ಏ. 13ಕ್ಕೆ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಟ್ರೈಲರ್ ಬಿಡುಗಡೆ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 12: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ತಯಾರಿಸಲಾಗಿರುವ ಚಲನಚಿತ್ರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ನ ಟ್ರೈಲರ್ ಏಪ್ರಿಲ್ 13ರಂದು ಬಿಡುಗಡೆಯಾಗಲಿದೆ. ಖುದ್ದು ಸಚಿನ್ ತೆಂಡೂಲ್ಕರ್ ಅವರೇ ಟ್ವಿಟರ್ ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.

22 ಅಡಿಯ ಕ್ರೀಸ್ ನಾಚೆಗಿನ ನನ್ನ ಜೀವನದ ಪಯಣವನ್ನು ನೋಡಬನ್ನಿ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿರುವುದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

Trailer of Sachin Tendulkar's 'Billion Dreams' movie to be released on April 13

ಚಿತ್ರದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅಭಿನಯಿಸಿರುವುದು ವಿಶೇಷ.

ಜೇಮ್ಸ್ ಇರ್ಸ್ ಕೈನ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವು ತೆಂಡೂಲ್ಕರ್ ಅವರ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ ಹೆಣೆದ ಕಥೆಯನ್ನು ಹೊಂದಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ಒದಗಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian batting legend Sachin Tendulkar has confirmed that the trailer of his movie 'Sachin A Billion Dreams' will be launched on April 13. The master blaster confirmed the news via his official twitter account which is followed by 15.4 million people.
Please Wait while comments are loading...