ಪ್ರಥಮ ದರ್ಜೆ ಕ್ರಿಕೆಟಿಗೆ ಲಕ್ಷ್ಮೀಪತಿ ಬಾಲಾಜಿ ವಿದಾಯ

Posted By:
Subscribe to Oneindia Kannada

ಚೆನ್ನೈ, ಸೆ. 16: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಲಕ್ಷ್ಮೀಪತಿ ಬಾಲಾಜಿ ಅವರು ಪ್ರಥಮ ದರ್ಜೆ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ. ಆದರೆ, ಈಗ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ ಪಿಎಲ್) ಟಿ20 ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ.

2014-15ನೇ ಸಾಲಿನಲ್ಲಿ ಕರ್ನಾಟಕ ವಿರುದ್ಧ ರಣಜಿ ಫೈನಲ್ ಆಡಿದ್ದ ಬಾಲಾಜಿ ಅವರು ಮತ್ತೆ ತಮಿಳುನಾಡು ಪರ ಆಡಿಲ್ಲ. ಅದೇ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಿದೆ.

Veteran pacer L Balaji retires from first-class cricket

34 ವರ್ಷದ ವಯಸ್ಸಿನ ಬಾಲಾಜಿ ಅವರು 106 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 330 ವಿಕೆಟ್ ಗಳಿಸಿದ್ದಾರೆ. 100 ಲಿಸ್ಟ್ ಎ ಪಂದ್ಯಗಳಿಂದ 145 ವಿಕೆಟ್ ಪಡೆದಿದ್ದಾರೆ.

3 ಮಾದರಿ ಕ್ರಿಕೆಟ್ ನಲ್ಲಿ ಭಾರತ ಪ್ರತಿನಿಧಿಸಿರುವ ಬಾಲಾಜಿ, 8 ಟೆಸ್ಟ್ ಪಂದ್ಯಗಳಿಂದ 27ವಿಕೆಟ್, 20 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 34 ಹಾಗೂ 5 ಟಿ20 ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡಿದ್ದಾರೆ. 2012ರಲ್ಲಿ ಶ್ರೀಲಂಕಾದ ನಡೆದ ಟಿ20 ವಿಶ್ವಕಪ್ ನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದರು.

ಎಲ್ ಬಾಲಾಜಿ ಅವರ ವೃತ್ತಿ ಬದುಕಿನ ತುಂಬಾ ಗಾಯದ ಸಮಸ್ಯೆ ಎದುರಿಸಿದರು. 2004ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡ ಭಾರತ ತಂಡದ ಅತ್ಯಂತ ಜನಪ್ರಿಯ ಆಟಗಾರರಾಗಿದ್ದ ಬಾಲಾಜಿ ಅವರ ನಗುವಿಗೆ ಸೋಲದ ಅಭಿಮಾನಿಗಳೇ ಇಲ್ಲ ಎನ್ನಬಹುದು.

16 ವರ್ಷಗಳದ ವೃತ್ತಿ ಬದುಕಿನಲ್ಲಿ ನಾನು ಏರಿಳಿತ ಕಂಡಿದ್ದೇನೆ. ಈಗ ಕುಟುಂಬಕ್ಕೆ ಹೆಚ್ಚಿನ ಕಾಲ ನೀಡಬೇಕಿದೆ. ಸದ್ಯಕ್ಕೆ ಟಿ20 ಪಂದ್ಯಗಳನ್ನಾಡಲು ಬಯಸಿದ್ದೇನೆ. ಟಿಎನ್ ಪಿಎಲ್ ಹಾಗೂ ಐಪಿಎಲ್ ನಲ್ಲಿ ಆಡುತ್ತೇನೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ಪರ ಆಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran pacer Lakshmipathy Balaji announced his retirement from First-class cricket on Wednesday (September 14).
Please Wait while comments are loading...