ಕಣ್ಣೂರಿನ ವೇಗಿಯಿಂದ 10 ವಿಕೆಟ್ ಕಬಳಿಸಿ ದಾಖಲೆ

Posted By:
Subscribe to Oneindia Kannada

ಕಣ್ಣೂರು(ಕೇರಳ), ಮೇ 5: ಕ್ರಿಕೆಟ್‌ ಇತಿಹಾಸದಲ್ಲಿ ಅಪರೂಪಕ್ಕೆ ನಡೆಯುವಂಥ ದಾಖಲೆಯೊಂದು ಕಣ್ಣೂರಿನ ಬಲಗೈ ವೇಗಿ ನಝಿಲ್ ಪಾಲಾಗಿದೆ. ಜಿಮ್ ಲೇಕರ್, ಅನಿಲ್ ಕುಂಬ್ಳೆ ನೆನಪಿಸುವಂಥ ಸಾಧನೆ ನಝಿಲ್ ಮಾಡಿದ್ದಾರೆ. ಇನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಜೂನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಇಂಥದ್ದೊಂದು ದಾಖಲೆ ಕೇಳಿರಲಿಲ್ಲ. ಆದರೆ, ಕಣ್ಣೂರಿನ 18 ವರ್ಷ ವಯಸ್ಸಿನ ಯುವಕ ಸಿ.ಟಿ ನಝಿಲ್ ಜೂನಿಯರ್ ಅಂತರ್-ಜಿಲ್ಲಾ ಟೂರ್ನಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಮೊದಲ ಬಾರಿ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Record: 18-year-old Kerala boy Nazil CT bags 10-wickets in an innings

ಈಗಿನ್ನೂ ಇಂಟರ್ ಮೀಡಿಯೇಟ್ ಪರೀಕ್ಷೆ ಬರೆದಿರುವ ನಝಿಲ್ ಅವರು ಕಣ್ಣೂರಿನ ಕೆಸಿಎ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎರಡು ದಿನಗಳ ಅಂಡರ್-19 ಅಂತರ್-ಜಿಲ್ಲಾ ಕ್ರಿಕೆಟ್ ಪಂದ್ಯದ ಮೊದಲ ದಿನದಾಟದಲ್ಲೇ ಈ ಸಾಧನೆ ಮಾಡಿದರು.

ಮಲಪ್ಪುರಂ ತಂಡದ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದರು. ನಝಿಲ್ ಸಾಧನೆಯಿಂದ ಕಣ್ಣೂರು ತಂಡ ಮಲಪ್ಪುರಂ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 26 ರನ್‌ಗೆ ಆಲೌಟ್ ಮಾಡಿತ್ತು. ನಝಿಲ್ 9.4 ಓವರ್‌ಗಳಲ್ಲಿ 2 ಮೇಡನ್ ಸಹಿತ 12 ರನ್ ನೀಡಿ 10 ವಿಕೆಟ್ ಗಳಿಸಿದರು.

ಇಂಗ್ಲೆಂಡಿನ ಜಿಮ್ ಲೇಕರ್ ಅವರು 1956ರಲಿ 4ನೇ ಆಷ್ಯಸ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದು ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದರು. 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅನಿಲ್ ಕುಂಬ್ಳೆ ಅವರು 10 ವಿಕೆಟ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a rare feat, an 18-year-old bowler from Kanur (Kerala) became the first bowler to bag all 10 wickets in an innings in Kerala's junior inter-district tournament history.
Please Wait while comments are loading...