ಬೌಲಿಂಗ್ ಕೋಚ್ ಆಗಲು ಅರ್ಜಿ ಹಾಕಿದ ವೆಂಕಟೇಶ್ ಪ್ರಸಾದ್

Posted By:
Subscribe to Oneindia Kannada

ಬೆಂಗಳೂರು, ಜೂನ್ 09: ಟೀಂ ಇಂಡಿಯಾದ ಮಾಜಿ ಬೌಲರ್ ಕರ್ನಾಟಕದ ವೆಂಕಟೇಶ್ ಪ್ರಸಾದ್ ಅವರು ಕೂಡಾ ಈಗ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ಕೋಚ್ ಹುದ್ದೆ ಸಿಗದಿದ್ದರೆ, ಬೌಲಿಂಗ್ ಕೋಚ್ ಕರ್ತವ್ಯ ನಿರ್ವಹಿಸಲು ಸಿದ್ಧ ಎಂದು ವೆಂಕಟೇಶ್ ಪ್ರಸಾದ್ ಅವರು ಪಿಟಿಐಗೆ ಹೇಳಿದ್ದಾರೆ. [ಕೋಚ್ ಹುದ್ದೆಗೆ ಅರ್ಜಿ ಗುಜರಾಯಿಸಿದ ರವಿಶಾಸ್ತ್ರಿ]

ಪ್ರಸಾದ್ ಅವರು ಸದ್ಯ ಭಾರತ ಕಿರಿಯರ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. 2007 ರ ಟಿ20 ವಿಶ್ವಕಪ್ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ್ದ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದರು.

Venkatesh Prasad applies for Team India head coach's post


46 ರ ಹರೆಯದ ಪ್ರಸಾದ್ ಅವರು ಈ ಮುಂಚೆ ಉತ್ತರ ಪ್ರದೇಶ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿದ್ದರು. 2008ರಲ್ಲಿ ಗ್ಯಾರಿ ಕರ್ಸ್ಟನ್ ಅವರು ಕೋಚ್ ಆದ ಬಳಿಕ ಎರಿಕ್ ಸಿಮನ್ಸ್ ಬೌಲಿಂಗ್ ಕೋಚ್ ಆಗಿ ನಿಯುಕ್ತರಾದರು.[ಸಂದೀಪ್ ಪಾಟೀಲ್ -ಟೀಂ ಇಂಡಿಯಾಕ್ಕೆ ಮತ್ತೆ ಕೋಚ್?]

ಭಾರತದ ಪರ 33 ಟೆಸ್ಟ್ ಮತ್ತು 161 ಏಕದಿನ ಪಂದ್ಯವನ್ನಾಡಿ ಕ್ರಮವಾಗಿ 96 ಮತ್ತು 196 ವಿಕೆಟ್ ಪಡೆದಿದ್ದಾರೆ. 1999ರ ವಿಶ್ವಕಪ್ ನಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 5/27 ವಿಕೆಟ್ ಪಡೆದಿದ್ದು ಉತ್ತಮ ಸಾಧನೆ.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮತ್ತು ಹಿರಿಯ ಆಯ್ಕೆ ಸಮಿತಿಯ ಹಾಲಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರೂ ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former seam bowler Venkatesh Prasad has also thrown his hat into the ring by applying for the high profile head coach's job with the Indian cricket team.
Please Wait while comments are loading...