ಐಪಿಎಲ್ ನಿಂದ ಹರ್ಷ ಭೋಗ್ಲೆ ಹೊರಹಾಕಲು ಯಾರು ಕಾರಣ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಕ್ರಿಕೆಟ್ ಲೋಕದ ಜನಪ್ರಿಯ ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಇಂಡಿಯನ್ ಪ್ರಿಮಿಯರ್ ಲೀಗ್ 9ರಲ್ಲಿ ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿಲ್ಲ. ಐಪಿಎಲ್ ಆರಂಭಕ್ಕೂ ಒಂದು ವಾರ ಮೊದಲು ಹರ್ಷ ಭೋಗ್ಲೆ ಅವರ ಗುತ್ತಿಗೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಗೊಳಿಸಿರುವುದು ಬೆಳಕಿಗೆ ಬಂದಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಹರ್ಷ ಭೋಗ್ಲೆ ಅವರನ್ನು ವೀಕ್ಷಕ ವಿವರಣೆಗಾರರ ಪಟ್ಟಿಯಿಂದ ಹೊರ ಹಾಕಲು ಮಾಜಿ ಆಟಗಾರರು ಬಿಸಿಸಿಐ ಮೇಲೆ ಒತ್ತಡ ಹೇರಿದ್ದರು ಎಂಬ ಸುದ್ದಿ ಬಂದಿದೆ. ಜೊತೆಗೆ ಕಳೆದ ಎರಡು ದಿನಗಳಿಂದ ಭೋಗ್ಲೆ ಕರೆ ತನ್ನಿ ಅಭಿಯಾನ ಸಾಮಾಜಿಕ ಜಾಲ ತಾಣಗಳನ್ನು ನಡೆಯುತ್ತಿದೆ.

ಏನು ಕಾರಣ? : 54 ವರ್ಷದ ಭೋಗ್ಲೆ 9ನೇ ಆವೃತ್ತಿಯ ಐಪಿಎಲ್ ಹರಾಜು ಹಾಗೂ ಲೀಗ್ ಆರಂಭಕ್ಕೂ ಮುನ್ನ ಪ್ರಚಾರದ ವಿಡಿಯೋಗಳಲ್ಲಿ ಹರ್ಷ ಭೋಗ್ಲೆ ಕಾಣಿಸಿಕೊಂಡಿದ್ದರು. ಸೋನಿ ನೆಟ್​ವರ್ಕ್ ಐಪಿಎಲ್​ನ ಅಧಿಕೃತ ನೇರಪ್ರಸಾರ ವಾಹಿನಿಯಾಗಿದ್ದು, ಸೋನಿ ನೆಟ್ವರ್ಕ್ ಗುತ್ತಿಗೆಯಲ್ಲಿ ಹರ್ಷ ಭೋಗ್ಲೆ ಹೆಸರಿಲ್ಲ. ಆದರೆ, ಬಿಸಿಸಿಐ ಗುತ್ತಿಗೆಯಲ್ಲಿರುವ ಕಾಮೆಂಟೆಟರ್ ಗಳು ವೀಕ್ಷಕ ವಿವರಣೆ ಮಾಡಲು ಅವಕಾಶ ಇರುತ್ತದೆ.

ಯಾರೊಬ್ಬರೂ ನನಗೆ ಏನೂ ಹೇಳಿಲ್ಲ ː ಭೋಗ್ಲೆ

ಯಾರೊಬ್ಬರೂ ನನಗೆ ಏನೂ ಹೇಳಿಲ್ಲ ː ಭೋಗ್ಲೆ

ಯಾರೊಬ್ಬರೂ ನನಗೆ ಏನೂ ಹೇಳಿಲ್ಲ. ನನ್ನ ಕೈಬಿಡಲು ಕಾರಣ ವಾದರೂ ಏನು ಎನ್ನುವ ಬಗ್ಗೆ ಅಧಿಕೃತವಾಗಿ ಇನ್ನೂ ತಿಳಿಸಿಲ್ಲ. ಇದು ಬಿಸಿಸಿಐ ಆಡಳಿತದ ನಿರ್ಧಾರ ಎಂದಷ್ಟೇ ತಿಳಿದು ಬಂದಿದೆ.. ಐಪಿಎಲ್ ಜತೆ ಮತ್ತೆ ಸೇರಿಕೊಂಡರೆ ಸಂತಸಪಡುತ್ತೇನೆ. ಇದು ನನ್ನ ಫೇವರಿಟ್ ಟೂರ್ನಿ. ಐಪಿಎಲ್ 9 ಕೂಡ ಬ್ಲಾಕ್​ಬಸ್ಟರ್ ಹಿಟ್ ಆಗಲಿ ಎಂದು ಭೋಗ್ಲೆ ಟ್ವೀಟ್ ಮಾಡಿದ್ದರು.

ಬಿಗ್ ಬಿ ಮಾಡಿದ ಟ್ವೀಟ್ ಕಾರಣವೇ?

