನಿ 35 ರನ್ ಗಳ ನೆರವಿನಿಂದ ಬಾಂಗ್ಲಾದೇಶ ತಂಡ 150 ರನ್ ಗಳ ಗಡಿ ದಾಟಿತು.

ಭಾರತ ವನಿತೆಯರು ನಡೆಸಿದ ಮಾರಕ ಬೌಲಿಂಗ್ ದಾಳಿಗೆ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡಿದರು. ಭಾರತದ ವೇಗದ ಬೌಲರ್ ಮಾನಸಿ ಜೋಷಿ 25 ರನ್ ನೀಡಿ 3 ಹಾಗೂ ಲೆಗ್ ಸ್ಪಿನ್ನರ್ ದೇವಿಕಾ ವೈದ್ಯ 17 ರನ್ ನೀಡಿ 2 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ
ಬಾಂಗ್ಲಾದೇಶ: 50 ಓವರ್ ಗಳಲ್ಲಿ 8ಕ್ಕೆ 155, ಫರ್ಗನಾ 50, ಶರ್ಮಿನಿ 35 ರನ್. ಮಾನಸಿ ಜೋಷಿ 25ಕ್ಕೆ 3.
ಭಾರತ: 33.3 ಓವರ್ ಗಳಲ್ಲಿ 1ಕ್ಕೆ 158,ಮೋನಾ ಮೆಶ್ರಮ್ 78, ಮಿಥಲಿ ರಾಜ್ 73. ಖದಿಜ ತಲ್ ಕೂಬ್ರಾ 37ಕ್ಕೆ1.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India women produced an all-round effort to spank Bangladesh women by nine wickets in a Super Six match to qualify for the ICC Women's World Cup 2017, here today (February 17).
Please Wait while comments are loading...