ದ್ರಾವಿಡ್ ಶಿಷ್ಯರಿಂದ ಅಭ್ಯಾಸ ಪಂದ್ಯದಲ್ಲೇ ಭರ್ಜರಿ ಆಟ

Posted By:
Subscribe to Oneindia Kannada

ಢಾಕಾ, ಜ. 24: ಅಂಡರ್ 19 ವಿಶ್ವಕಪ್ ಗಾಗಿ ಪೂರ್ವ ತಯಾರಿ ನಡೆಸಿರುವ ಭಾರತದ ಯುವ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಇಶಾನ್ ಕಿಶಾನ್ ನೇತೃತ್ವದಲ್ಲಿ ಕೆನಡಾ ವಿರುದ್ಧ 372 ರನ್ ಗಳ ಬೃಹತ್ ಅಂತರದ ಜಯ ದಾಖಲಿಸಿದೆ.

ಕೆನಡಾ ವಿರುದ್ಧ 50 ಓವರ್ ಗಳಲ್ಲಿ 485/3 ಸ್ಕೋರ್ ಮಾಡಿದ ಯುವ ಭಾರತ ತಂಡ ನಂತರ ಕೆನಡಾ ತಂಡವನ್ನು 113 ಸ್ಕೋರಿಗೆ ನಿಯಂತ್ರಿಸಿ ಭರ್ಜರಿ ಜಯ ದಾಖಲಿಸಿದೆ. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜನವರಿ 25ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.[ದ್ರಾವಿಡ್ ಕೋಚಿಂಗ್ ಕಮಾಲ್, ಕಿರಿಯರಿಗೆ ಕಿರೀಟ]

ಬಾಂಗ್ಲಾದೇಶದ ಕ್ರಿರಾ ಶಿಖಾ ಪ್ರತಿಷ್ಠಾನ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ನಾಯಕ ಇಶಾನ್ ಕಿಶನ್ 138 ರನ್(86 ಎಸೆತ, 16 ‍X 4, 7 X6) ಹಾಗೂ ರಿಕಿ ಭುಯಿ 115 ರನ್(71 ಎಸೆತ, 10 X4, 7 X6) ಅಮೋಘ ಜೊತೆಯಾಟ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.

U-19 World Cup warm-up game

ಶತಕ ವೀರರಿಬ್ಬರೂ ಮಿಕ್ಕವರಿಗೆ ಅಭ್ಯಾಸವಾಗಲಿ ಎಂದು ನಿವೃತ್ತಿ ಪಡೆದು ಪೆವಿಲಿಯನ್ ಗೆ ಬಂದರು. ನಂತರ ಮಹಿಪಾಲ್ ಅವರು 23 ಎಸೆತಗಳಲ್ಲಿ 55 ರನ್ (4x4, 4x6) ಬಾರಿಸಿದರು.[ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿಶನ್ ನಾಯಕ]

485ರನ್ ಚೇಸ್ ಮಾಡಿದ ಕೆನಡಾ ತಂಡ 31.1 ಓವರ್​ಗಳಲ್ಲಿ ಕೇವಲ 113 ರನ್​ಗೆ ಆಲೌಟಾಗಿ ಸೊಲೊಪ್ಪಿಕೊಂಡಿತು.
ಭಾರತ: 6 ವಿಕೆಟ್​ಗೆ 485 (ಇಶಾನ್ ಕಿಶನ್ 138, ರಿಕಿ ಭುಯಿ 115, ರಿಷಭ್ ಪಂತ್ 62, ಲಾಮ್ರರ್ 55*, ಸರ್ಫ್ರಾಜ್​ಖಾನ್ 48, ಅಬ್ದುಲ್ ಹಸೀಬ್ 56ಕ್ಕೆ 1), ಕೆನಡಾ: 31.1 ಓವರ್​ಗಳಲ್ಲಿ 113( ಹರ್ಷ್ ಠಾಕರ್ 25, ಶುಭಂ ಮವಿ 20ಕ್ಕೆ 2, ಜೀಶನ್ ಅನ್ಸಾರಿ 39ಕ್ಕೆ 2, ಲಾಮ್ರರ್ 19ಕ್ಕೆ 3).

ಆಸ್ಟ್ರೇಲಿಯಾ ತಂಡ 19 ವಯೋಮಿತಿಯ ಏಕದಿನ ಕ್ರಿಕೆಟ್​ನಲ್ಲಿ 2002ರಲ್ಲಿ 480 ರನ್ ಬಾರಿಸಿದ್ದು ದಾಖಲೆ. ಭಾರತ 2004ರಲ್ಲಿ 425 ರನ್ ಮೊತ್ತ 2ನೇ ಸ್ಥಾನದಲ್ಲಿದೆ. ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯವಾಗಿದ್ದರೂ ಇದು ಅಧಿಕೃತ ದಾಖಲೆಯಾಗಿ ಪರಿಗಣಿಸುತ್ತಿಲ್ಲ.

ಡಿ ಗುಂಪಿನಲ್ಲಿರುವ ಭಾರತ ತಂಡದ ಜೊತೆಗೆ ಐರ್ಲೆಂಡ್, ನೇಪಾಳ ಹಾಗೂ ನ್ಯೂಜಿಲೆಂಡ್ ಕೂಡಾ ಸ್ಪರ್ಧಿಸುತ್ತಿವೆ. ಜನವರಿ 28 (ಗುರುವಾರ) ಮಿರ್ಪುರ್ ನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವಾಡಲಿದೆ. ಜನವರಿ 27 ರಿಂದ ಫೆಬ್ರವತರಿ 14ರ ತನಕ ವಿಶ್ವಕಪ್ ನಡೆಯಲಿದೆ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India started off their Under-19 World Cup preparations on a bright note as their batsmen dominated in the warm-up game against Canada today to post a mammoth 485/3 in 50 overs. In reply, the opposition were bundled out for 113 as India won by a massive 372 runs.
Please Wait while comments are loading...