ಕ್ರಿಕೆಟರ್ ಕರುಣ್ ನಾಯರ್ ವ್ಯಾಲೆಂಟೈನ್ ಯಾರು ಗೊತ್ತಾಯ್ತಾ?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 17: ಸೆಹ್ವಾಗ್ ಬಳಿಕ ತ್ರಿಶತಕ ಬಾರಿಸಿದ ವೀರ, ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರು ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ವ್ಯಾಲೆಂಟೈನ್ ಪರಿಚಯಿಸಿದ್ದಾರೆ.

ಕರುಣ್ ಅವರ ವ್ಯಾಲೆಂಟೈನ್ ಸಕತ್ತಾಗಿದೆ.ಕರುಣ್ ನಾಯರ್ ಇತ್ತೀಚೆಗೆ ತಾವು ಖರೀದಿಸಿದ ಹೊಚ್ಚ ಹೊಸಫೋರ್ಡ್ ಮುಸ್ತಾಂಗ್ ಕಾರಿನ ಫೋಟೋ ಶೇರ್ ಮಾಡಿದ್ದು ಅದನ್ನು ಅವರ ವ್ಯಾಲೆಂಟೈನ್ ಎಂದು ಹೇಳಿಕೊಂಡಿದ್ದಾರೆ.

Triple centurion Karun Nair reveals his valentine

ಸಾಮಾನ್ಯವಾಗಿ ನೆಚ್ಚನ ಸಂಖ್ಯೆ, ಸಾಧನೆಯ ನೆನಪನ್ನು ಕಾರು, ಬೈಕು ನೋಂದಣಿ ಸಂಖ್ಯೆಯಾಗಿ ಸೆಲೆಬ್ರಿಟಿಗಳು ಬಳಸುತ್ತಾರೆ. ಕರುಣ್ ಅವರ ಕಾರಿನ ನಂಬರ್ ಪ್ಲೇಟ್ ಎಲ್ಲರ ಗಮನ ಸೆಳೆಯುತ್ತಿದೆ.

ಕರುಣ್ ಕಾರಿನ ರಿಜಿಸ್ಟ್ರೇಶನ್ ಸಂಖ್ಯೆ KA 03 NA 303. 303 ಹಾಗೂ ಕರುಣ್ ಗೆ ಏನು ನಂಟು ಎಂಬುದು ಎಲ್ಲರಿಗೂ ಗೊತ್ತಿದೆ. ತಮ್ಮ 3ನೇ ಇನ್ನಿಂಗ್ಸ್ ನಲ್ಲಿ 303 ರನ್ ಚೆಚ್ಚಿದ ಕರುಣ್ ಅವರು ಈ ಕೆಂಪು ಬಣ್ಣದ ಸುಂದರ ಕಾರಿಗೆ ಬಳಸಿಕೊಂಡಿದ್ದಾರೆ. ಕರ್ನಾಟಕ(KA), NAIR(NA) ಕೂಡಾ ಸೂಕ್ತವಾಗಿದೆ.

ವೀರೇಂದ್ರ ಸೆಹ್ವಾಗ್ ಅವರು 2004 ಹಾಗೂ 2008ರಲ್ಲಿ ಕ್ರಮವಾಗಿ ತ್ರಿಶತಕಗಳನ್ನು (309 ಹಾಗೂ 319) ಬಾರಿಸಿದ ಬಳಿಕ ಟೀಂ ಇಂಡಿಯಾ ಪರ ಸುದೀರ್ಘ ಇನಿಂಗ್ಸ್ ಆಡಿದ ಕರುಣ್ ಅವರು ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಫೆಬ್ರವರಿ 23ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಕರುಣ್ ಸಿದ್ಧರಾಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Triple centurion Karun Nair has revealed his Valentine. Nair has tweeted a picture of a red car as ‘My Valentine’. for his fans "she is beautiful".
Please Wait while comments are loading...