ಸರ್ಫರಾಜ್ ಸಕತ್ ಆಟ, ಭಾರತ ಕ್ವಾರ್ಟರ್ ಫೈನಲಿಗೆ ಲಗ್ಗೆ

Posted By:
Subscribe to Oneindia Kannada

ಮೀರ್ ಪುರ್ (ಬಾಂಗ್ಲಾದೇಶ), ಜ. 31: ಕೋಚ್ ರಾಹುಲ್ ದ್ರಾವಿಡ್ ಅವರ ಸಮರ್ಥ ಸಲಹೆಯನ್ನು ಪಡೆದುಕೊಂಡು ಇಶಾನ್ ಕಿಶಾನ್ ನೇತೃತ್ವದ ಅಂಡರ್ 19 ತಂಡ ವಿಶ್ವಕಪ್ ನ ಕ್ವಾರ್ಟರ್ ಫೈನಲಿಗೆ ಲಗ್ಗೆ ಇಟ್ಟಿದೆ. ಸರ್ಫರಾಜ್ ಖಾನ್ ಎರಡು ಪಂದ್ಯಗಳಿಂದ ಸತತ ಅರ್ಧಶತಕ ಸಿಡಿಸಿ ಭಾರತದ ಗೆಲುವಿನ ನಾಗಾಲೋಟ ಮುಂದುವರೆಯುವಂತೆ ಮಾಡಿದ್ದಾರೆ.

ಡಿ ಗುಂಪಿನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 120ರನ್ ಗಳ ಅಂತರದಿಂದ ಸೋಲಿಸಿದ ಟೀಂ ಇಂಡಿಯಾದ ಕಿರಿಯರ ತಂಡ ವಿಜಯೋತ್ಸವ ಆಚರಿಸಿತು.

Under-19 World Cup: Sarfaraz, Avesh take India to quarter-finals

ಸರ್ಫರಾಜ್ ಖಾನ್ 74, ಎಡಗೈ ಆರಂಭಿಕ ಆಟಗಾರ ರಿಷಭ್ ಪಂತ್, ಮಧ್ಯಮ ಕ್ರಮಾಂಕ ಅರ್ಮಾನ್ ಜಾಫರ್ ಅವರು 57 ಹಾಗೂ 46ರನ್ ಕಲೆ ಹಾಕಿ ಮೊತ್ತವನ್ನು 258/8 ಸ್ಕೋರಿಗೇರಿಸಿದರು. 42 ಎಸೆತಗಳಲ್ಲಿ 45ರನ್ ಗಳಿಸಿದ್ದಲ್ಲದೆ 47ರನ್ನಿತ್ತು 5 ವಿಕೆಟ್ ಪಡೆದು ಮಹಿಪಾಲ್ ಲೊಮ್ರೊರ್ ಉತ್ತಮ ಆಟ ಪ್ರದರ್ಶಿಸಿದರು. ಜೊತೆಗೆ ಅವೇಶ್ ಖಾನ್ 4/32 ಪಡೆದು ಭಾರತದ ಜಯಕ್ಕೆ ತಮ್ಮ ಕೊಡುಗೆ ನೀಡಿದರು.

ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಅಂಡರ್-19 ತಂಡ 50 ಓವರ್‌ಗಳಲ್ಲಿ 258/8 (ಸರ್ಫರಾಝ್ ಖಾನ್ 74, ಪಂತ್ 57, ಎ.ಜಾಫರ್ 46, ಲೊಮ್ರರ್45; ಗಿಬ್ಸನ್ 3-50, ಸ್ಮಿತ್ 2-39, ರವೀಂದ್ರ 2-4)

ನ್ಯೂಝಿಲೆಂಡ್ 31.3 ಓವರ್‌ಗಳಲ್ಲಿ ಆಲೌಟ್ 138 ( ಲಿಯೊಪರ್ಡ್ 40, ಆಲನ್ 29, ಪಾರಿಕ್ 26, ಸ್ಕಾಟ್ 29; ಎ.ಖಾನ್ 4-32, ಲೊಮ್ರಾರ್ 5-47).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India stormed into the ICC Under-19 Cricket World Cup quarter-finals after producing a clinical all-round performance to wallop New Zealand by 120 runs in their penultimate Group D encounter here.
Please Wait while comments are loading...