ಬಾಂಗ್ಲಾದೇಶ ವಿರುದ್ಧದ ಭಾರತ ಪಂದ್ಯದ ಬಗ್ಗೆ ಬಿಗ್ ಬಿ ಅಮಿತಾಬ್ ಮಾಡಿದ ಟ್ವೀಟ್ ಕಥೆ ಗೊತ್ತಿರಬಹುದು. ಭಾರತೀಯ ಕಾಮೆಂಟೆಟರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಎಲ್ಲರೂ ಸುನಿಲ್ ಗವಾಸ್ಕರ್ ಇರಬಹುದು ಎಂದು ಕೊಂಡಿದ್ದರು. ಆದರೆ, ಹರ್ಷ ಭೋಗ್ಲೆ ಯಾಕೆ ಆಗಿರಬಾರದು ಎಂಬ ಸಂಶಯ ಮೂಡುತ್ತಿದೆ.

ಹರ್ಷ ಭೋಗ್ಲೆ ಟಾಪ್ ಕ್ಲಾಸ್ ಕಾಮೆಂಟೆಟರ್

ಹರ್ಷ ಭೋಗ್ಲೆ ಟಾಪ್ ಕ್ಲಾಸ್ ಕಾಮೆಂಟೆಟರ್ ಅವರು ಇರಬೇಕು ಎಂದ ಅಭಿಮಾನಿಗಳು

ವಿಸಿಎ ಅಧಿಕಾರಿ ಜತೆ ಗಲಾಟೆ

ವಿಸಿಎ ಅಧಿಕಾರಿ ಜತೆ ಗಲಾಟೆ

ನಾಗ್ಪುರದಲ್ಲಿ ನಡೆದ ಟಿ20 ವಿಶ್ವಕಪ್​ನ ಉದ್ಘಾಟನಾ ಪಂದ್ಯದ ವೇಳೆ ವಿದರ್ಭ ಕ್ರಿಕೆಟ್ ಸಂಸ್ಥೆಯ (ವಿಸಿಎ) ಅಧಿಕಾರಿಗಳೊಂದಿಗೆ ಹರ್ಷ ಭೋಗ್ಲೆ ಜಗಳವಾಡಿದ್ದರು. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ತವರು ಅಸೋಸಿಯೇಷನ್ ವಿದರ್ಭ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಭೋಗ್ಲೆ ವಿರುದ್ಧ ದೂರು ನೀಡಿದ್ದರು. ಈ ಕಾರಣಕ್ಕಾಗಿ ಭೋಗ್ಲೆ ಅವರನ್ನು ಕೊನೆಯ ಕ್ಷಣದಲ್ಲಿ ಐಪಿಎಲ್ ಕಾಮೆಂಟೆಟರ್ಸ್ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ನಟ ಆಯುಷ್ಮನ್ ಖುರಾನಾ ಅವರ ಟ್ವೀಟ್

ನಟ ಆಯುಷ್ಮನ್ ಖುರಾನಾ ಅವರು ಟ್ವೀಟ್ ಮಾಡಿ ಐಪಿಎಲ್ 3ರಲ್ಲಿ ನನಗೆ ನಿರೂಪಣೆ ಮಾಡಲು ಹರ್ಷ ಸ್ಫೂರ್ತಿ ತುಂಬಿದ್ದರು ಎಂದಿದ್ದಾರೆ.

ಹರ್ಷ ಇಲ್ಲದಿದ್ದರೆ ಕೊಹ್ಲಿ ಇಲ್ಲದ ಭಾರತ ತಂಡದಂತೆ

ಹರ್ಷ ಭೋಗ್ಲೆ ಇಲ್ಲದ ಕಾಮೆಂಟ್ರಿ ಟೀಂ, ಕೊಹ್ಲಿ ಇಲ್ಲದ ಟೀಂ ಇಂಡಿಯಾದಂತೆ.

ಅಮಿತಾಬ್ ವಿರುದ್ಧ ಕಿಡಿಕಾರಿದ ಅಭಿಮಾನಿಗಳು

ಹರ್ಷ ಭೋಗ್ಲೆ ಹೊರಹಾಕಲು ಅಮಿತಾಬ್ ಟ್ವೀಟ್ ಕಾರಣ ಎಂದು ಕಿಡಿಕಾರಿದ ಅಭಿಮಾನಿಗಳು

ಸಿದ್ದು ಹೊರಕ್ಕೆ ಹಾಕಿ, ಹರ್ಷ ಭೋಗ್ಲೆ ಕರೆ ತನ್ನಿ

ಸಿದ್ದು ಹೊರಕ್ಕೆ ಹಾಕಿ, ಹರ್ಷ ಭೋಗ್ಲೆ ಕರೆ ತನ್ನಿ ಎಂಬ ಟ್ವೀಟ್ಸ್ ಗಳು ಹರಿದು ಬಂದಿವೆ.

ಖಡಕ್ ಪೊಲೀಸ್ ಅಧಿಕಾರಿ ಪರಿಸ್ಥಿತಿಯಲ್ಲಿ ಹರ್ಷ

ಖಡಕ್ ಪೊಲೀಸ್ ಅಧಿಕಾರಿ ಪರಿಸ್ಥಿತಿಯಲ್ಲಿ ಹರ್ಷ ಇದ್ದಾರೆ, ಸರಿಯಾಗಿ ಕರ್ತವ್ಯ ನಿರ್ವಹಿಸಿದರೂ ಅಮಾನತಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twitter Reactions: Popular Indian cricket commentator Harsha Bhogle would not be commentating on the ongoing season of the Indian Premier League. The Board of Control for Cricket in India terminated its commentary contract with Bhogle without providing an explanation.
Please Wait while comments are loading...