ತ್ರಿಕೋನ ಏಕದಿನ ಸರಣಿ: ಶ್ರೀಲಂಕಾ ತಂಡಕ್ಕೆ ತರಂಗ ನಾಯಕ

Posted By:
Subscribe to Oneindia Kannada

ಕೊಲಂಬೊ, ನವೆಂಬರ್ 07: ಶ್ರೀಲಂಕಾದ ನಾಯಕ ಏಂಜಲೋ ಮ್ಯಾಥ್ಯೂಸ್ ಹಾಗೂ ಉಪ ನಾಯಕ ದಿನೇಶ್ ಚಾಂಡಿಮಲ್ ಅನುಪಸ್ಥಿತಿಯಲ್ಲಿ ಶ್ರೀಲಂಕಾ ತಂಡ ತ್ರಿಕೋನ ಸರಣಿಗೆ ಸಜ್ಜಾಗುತ್ತಿದೆ. ವೆಸ್ಟ್ ಇಂಡೀಸ್, ಜಿಂಬಾಬ್ವೆ ಇರುವ ಈ ಸರಣಿಗೆ ಉಪುಲ್ ತರಂಗಾ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಉಪುಲ್ ತರಂಗ ಅವರು ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ.

31 ವರ್ಷ ವಯಸ್ಸಿನ ತರಂಗ ಅವರು 15 ಸದಸ್ಯರನ್ನು ಒಳಗೊಂಡ ಶ್ರೀಲಂಕಾ ತಂಡಕ್ಕೆ ನಾಯಕರಾಗಿದ್ದಾರೆ. ಕುಶಾಲ್ ಜನಿತಾ ಪೆರೇರ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಪ್ರಕಟಿಸಿದೆ.

Upul Tharanga to lead Sri Lanka in ODIs against Zimbabwe

ಜಿಂಬಾಬ್ವೆಯ ಹರಾರೆಯಲ್ಲಿ ನವೆಂಬರ್ 14 ರಿಂದ ತ್ರಿಕೋನ ಸರಣಿ ಆರಂಭವಾಗಲಿದೆ. ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಜಿಂಬಾಬ್ವೆಯನ್ನು ಎದುರಿಸಲಿದೆ.

ಶ್ರೀಲಂಕಾ ತಂಡ: ಧನಂಜಯ ಡಿಸಿಲ್ವಾ, ಕುಶಾಲ್ ಜೆ ಪೆರೇರ, ನಿರೊಶನ್ ಡಿಕ್‌ವೆಲ್ಲಾ, ಉಪುಲ್ ತರಂಗ(ನಾಯಕ), ಕುಶಾಲ್ ಮೆಂಡಿಸ್, ಶೆನಾನ್ ಜಯಸೂರ್ಯ, ಅಸೆಲಾ ಗುಣರತ್ನೆ, ಸಚಿತಾ ಪಥಿರನ, ನುವಾನ್ ಕುಲಸೇಕರ, ದಸುನ್ ಶನಕ, ನುವಾನ್ ಪ್ರದೀಪ್, ಲಹಿರು ಕುಮಾರ, ಸುರಂಗ ಲಕ್ಮಲ್, ಲಕ್ಷಣ್ ಸನ್‌ಡಕನ್, ಜೆಫ್ರಿ ವಾಂಡರ್‌ಸೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the absence of regular skipper Angelo Mathews and vice-captain Dinesh Chandimal, left-hander batsman Upul Tharanga has been appointed to lead Sri Lanka in the ODI triangular series in Zimbabwe, which also involves West Indies.
Please Wait while comments are loading...