ಟ್ವೀಟ್ಸ್ : ಧೋನಿ ರೀಲ್-ರಿಯಲ್ ಲೈಫ್ ಕಹಾನಿ ಸೂಪರ್

Posted By:
Subscribe to Oneindia Kannada

ಮುಂಬೈ, ಸೆ. 30: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಜೀವನ ಆಧಾರಿತ 'ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರ ಸೆಪ್ಟೆಂಬರ್ 30ರಂದು ವಿಶ್ವದೆಲ್ಲೆಡೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು, ಸಿನಿಪ್ರೇಮಿಗಳು ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಬನ್ನಿ ಟ್ವೀಟ್ಸ್ ಓದಿ ತಿಳಿಯೋಣ...

ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಕುರಿತ 'ಅಜರ್', ದಕ್ಷಿಣ ಆಫ್ರಿಕಾದ ಕ್ರಿಕೆಟರ್ ದಿವಂಗತ ಹ್ಯಾನ್ಸಿ ಕ್ರೋನಿಯೆ ಕುರಿತ' ಹ್ಯಾನ್ಸಿ" ಎ ಟ್ರೂ ಸ್ಟೋರಿ' ಹಾಗೂ ಸಚಿನ್ ತೆಂಡೂಲ್ಕರ್ ಕುರಿತ ಸಚಿನ್ : ಎ ಬಿಲಿಯನ್ ಡ್ರೀಮ್ಸ್ ಎಂಬ ಚಿತ್ರಗಳಂತೆ ಧೋನಿ ಚಿತ್ರ ಕೂಡಾ ಕ್ರಿಕೆಟ್, ಕ್ರಿಕೆಟರ್ ಬಗ್ಗೆ ತಯಾರಾದ ಚಿತ್ರವಾಗಿದೆ.[ಧೋನಿಯ ನಂ.1 ಗೆಳೆಯ Ad ಚಿತ್ರ ಸೂಪರ್ ಗುರೂ!]

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಮುನ್ನ ಕ್ರಿಕೆಟರ್ ರೊಬ್ಬರ ಸಿನಿಮಾ ಆಗುತ್ತಿರುವುದು ಇದೇ ಮೊದಲು. ಎಂ ಎಸ್ ಧೋನಿ ಜೀವನ ಚರಿತ್ರೆ ಆಧಾರಿತ ಸಿನಿಮಾ ಬರುತ್ತಿರುವುದು ಇದೇ ಫಸ್ಟ್. ತಮ್ಮ ಜೀವನಾಧರಿತ ಚಿತ್ರ ನಿರ್ಮಾಣಕ್ಕೆ, ಚಿತ್ರ ನಿರ್ಮಾಪಕರಿಂದ ಧೋನಿ ಬರೋಬ್ಬರಿ 60 ಕೋಟಿ ಹಣ ಪಡೆದಿದ್ದಾರೆ ಎಂಬ ಸುದ್ದಿಯಿದೆ. [ಧೋನಿ ಚಿತ್ರದಲ್ಲಿ ನನ್ನ ಬಗ್ಗೆ ಏನು ಇಲ್ಲದಿದ್ದರೆ ಸಾಕು: ಲಕ್ಷ್ಮಿ ರೈ]

ಧೋನಿ ಸ್ಟೈಲ್, ಮ್ಯಾನರಿಸಂ, ವಿಶ್ವಕಪ್ ಗೆಲುವು, ಧೋನಿ ಟಿಕೆಟ್ ಕಲೆಕ್ಟರ್ ವೃತ್ತಿಯಿಂದ ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿದ್ದು ಎಲ್ಲವನ್ನು ನೋಡಿ ಪ್ರೇಕ್ಷಕ ಥ್ರಿಲ್ ಆಗಿದ್ದಾನೆ. ಮೊದಲ ದಿನದ ಮೊದಲ ಶೋ ನಂತರದ ಟ್ವೀಟ್ ರಿಪೋರ್ಟ್ ಇಲ್ಲಿದೆ...

ಸುಶಾಂತ್ ನಟನೆ ಹೈಲೈಟ್, ಸಿನಿಮಾ ಹೇಗಿದೆ?

ಸುಶಾಂತ್ ನಟನೆ ಹೈಲೈಟ್, ಸಿನಿಮಾ ಹೇಗಿದೆ?

'ಕಾಯ್ ಪೋಚೆ' ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಧೋನಿ ಅವರ ಬಾಡಿ ಲಾಂಗ್ವೇಜ್ ನ್ನು, ಸಿನಿಮಾದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅದರಲ್ಲೂ ವಿಶ್ವಕಪ್ ಫೈನಲ್ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೆಲಿಕಾಪ್ಟರ್ ಶಾಟ್ ದೃಶ್ಯ ರೋಮಾಂಚನಕಾರಿ ಎಂದು ಪ್ರೇಕ್ಷಕರು ಹೇಳಿದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯದ ಗೆಲುವು

ವಿಶ್ವಕಪ್ ಫೈನಲ್ ಪಂದ್ಯದ ಗೆಲುವು, ಧೋನಿ ಹೊಡೆದ ಆ ಹೊಡೆತ ರೋಮಾಂಚನಕಾರಿ ಎಂದ ಅಭಿಮಾನಿಗಳು.

ಚಿತ್ರದ ವಿಮರ್ಶೆ ಆಮೇಲೆ, ಪ್ರಯತ್ನಕ್ಕೆ ಹ್ಯಾಟ್ಸಾಫ್

ಚಿತ್ರದಲ್ಲಿ ನೆನಪಲ್ಲಿ ಉಳಿಯುವ ಅನೇಕ ಅಂಶಗಳಿವೆ, ಸನ್ನಿವೇಶಗಳಿವೆ. ಮತ್ತೆ ಮತ್ತೆ ನೋಡಲು ಬಯಸುವ ದೃಶ್ಯಗಳಿವೆ. ಚಿತ್ರದ ವಿಮರ್ಶೆ ಆಮೇಲೆ, ಇಂಥ ಪ್ರಯತ್ನಕ್ಕೆ ತಲೆಬಾಗಬೇಕಿದೆ.

ಸುಶಾಂತ್ ನಲ್ಲಿ ಧೋನಿ ಕಾಣುತ್ತಿರುವ ಅಭಿಮಾನಿಗಳು

ಸುಶಾಂತ್ ನಲ್ಲಿ ಧೋನಿ ಕಾಣುತ್ತಿರುವ ಅಭಿಮಾನಿಗಳು ಥ್ರಿಲ್ ಆಗಿ ಏನು ಹೇಳಿದ್ದಾರೆ ಮೊದಲ ದಿನದ ಮೊದಲ ಶೋ ವಿಡಿಯೋ ನೋಡಿ

ಧೋನಿ ಜೀವನ ಕಥೆಯನ್ನು ತೆಲುಗು, ತಮಿಳಿನಲ್ಲಿ ವೀಕ್ಷಿಸಿ

ಧೋನಿ ಜೀವನ ಕಥೆಯನ್ನು ತೆಲುಗು, ತಮಿಳಿನಲ್ಲಿ ವೀಕ್ಷಿಸಿ ಆನಂದಿಸುತ್ತಿರುವ ಆಂಧ್ರ ಹಾಗೂ ತಮಿಳುನಾಡಿನ ಅಭಿಮಾನಿಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Twitter Reaction to MS Dhoni Untold Story First Day First Show. Actor Sushant Singh Rajput,has played the role of the captain of the Cricket team.
Please Wait while comments are loading...