ಟಿ20: ಗಾಯಾಳು ಶಮಿ ಬದಲಿಗೆ ಗುಜರಾತಿನ ವೇಗಿ ಆಯ್ಕೆ

Posted By:
Subscribe to Oneindia Kannada

ಮುಂಬೈ, ಜ. 18: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ ಅವರು ಗಾಯಾಳುವಾಗಿ ತಂಡದಿಂದ ಹೊರಬಂದಿದ್ದು ಎಲ್ಲರಿಗೂ ತಿಳಿದಿರಬಹುದು. ಈಗ ಶಮಿ ಬದಲಿಗೆ ಗುಜರಾತಿನ ಯುವ ವೇಗಿ ಜಸ್ಪ್ರೀತ್ ಬಮ್ರಾ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಟಿ20ಅಂತಾರಾಷ್ಟ್ರೀಯ ಸರಣಿಗೆ ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ಜಸ್ಪ್ರೀತ್ ಬಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಟ್ವೆಂಟಿ20 ಪಂದ್ಯಗಳು ಜನವರಿ 26, 2016ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಹೇಳಿದರು.

Uncapped Jasprit Bumrah replaces Shami in India T20I squad for Australia series

ಜನವರಿ 22ರಂದು ಭಾರತವನ್ನು ಬಿಟ್ಟು ಆಸ್ಟ್ರೇಲಿಯಾಕ್ಕೆ ಬೂಮ್ರಾ ತೆರಳಿದ್ದು, ಬೂಮ್ರಾ ಅವರ ಜೊತೆಗೆ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಅಶೀಶ್ ನೆಹ್ರಾ, ಸುರೇಶ್ ರೈನಾ ಹಾಗೂ ಹಾರ್ದಿಕ್ ಪಾಂಡ್ಯ ಅವರು ಕೂಡಾ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾವನ್ನು ಸೇರಲಿದ್ದಾರೆ.

22 ವರ್ಷ ವಯಸ್ಸಿನ ಬೂಮ್ರಾ ಅವರು ಇಲ್ಲಿ ತನಕ 18 ಪ್ರಥಮ ದರ್ಜೆ ಪಂದ್ಯಗಳು, 20 ಲಿಸ್ಟ್ ಎ (50 ಓವರ್ಸ್) ಹಾಗೂ 47 ಟ್ವೆಂಟಿ 20 ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಸದ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ಪರ ಆಡುತ್ತಾ ಸೋಮವಾರ 4 ಓವರ್ ಗಳಲ್ಲಿ 28ರನ್ನಿತ್ತು 1 ವಿಕೆಟ್ ಪಡೆದಿದ್ದಾರೆ ಜಾರ್ಖಂಡ್ ವಿರುದ್ಧ ಗುಜರಾತ್ 6 ವಿಕೆಟ್ ಗಳ ಜಯ ದಾಖಲಿಸಿದೆ.

ಆಸ್ಟ್ರೇಲಿಯಾದಲ್ಲಿರುವ ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಐದು ಏಕದಿನ ಕ್ರಿಕೆಟ್ ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ. ಜ.26ರಿಂದ ಅಡಿಲೇಡ್ ನಲ್ಲಿ ಟಿ20 ಸರಣಿ ಆರಂಭಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uncapped Gujarat fast bowler Jasprit Bumrah was today named in the Indian Twenty20 International squad for the Australia series. He will replace paceman Mohammed Shami, who was ruled out of the tour due to injury.
Please Wait while comments are loading...