ಕೊಹ್ಲಿ 'ವಿರಾಟ್' ಪ್ರದರ್ಶನ, ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್

Posted By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 20: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ನಂಬುಗೆಯ ಆಟಗಾರ ವಿರಾಟ್ ಕೊಹ್ಲಿ ಅವರ ಪರಾಕ್ರಮದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್


ಪಾಕಿಸ್ತಾನ ವಿರುದ್ಧದ ಗೆಲುವನ್ನು 'ಕ್ರಿಕೆಟ್ ದೇವರು' ಸಚಿನ್ ಹಾಗೂ ಅಭಿಮಾನಿಗಳಿಗೆ ಕೊಹ್ಲಿ ಅರ್ಪಿಸಿದ್ದಾರೆ. ಆದರೆ, ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮಾತ್ರ ಎಲ್ಲರೂ ನಟಿ ಅನುಷ್ಕಾ ಶರ್ಮರಿಗೆ 'ಥ್ಯಾಂಕ್ಸ್' ಹೇಳಿ, ಕಿಚಾಯಿಸಿದ್ದಾರೆ. [ಪಂದ್ಯದ ಸ್ಕೋರ್ ಕಾರ್ಡ್]

ಶನಿವಾರ(ಮಾರ್ಚ್ 19)ದಂದು ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವಿಶ್ವ ಟಿ 20ಯ ಸೂಪರ್ 10 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ದಾಖಲಿಸಿದೆ. ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 11-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.[ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ ಸಾಧನೆ]

ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 55ರನ್ ಗಳಿಸಿ ಅಜೇಯರಾಗಿ ಉಳಿದರೆ, ಧೋನಿ 13 ರನ್ ಗಳಿಸಿ ಜಯದ ನಗೆ ಬೀರಿದರು. ಕೊಹ್ಲಿ ಅವರೊಬ್ಬ ಭಗ್ನ ಪ್ರೇಮಿಯಾಗಿದ್ದಾರೆ ಹೀಗಾಗಿ ಆವರಿಂದ ಈ ರೀತಿ ಆಕ್ರೋಶಭರಿತ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದೆ ಎಂಬರ್ಥದ ಟ್ವೀಟ್ಸ್, ಟ್ರಾಲ್ಸ್ ಎಲ್ಲೆಡೆ ಹರಿದಾಡುತ್ತಿದೆ.ಇದರ ಜೊತೆಗೆ ನಟಿ ಅನುಷ್ಕಾ ಶರ್ಮ ಅವರನ್ನು ಅಣಕಿಸುವ, ಕಿಚಾಯಿಸುವ ಟ್ವೀಟ್ಸ್ ಇಲ್ಲಿವೆ.[ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು]

ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ

ಇಬ್ಬರ ನಡುವಿನ ವಿರಸದ ಕಾರಣ ಬಹಿರಂಗ

ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದ್ದು, 40 ಕೋಟಿ ರು ಮೊತ್ತ ಎನ್ನಲಾಗಿದೆ. ಅನುಷ್ಕಾ ಹಾಗೂ ರಣವೀರ್ ಕಪೂರ್ ಅಭಿನಯದ ಹಿಂದಿ ಚಿತ್ರ ಬಾಂಬೆ ವೆಲ್ವೆಟ್ ಸುಮಾರು 120 ಕೋಟಿ ರು ವೆಚ್ಚದಲ್ಲಿ ತಯಾರಾಗಿತ್ತು. ಇದರಲ್ಲಿ 40 ಕೋಟಿ ರು ಮೊತ್ತವನ್ನು ವಿರಾಟ್ ಕೊಹ್ಲಿ ಅವರು ಹಾಕಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಕೇವಲ 24 ಕೋಟಿ ರು ಕಲೆಕ್ಷನ್ ಮಾಡಿತ್ತು.

ವಿಶ್ವ ಟಿ20 ಕಪ್ ನಮ್ಮದೇ, ಆದರೆ

ವಿಶ್ವ ಟಿ20 ಕಪ್ ನಮ್ಮದೇ, ಆದರೆ, ವಿರಾಟ್ ಕೊಹ್ಲಿಗೆ ಅನುಷ್ಕಾ ಕರೆ ಮಾಡದಿದ್ದರೆ ಸಾಕು. ಏಷ್ಯಾಕಪ್ ಪಂದ್ಯದಲ್ಲಿ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡಿದ ಮೇಲೆ ಕೊಹ್ಲಿಗೆ ಅನುಷ್ಕಾ ಕರೆ ಮಾಡಿ ಅಭಿನಂದಿಸಿದ್ದರು ಎನ್ನಲಾಗಿತ್ತು.

ಕೊಹ್ಲಿ ಮಣಿಕಟ್ಟಿನ ಆಟ ಸೂಪರ್

ಕೊಹ್ಲಿ ಮಣಿಕಟ್ಟಿನ ಆಟ ಸೂಪರ್, ಅದು ಕೂಡಾ ಅನುಷ್ಕಾ ತ್ಯಾಗದ ಫಲ, ಆಕೆ ಜತೆ ಬ್ರೇಕ್ ಅಪ್ ಅದ ಮೇಲೆ ಈ ಬೆಳವಣಿಗೆ.

ಅನುಷ್ಕಾ ಶರ್ಮಗೆ ಸ್ಪೆಷಲ್ ಥ್ಯಾಂಕ್ಸ್

ಅನುಷ್ಕಾ ಶರ್ಮಗೆ ಸ್ಪೆಷಲ್ ಥ್ಯಾಂಕ್ಸ್, ಇಡೀ ದೇಶ ನಿಮ್ಮ ತ್ಯಾಗವನ್ನು ಕೊಂಡಾಡಬೇಕಿದೆ.

ಅನುಷ್ಕಾ ಶರ್ಮ ಬಗ್ಗೆ ಅನುಕಂಪದ ಟ್ವೀಟ್ಸ್

ಅನುಷ್ಕಾ ಶರ್ಮ ಬಗ್ಗೆ ಅನುಕಂಪದ ಟ್ವೀಟ್ಸ್ ಕೂಡಾ ಬಂದಿದ್ದು, ಆಕೆಯನ್ನು ಎಲ್ಲದ್ದಕ್ಕೂ ದೂಷಿಸಬೇಡಿ ಎಂದು ಕೋರಲಾಗಿದೆ.

ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದು ಸತ್ಯ

ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದು ಸತ್ಯ, ಆದರೆ, ಅನುಷ್ಕಾ ತುಂಬಾ ಹಿಂದೆ ಇದ್ದಾರೆ.

ಕೊಹ್ಲಿ ನಮಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್

ಕೊಹ್ಲಿ ನಮಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಅನುಷ್ಕಾಗೆ ಟ್ವೀಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian middle order's most trusted soldier Virat Kohli anchored a tricky chase to enable his side humble arch-rivals Pakistan by six wickets in a rain-curtailed World Twenty 20 group 2 tie at the packed Eden Gardens here on Saturday.
Please Wait while comments are loading...