ವಿಶ್ವದಾಖಲೆ ಬರೆದ ಧೋನಿ 'ಮಿಂಚಿನ ಸ್ಟಂಪಿಂಗ್' ಸೂಪರ್ !

Posted By:
Subscribe to Oneindia Kannada

ಮೊಹಲಿ, ಅಕ್ಟೋಬರ್ 23: ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಅವರು ಏಕದಿನ ಕ್ರಿಕೆಟ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಅತ್ಯಂತ ತ್ವರಿತಗತಿಯಲ್ಲಿ ಸ್ಟಂಪಿಂಗ್ ಮಾಡುವ ಮೂಲಕ 151 ವಿಕೆಟ್ ಉರುಳಿಸಿದ್ದು ವಿಶ್ವದಾಖಲೆಯಾಗಿದೆ.

ಪಂದ್ಯದ ಸ್ಕೋರ್ ಕಾರ್ಡ್

ಒಟ್ಟಾರೆ 444 ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಧೋನಿ ಅವರು 151 ಸ್ಟಂಪಿಂಗ್ಸ್ ಸಾಧಿಸಿದ್ದಾರೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾನುವಾರದಂದು ಮೊಹಾಲಿಯಲ್ಲಿ ಕೂಡಾ ಧೋನಿ ಕೈಚಳಕ ಎಲ್ಲರನ್ನು ಸೆಳೆಯಿತು.

Twitter hails 'lightening quick' MS Dhoni behind wickets in 3rd ODI

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ಬೌಲಿಂಗ್ ನಲ್ಲಿ ಲೂಕ್ ರಾನ್ಕಿ ಅವರನ್ನು ಧೋನಿ ಅತ್ಯಂತ ತ್ವರಿತಗತಿಯಲ್ಲಿ ಸ್ಟಂಪ್ ಔಟ್ ಮಾಡಿದರು. 35 ವರ್ಷ ವಯಸ್ಸಿನ ಧೋನಿ ಅವರ ವಿಕೆಟ್ ಕೀಪಿಂಗ್ ಬಗ್ಗೆ ಮೂಗೆಳೆಯುತ್ತಿದ್ದವರಿಗೆ ಈ ದಾಖಲೆ ಸಾಧನೆಗೆ ಹಿಡಿದ ಕನ್ನಡಿಯಾಗಲಿದೆ.

ಧೋನಿ ಅವರ ಸಾಧನೆ ಮೆಚ್ಚಿ ಬಂದಿರುವ ಒಂದಷ್ಟು ಟ್ವೀಟ್ಸ್ ಇಲ್ಲಿದೆ:

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India's limited overs' skipper Mahendra Singh Dhoni is widely hailed as the quickest wicketkeeper in the game. He achieved yet another milestone by affecting 151 stumpings in international cricket in 444 matches, which is a world record.
Please Wait while comments are loading...