ತಂಡದಿಂದ ಹೊರಬಿದ್ದು, 'ದುರಂತ' ದಾಖಲೆ ಬರೆದ ಕರುಣ್ ನಾಯರ್!

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 09: ಟೆಸ್ಟ್ ಇತಿಹಾಸದಲ್ಲೇ ಉತ್ತಮ ಸಾಧನೆ ಬರೆದ ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರ ಅಜೇಯ 303ರನ್ ಅವರನ್ನು ತಂಡದಲ್ಲಿ ಉಳಿದುಕೊಳ್ಳಲು ಸಾಧ್ಯವಾಗದಿದ್ದರೂ, ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.

ಹೈದರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಗುರುವಾರ(ಫೆಬ್ರವರಿ 09) ಆರಂಭವಾದ ಪಂದ್ಯದಲ್ಲಿ ತ್ರಿಶತಕ ವೀರ ಕರುಣ್ ಬದಲಿಗೆ ಅಜಿಂಕ್ಯ ರಹಾನೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಕರ್ನಾಟಕದಲ್ಲಿ ಹೆಚ್ಚಿನ ಕೂಗೆದ್ದಿಲ್ಲ.

Triple centurion Karun Nair claims unwanted Test record

ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಲು 25 ವರ್ಷ ವಯಸ್ಸಿನ ಕರುಣ್ ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದರು. ಆದರೆ, ಟೆಸ್ಟ್ ಇತಿಹಾಸದಲ್ಲೇ ಫಿಟ್ ಇದ್ದು, ಲಯದಲ್ಲಿದ್ದು, ಅರ್ಹತೆ ಇದ್ದರೂ ಆಯ್ಕೆಯಾಗದ ದುರಂತ ಆಟಗಾರರ ದಾಖಲೆ ಪಟ್ಟಿಗೆ ಕರುಣ್ ನಾಯರ್ ಸೇರಿದ್ದಾರೆ. ತ್ರಿಶತಕ ಗಳಿಸಿದ ನಂತರ ತಂಡದಿಂದ ಕಡೆಗಣಿಸಲ್ಪಟ್ಟ ಆಟಗಾರರ ಪಟ್ಟಿಯಲ್ಲಿ ಆಂಡಿ ಸ್ಯಾಂಡಮ್, ಲೆನ್ ಹಟನ್, ಇನ್ಜಮಾಮ್ ಉಲ್ ಹಕ್ ನಂತರ ಕರುಣ್ ಕೂಡಾ ಸೇರಿದ್ದಾರೆ.

ಡಿಸೆಂಬರ್ 19, 2016ರಂದು ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರುಣ್ 303 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಸೆಹ್ವಾಗ್ ನಂತರ ತ್ರಿಶತಕ ಬಾರಿಸಿದ ಸಾಧನೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India cricketer Karun Nair earned the dubious distinction of being only the second fit batsman in the history of Test cricket to be dropped from the playing XI after scoring a triple hundred in his previous Test match.
Please Wait while comments are loading...