ತಂಡಕ್ಕೆ ಮರಳಿದ ಬೆನ್ನಲ್ಲೇ ನಿವೃತ್ತಿ, ಇದು ನೆಹ್ರಾ ಸ್ಟೈಲ್?

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: ಸರಿ ಸುಮಾರು 9 ತಿಂಗಳ ನಂತರ ಟೀಂ ಇಂಡಿಯಾಕ್ಕೆ ಮರಳಿರುವ ವೇಗಿ ಆಶೀಶ್ ನೆಹ್ರಾ ಅವರು ಮುಂದಿನ ಸರಣಿ ನಂತರ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೆ 38 ವರ್ಷದ ನೆಹ್ರಾರನ್ನು ಆಯ್ಕೆ ಮಾಡಿದ್ದು ಭಾರಿ ಚರ್ಚೆಗೀಡಾಗಿತ್ತು. ಯುವರಾಜ್ ಸಿಂಗ್, ಸುರೇಶ್ ರೈನಾ, ಅಮಿತ್ ಮಿಶ್ರಾ ಮುಂತಾದ ಆಟಗಾರರ ಫಿಟ್ನೆಸ್ ಗೆ ಸವಲೊಡುವಂತೆ ನೆಹ್ರಾ ಆಯ್ಕೆಯಾಗಿದ್ದರು.

Veteran India pacer Ashish Nehra to announce retirement?

ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ನಂತರ ಅಥವಾ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿ ನಂತರ ವಿದಾಯ ಹೇಳುತ್ತಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿ ನವೆಂಬರ್ 1 ರಿಂದ ದೆಹಲಿಯಲ್ಲಿ ಆರಂಭವಾಗಲಿದೆ.

ತವರು ನೆಲದಲ್ಲೇ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಒಳ್ಳೆ ಅವಕಾಶ ಸಿಕ್ಕಿದ್ದು, ನೆಹ್ರಾ ಅವರು ಈ ಬಗ್ಗೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಈ ನಡುವೆ ಸಚಿನ್ ತೆಂಡೂಲ್ಕರ್ ಅವರು 40 ವರ್ಷ ತನಕ ಆಡಬಹುದಾದರೆ, ನೆಹ್ರಾ ಏಕೆ ಆಡಬಾರದು ಎಂದು ಮಾಜಿ ಕ್ರಿಕೆಟರ್ ಸೆಹ್ವಾಗ್ ಪ್ರಶ್ನಿಸಿದ್ದಾರೆ.

17 ಟೆಸ್ಟ್(44 ವಿಕೆಟ್) ,120 ಏಕದಿನ ಪಂದ್ಯ(157) ಹಾಗೂ 26 ಟಿ20ಐ(34) ಪಂದ್ಯಗಳನ್ನಾಡಿರುವ ನೆಹ್ರಾ ಅವರು ರಾಂಚಿ ಹಾಗೂ ಗೌಹಾತಿ ಪಂದ್ಯದ ಆಡುವ ಹನ್ನೊಂದರಲ್ಲಿ ಕಾಣಿಸಿಕೊಂಡಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A report in Mumbai Mirror claimed, citing multiple sources, that the 38-year-old will, in all likely, play his game in national colours in Delhi on November 1 when India host New Zealand in a T20I match.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