ಅಂಡರ್ 19 ವಿಶ್ವಕಪ್ : ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ

Posted By:
Subscribe to Oneindia Kannada

ಮೀರ್ಪುರ (ಬಾಂಗ್ಲಾದೇಶ), ಜ.29: ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ತರಬೇತಿ ನೀಡಿರುವ ಕಿರಿಯರ ತಂಡ ಶುಭಾರಂಭ ಮಾಡಿದೆ. ಐರ್ಲೆಂಡ್ ತಂಡವನ್ನು 79 ರನ್‌ಗಳ ಅಂತರದಿಂದ ಜಯ ದಾಖಲಿಸಿದೆ. ಸರ್ಫರಾಜ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಅವರು ಮತ್ತೊಮ್ಮೆ ಅರ್ಧಶತಕಗಳನ್ನು ಸಿಡಿಸಿ ಭಾರತದ ಗೆಲುವಿನ ರೂವಾರಿಗಳೆನಿಸಿದರು.

ಡಿ ಗುಂಪಿನ ಪಂದ್ಯದಲ್ಲಿ ಸರ್ಫ್‌ರಾಝ್ ಖಾನ್ (74) ಹಾಗೂ ವಾಷಿಂಗ್ಟನ್ ಸುಂದರ್ (62) ಗಳಿಸಿ 17.2 ಓವರ್ ಗಳಲ್ಲಿ 110ರನ್ ಕಲೆ ಹಾಕಿದರು . ಇದಕ್ಕೂ ಮುನ್ನ ಭಾರತ 55 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿತ್ತು. ಕೊನೆಗೆ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು.

Sarfaraz, Sundar guide India to 79-run win over Ireland

ಐರ್ಲೆಂಡ್ ತಂಡ ಲಾರ್ಕನ್ ಟಕರ್ (57) ಹಾಗೂ ವಿಲಿಯಮ್ ಮೆಕ್‌ಕ್ಲಿನ್‌ಟಕ್ (58) ಬಾರಿಸಿದ ಅರ್ಧಶತಕದ ಹೊರತಾಗಿಯೂ 49.1 ಓವರ್‌ಗಳಲ್ಲಿ 189 ರನ್‌ಗೆ ಆಲೌಟಾಯಿತು.ಐರ್ಲೆಂಡ್ 16.2 ಓವರ್‌ಗಳಲ್ಲಿ 46 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು.

5ನೇ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿದ ಟಕರ್ (57) ಹಾಗೂ ವಿಲಿಯಮ್ (58) ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು. ಭಾರತ ಪರ ರಾಹುಲ್ ಬಾಥಮ್ ಉತ್ತಮ ಬೌಲಿಂಗ್ ಮಾಡಿ 3/15 ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ ಅಂಡರ್-19 ತಂಡ: 50 ಓವರ್‌ಗಳಲ್ಲಿ 268/9

(ಸರ್ಫ್‌ರಾಝ್ ಖಾನ್ 74, ವಾಷಿಂಗ್ಟನ್ ಸುಂದರ್ 62, ಜೆ.ಲಿಟಲ್ 3-52, ಆಂಡರ್ಸನ್ 3/35)

ಐರ್ಲೆಂಡ್ ಅಂಡರ್-19 ತಂಡ: 49.1 ಓವರ್‌ಗಳಲ್ಲಿ 189 ರನ್‌ಗೆ ಆಲೌಟ್

(ಮೆಕ್‌ಕ್ಲಿನ್‌ಟಕ್ 58, ಟಕರ್ 57, ರಾಹುಲ್ ಬಾಥಮ್ 3-15, ಆವೇಶ್ ಖಾನ್ 2-24, ಲಾಮ್ರರ್ 2-28)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sarfaraz Khan and Washington Sundar blasted twin half-centuries as India notched up a comprehensive 79-run win over Ireland in their opening match to make a resounding start to their campaign at the ICC Under-19 World Cup here today (January 28).
Please Wait while comments are loading...