ಅಂಡರ್ 19 ವಿಶ್ವಕಪ್ : ವೆಸ್ಟ್ ಇಂಡೀಸ್ ನೂತನ ಚಾಂಪಿಯನ್

Posted By:
Subscribe to Oneindia Kannada

ಮೀರ್ ಪುರ (ಬಾಂಗ್ಲಾದೇಶ), ಫೆ.14: ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಟೀಂ ಇಂಡಿಯಾ ಕಿರಿಯರ ತಂಡಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆಯಲ್ಲಿ ಸೋತಿದೆ. ಭಾನುವಾರ (ಫೆಬ್ರವರಿ 14) ರಂದು ನಡೆದಿರುವ ಅಂತಿಮ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 45.1 ಓವರ್ ಗಳಲ್ಲಿ 145 ಅಲ್ಪಮೊತ್ತಕ್ಕೆ ಇಶಾನ್ ಕಿಶಾನ್ ನೇತೃತ್ವದ ತಂಡ ಕುಸಿಯಿತು. ವೆಸ್ಟ್ ಇಂಡೀಸ್ ತಂಡ ಕೊನೆ ಓವರ್ ನ ಥ್ರಿಲ್ಲರ್ ನಲ್ಲಿ ಗೆಲುವು ದಾಖಲಿಸಿ ಹೊಸ ವಿಶ್ವ ಚಾಂಪಿಯನ್ ಎನಿಸಿದ್ದಾರೆ.

ಭಾರತದ ಕಿರಿಯರ ತಂಡ ನೀಡಿದ 146ರನ್ ಗಳ ಸುಲಭ ಗುರಿಯನ್ನು ತಲುಪಲು 49.3 ಓವರ್ಸ್ ತೆಗೆದುಕೊಂಡ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ ಗಳನ್ನು ಕಳೆದುಕೊಂಡಿತು. ವಿಂಡೀಸ್ ಪರ ಅಜೇಯ 52 ರನ್ ಗಳಿಸಿದ ಕೀಸಿ ಕಾರ್ಟಿ ಹೀರೋ ಆಗಿ ತಂಡಕ್ಕೆ ಕಪ್ ತಂದುಕೊಟ್ಟಿದ್ದಾರೆ.

ಭಾರತದ ಇನ್ನಿಂಗ್ಸ್: ಭಾರತ ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲಿಲ್ಲ. ಸರ್ಫರಾಜ್ ಖಾನ್, ಮಹಿಪಾಲ್ ಬಿಟ್ಟು ಬೇರೆ ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ವಿಂಡೀಸ್ ಬೌಲರ್ ಗಳ ಕರಾರುವಾಕ್ ಬೌಲಿಂಗ್ ಗಮನ ಸೆಳೆಯಿತು.
* ಸರ್ಫರಾಜ್ ಖಾನ್ 51ರನ್ (89 ಎಸೆತ, 5x4,1x6)
* ಮಹಿಪಾಲ್ ಲೊಮ್ರೋರ್ 19 ರನ್ (43 ಎಸೆತ, 2x4)
* ವಿಂಡೀಸ್ ಪರ ಜೋಸೆಫ್ 10 ಓವರ್ ಗಳಲ್ಲಿ 39/3, ರಿಯಾನ್ ಜಾನ್ 38/3, ಕೀಮೊ ಪಾಲ್ 2, ಹೋಲ್ಡರ್, ಸ್ಪಿಂಜರ್ ಗೆ ತಲಾ ಒಂದು ವಿಕೆಟ್.

