ರಿಷಬ್ ಪಂತ್ ಸೂಪರ್ ಆಟ, ಭಾರತ ಸೆಮಿಸ್ ಗೆ ಎಂಟ್ರಿ

Posted By:
Subscribe to Oneindia Kannada

ಫಾತುಲ್ಲಾ, ಫೆ. 06: ಇಂಡಿಯಾ ಕೋಲ್ಟ್ ಪರ ಆಡುತ್ತಿರುವ ರಿಷತ್ ಪಂತ್ ಗೆ ಶನಿವಾರ ಶುಭ ದಿನ. ಪಂತ್ ಅವರು ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿ ತಂಡವನ್ನು ಸೆಮಿಸ್ ಹಂತಕ್ಕೆ ತಲುಪಿಸಿದರು. ಇದರ ಬೆನ್ನಲ್ಲೇ ಐಪಿಎಲ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಸೇರಿದ್ದಾರೆ.

ರಿಷಬ್ ಪಂತ್ ಆವರಿಗೆ ಐಪಿಎಲ್ ಬಿಡ್ಡಿಂಗ್ ನಲ್ಲಿ 10 ಲಕ್ಷ ರು ನಿಗದಿ ಪಡಿಸಲಾಗಿತ್ತು. ಸನ್ ರೈಸರ್ಸ್ ಹೈದರಾಬಾದ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಬಿಡ್ಡಿಂಗ್ ಮಾಡಿದ್ದವು. ಆದರೆ, ಕೊನೆ ಕ್ಷಣದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ 1.9 ಕೋಟಿ ರು ನೀಡಿ ಪಂತ್ ಅವರನ್ನು ಖರೀದಿಸಿತು. [ಐಪಿಎಲ್ 2016 : ಮಾರಾಟವಾದ ಎಲ್ಲಾ ಆಟಗಾರರ ಪಟ್ಟಿ]

ಎಡಗೈ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರ 96 ಎಸೆತಗಳಲ್ಲಿ 111 ರನ್ ಗಳ ನೆರವಿನಿಂದ ನಮೀಬಿಯಾ ವಿರುದ್ಧ ಭಾರತ ನಿಗದಿತ 50 ಓವರ್ ಗಳಲ್ಲಿ 349/6 ಸ್ಕೋರ್ ಮಾಡಿತು. ಪಂತ್ ಗೆ ಅನ್ಮೋಲ್ ಪ್ರೀತ್ ಸಿಂಗ್ 41 ಹಾಗೂ ಸರ್ಫರಾಜ್ ಖಾನ್ 76 ಹಾಗೂ ಅರ್ಮಾನ್ ಜಾಫರ್ 64 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

Rishabh Pant powers India to semi-finals on his IPL 'Pay Day

ನಂತರ ಬೌಲಿಂಗ್ ನಲ್ಲಿ ಮಾಯಾಂಗ್ ಡಾಗರ್ 3/25 ಹಾಗೂ ವಾಷ್ಟಿಂಗ್ಟನ್ ಸುಂದರ್ 2/27 ವಿಕೆಟ್ ಕಿತ್ತು 39 ಓವರ್ ಗಳಲ್ಲಿ ನಮೀಬಿಯಾ ತಂಡ ಸರ್ವಪತನ ಕಾಣುವಂತೆ ಮಾಡಿದರು. ಈ ಮೂಲಕ ಭಾರತಕ್ಕೆ 197ರನ್ ಗಳ ಜಯ ಹಾಗೂ ಸೆಮಿಫೈನಲ್ ಗೆ ಎಂಟ್ರಿ ದೊರೆಕಿಸಿಕೊಟ್ಟರು.

ರಾಹುಲ್ ದ್ರಾವಿಡ್ ಅವರ ಸಮರ್ಥ ಕೋಚಿಂಗ್ ನೆರವಿನಿಂದ ಭಾರತ ಡಿ ಗುಂಪಿನ ಲೀಗ್ ಹಂತದಲ್ಲಿ ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳನ್ನು ಮಣಿಸಿ ಅಜೇಯವಾಗಿ ಉಳಿದುಕೊಂಡಿತ್ತು. ಸ್ಕಾಟ್ಲೆಂಡ್ ಮತ್ತು ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವನ್ನೇ ಮಣಿಸಿದ್ದ ನಮೀಬಿಯಾದ ಆಟ ಭಾರತದ ಮುಂದೆ ನಡೆಯಲಿಲ್ಲ.

ಸಂಕ್ಷಿಪ್ತ ಸ್ಕೋರ್:
ಭಾರತ 349/6, 50 ಓವರ್ಸ್ (ರಿಷಬ್ ಪಂತ್ 111, ಸರ್ಫರಾಜ್ ಖಾನ್ 76, ಫ್ರಿಟ್ಜ್ ಕೊಯ್ಜಿ 3/78)
ನಮೀಬಿಯಾ 152 ಆಲೌಟ್ 39 ಓವರ್ಸ್ (ನಿಕೋ ದಾವಿನ್ 33, ಮಾಯಾಂಕ್ ಡಾಗರ್ 3/25, ಅನ್ಮೊಲ್ ಪ್ರೀತ್ ಸಿಂಗ್ 3/27) (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It was a day of double delight for young Rishabh Pant as he guided the India colts to the semi-final of the ICC Under-19 World Cup here with a crushing 197-run win over Namibia besides fetching Rs 1.9 crore IPL deal with the Delhi Daredevils.
Please Wait while comments are loading...