ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಮಿ ನಂತರ ಕ್ರಿಕೆಟ್ ನಲ್ಲೂ ಮೀಸಲಾತಿ ಕೋರಿದ ರಾಮದಾಸ್

By Mahesh

ಮುಂಬೈ, ಆಗಸ್ಟ್ 21: ಭಾರತೀಯ ಸೇನೆಯಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್‌ ದಾಸ್‌ ಅಥವಾಲೆ ಅವರು ಕ್ರಿಕೆಟ್ ಆಟಗಾರರ ಪರ ಬ್ಯಾಟ್ ಬೀಸಿದ್ದು, ಕ್ರಿಕೆಟ್ ನಲ್ಲೂ ಮೀಸಲಾತಿ ಬೇಕು ಎಂದು ಕೇಳಿದ್ದಾರೆ.

ಬ್ರಾಹ್ಮಣ, ವೈಶ್ಯರೂ ಸೇರಿ ಎಲ್ಲ ಜಾತಿಗೂ ಸಿದ್ದು ಮೀಸಲಾತಿ ಭಾಗ್ಯ

ಭಾರತೀಯ ಸೇನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಜೊತೆಗೆ ಈ ಬಗ್ಗೆ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ರಾಮ್‌ದಾಸ್ ತಿಳಿಸಿದ್ದರು. ಇದಾದ ಬಳಿಕ ಕ್ರಿಕೆಟ್ ನಲ್ಲಿ ಮೀಸಲಾತಿ ಜಾರಿಗೆ ತರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಾಮ್ ದಾಸ್ ಕೇಳಿಕೊಂಡಿದ್ದಾರೆ.

Union Minister Ramdas Athawale In Favour Of Reservation For Team India players

ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಹಾಗೂ ಕ್ರೀಡೆಯಲ್ಲಿ ಮೀಸಲಾತಿಗೆ ಆಗ್ರಹಿಸಿದ್ದ ರಾಮದಾಸ್ ಅವರು ಮತ್ತೊಮ್ಮೆ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಆಗ್ರಹಿಸಿದ್ದಾರೆ. ಶೇ 25ರಷ್ಟು ಮೀಸಲಾತಿ ಕೋರಿರುವ ರಾಮದಾಸ್, ಹಾಲಿ ಮೀಸಲಾತಿ ಶೇಕಡಾವಾರು ಪದ್ಧತಿ ವ್ಯವಸ್ಥೆಗೆ ಲೋಪವಾಗದಂತೆ ವಾರ್ಷಿಕ 6 ಲಕ್ಷಕ್ಕೂ ಕಡಿಮೆ ಮೊತ್ತದ ಆದಾಯ ಹೊಂದಿರುವವರಿಗೆ ಹೊಸ ಮೀಸಲಾತಿ ಕಲ್ಪಿಸಬೇಕು ಎಂದಿದ್ದಾರೆ.



ಡಾ. ಅಂಬೇಡ್ಕರ್ ಅವರ ಉದ್ದೇಶವನ್ನು ನಾವು ಈಡೇರಿಸಬೇಕಿದೆ. ನಾವೆಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ. ಹಿಂದುಳಿದ ಹಾಗೂ ಶೋಷಿತ ವರ್ಗದ ಪ್ರತಿಭಾವಂತರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಕಲ್ಪಿಸಬೇಕಿದೆ ಎಂದು ರಾಮ್ ದಾಸ್ ಹೇಳಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X