ಕಿರಿಯರ ವಿಶ್ವಕಪ್ : ಸೆಮೀಸ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ

Posted By:
Subscribe to Oneindia Kannada

ಮೀರ್ಪುರ, ಫೆ. 8: ಐಸಿಸಿ ವಿಶ್ವಕಪ್ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ 6 ವಿಕೆಟ್ ಗಳ ಜಯ ದಾಖಲಿಸಿದೆ. ಮೊದಲ ಸೆಮಿಫೈನಲ್ ಪಂದ್ಯ ಫೆಬ್ರವರಿ 9 (ಮಂಗಳವಾರ) ನಡೆಯಲಿದೆ.

ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ತಂಡ 49.2 ಓವರ್​ಗಳಲ್ಲಿ 184 ರನ್​ಗೆ ಆಲೌಟ್ ಆಯಿತು. ಗುರಿ ಬೆನ್ನು ಹತ್ತಿದ ಶ್ರೀಲಂಕಾಕ್ಕೆ 95ರನ್ ಗಳಿಸಿದ ಅವಿಷ್ಕಾ ಫೆರ್ನಾಂಡೊ ಜವಾಬ್ದಾರಿಯುತ ಆಟದ ನೆರವಿನಿಂದ ಸುಲಭ ಜಯ ದಾಖಲಿಸಿತು.[ರಿಷಬ್ ಪಂತ್ ಸೂಪರ್ ಆಟ, ಭಾರತ ಸೆಮಿಸ್ ಗೆ ಎಂಟ್ರಿ]

U-19 World Cup: Sri Lanka beat England, set up semis clash with India

35.4 ಓವರ್​ಗಳಲ್ಲಿ 4 ವಿಕೆಟ್​ಗೆ 186 ರನ್ ಗಳಿಸಿ ವಿಜಯೋತ್ಸವ ಆಚರಿಸಿದ ಶ್ರೀಲಂಕಾ 3ನೇ ಬಾರಿಗೆ ಕಿರಿಯರ ವಿಶ್ವಕಪ್ ಸೆಮಿಫೈನಲ್​ ತಲುಪಿದೆ. 2000ದ ವಿಶ್ವಕಪ್ ಫೈನಲ್​ನಲ್ಲಿ ಭಾರತ ವಿರುದ್ಧ ಸೋತಿದ್ದ ಲಂಕಾ, 2010ರಲ್ಲಿ ಉಪಾಂತ್ಯದಲ್ಲೇ ಎಡವಿತ್ತು.
ಇಂಗ್ಲೆಂಡ್: 49.2 ಓವರ್​ಗಳಲ್ಲಿ 184 (ಕ್ಯಾಲಂ ಟೇಲರ್ 42, ಗ್ರೀನ್ 26, ಹಸರಂಗ ಡಿಸಿಲ್ವ 34ಕ್ಕೆ 3, ಅಸಿತಾ ಫೆರ್ನಾಂಡೊ 16ಕ್ಕೆ 2),

ಶ್ರೀಲಂಕಾ: 35.4 ಓವರ್​ಗಳಲ್ಲಿ 4 ವಿಕೆಟ್​ಗೆ 186 (ಅವಿಷ್ಕಾ ಫೆರ್ನಾಂಡೊ 95, ಅಸಲಂಕಾ ಅಜೇಯ 34, ಲಾರೆನ್ಸ್ 33ಕ್ಕೆ 1).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opener Avishka Fernando struck a fluent 95 after Wanidu Hasanranga grabbed three wickets as Sri Lanka defeated England by six wickets in the quarter-final match here on Sunday and thus set up a semi-final clash against India in the Under-19 cricket World Cup.
Please Wait while comments are loading...