India lose final, West Indies claim title in last-over thriller

ಸಂಕ್ಷಿಪ್ತ ಸ್ಕೋರ್: ಭಾರತ 145 ಆಲೌಟ್, 45.1 ಓವರ್ಸ್ (ಸರ್ಫರಾಜ್ ಖಾನ್ 51, ರಾಹುಲ್ ಬಾಥಂ 21, ಮಹಿಪಾಲ್ ಲೋಮ್ರೋರ್ 19, ಅಲ್ಜರಿ ಜೋಸೆಫ್ 3/39, ರಿಯಾನ್ ಜಾನ್ 3/38, ಕೀಮೋ ಪಾಲ್ 2/17)

ವೆಸ್ಟ್ ಇಂಡೀಸ್ 146/5, 49.3 ಓವರ್ಸ್ (ಕೀಸಿ ಕಾರ್ಟಿ 52 ಅಜೇಯ, ಕೀಮೊ ಪಾಲ್ 40 ಅಜೇಯ, ಶಿಮ್ರೋನ್ ಹೆಮ್ಯಾರ್ 23, ಮಾಯಾಂಕ್ ಡಾಗರ್ 3/25)

ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಟೀಂ ಇಂಡಿಯಾದ ಕಿರಿಯರಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಲು ಇಶಾನ್ ಕಿಶಾನ್ ಅವರ ನೇತೃತ್ವದ ತಂಡ ಕಣಕ್ಕಿಳಿದಿದೆ.

ಕಳೆದ ಎರಡು ವರ್ಷಗಳ ಹಿಂದೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಕಂಡಿದ್ದ ಕಿರಿಯರ ತಂಡ ಮತ್ತೆ ಸೋಲಿನ ರುಚಿ ಕಂಡಿಲ್ಲ. ಸತತ 15 ಪಂದ್ಯಗಳನ್ನು ಗೆದ್ದುಕೊಂಡಿದೆ.

Under-19 World Cup Final: India Vs West Indies in Mirpur on February 14

ಜನವರಿ 2014ರಿಂದ ಇಲ್ಲಿ ತನಕ 21 ಏಕದಿನ ಪಂದ್ಯಗಳನ್ನಾಡಿದ್ದು, 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐದು ಬಾರಿ ಫೈನಲ್ ಪ್ರವೇಶಿಸಿರುವ ಭಾರತ 2000,2008 ಹಾಗೂ 2012 ರಲ್ಲಿ ಕಪ್ ಎತ್ತಿದೆ.

ಭಾರತ: ಇಶಾನ್ ಕಿಶಾನ್ (ನಾಯಕ), ರಿಷಬ್ ಪಂತ್ (ಉಪ ನಾಯಕ), ಅನ್ಮೋಲ್ ಪ್ರೀತ್ ಸಿಂಗ್, ಸರ್ಫರಾಜ್ ಖಾನ್, ಅರ್ಮಾನ್ ಜಾಫರ್, ವಾಷಿಂಗ್ಟನ್ ಸುಂದರ್, ಮಹಿಪಾಲ್ ಲೊಮ್ರೋರ್, ಮಾಯಾಂಕ್ ಡಾಗರ್, ರಾಹುಲ್ ಬಾಥಂ, ಅವೇಶ್ ಖಾನ್, ಖಲೀಲ್ ಅಹ್ಮದ್.

ವೆಸ್ಟ್ ಇಂಡೀಸ್ : ಗಿಡ್ರಾನ್ ಪೋಪ್, ಟೆವಿನ್ ಇಮ್ಲಾಚ್, ಶಿಮ್ರೋನ್ ಹೆಮ್ಯಾರ್(ನಾಯಕ), ಕೀಸಿ ಕಾರ್ಟಿ, ಶಾಮರ್ ಸ್ಪ್ರಿಂಜರ್, ಜೆ ಗೂಲಿ, ಕೀಮೋ ಪಾಲ್, ಮೈಕಲ್ ಫ್ರ್ಯೂ, ರಿಯಾನ್ ಜಾನ್, ಅಲ್ಜರಿ ಜೋಸೆಫ್, ಚೇಮಾರ್ ಹೋಲ್ಡರ್ (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India faltered at the last hurdle as they lost to West Indies in the final of the ICC Under-19 Cricket World Cup here today (February 14).
Please Wait while comments are loading...