ಪ್ರಪ್ರಥಮ ಬಾರಿಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಫ್ಘಾನಿಸ್ತಾನ

Posted By:
Subscribe to Oneindia Kannada

ದುಬೈ, ಡಿ. 28: ವಿಶ್ವ ಟಿ 20 ಅರ್ಹತೆಗಾಗಿ ಭಾರತದಲ್ಲಿ ಸೆಣೆಸಾಟ ನಡೆಸಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮಹತ್ತರ ಸಾಧನೆ ಮಾಡಿದೆ. ಪ್ರಪ್ರಥಮ ಬಾರಿಗೆ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ 49 ರನ್ ಅಂತರದ ಜಯ ದಾಖಲಿಸಿದ ಅಫ್ಘಾನಿಸ್ತಾನ ಈಗ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. [ಸ್ಟೀವ್ ಸ್ಮಿತ್ ಗೆ ಐಸಿಸಿ ಕ್ರಿಕೆಟರ್ 2015 ಪ್ರಶಸ್ತಿ]

Afghanistan at No 10

ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಸರಣಿ ಮುಗಿದ ಬಳಿಕ ಶ್ರೇಯಾಂಕ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದೆ. ಟೆಸ್ಟ್ ಮಾನ್ಯತೆ ಪಡೆಯದ ತಂಡವೊಂದು ಇದೇ ಮೊದಲ ಬಾರಿಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 10 ಸ್ಥಾನದೊಳಗೆ ಕಾಣಿಸಿಕೊಂಡಿದೆ.

ಆಸ್ಟ್ರೇಲಿಯಾ ತಂಡ ಅಗ್ರಸ್ಥಾನ ಕಾಯ್ದುಕೊಂಡಿದ್ದು 44 ಪಂದ್ಯಗಳಿಂದ 5569 ಅಂಕ ಗಳಿಸಿ 127 ರೇಟಿಂಗ್ ಪಡೆದುಕೊಂಡಿದೆ. ಭಾರತ 56 ಪಂದ್ಯಗಳಿಂದ 114 ರೇಟಿಂಗ್ ಗಳಿಸಿ 2ನೇ ಸ್ಥಾನ ಕಾಯ್ದುಕೊಂಡಿದೆ.


57 ಪಂದ್ಯಗಳನ್ನಾಡಿ 112 ರೇಟಿಂಗ್ ಗಳಿಸಿರುವ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ 21 ಪಂದ್ಯಗಳಿಂದ 48 ರೇಟಿಂಗ್ ಗಳಿಸಿ 10ನೇ ಸ್ಥಾನ ಗಳಿಸಿದೆ. ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡ ಜಿಂಬಾಬ್ವೆ 45 ರೇಟಿಂಗ್ ಪಡೆದ್ಯ್ 12ನೇ ಸ್ಥಾನಕ್ಕೆ ಕುಸಿದಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Afghanistan break into top 10 of ICC ODI rankings, India retain 2nd spot.The Afghanistan cricket team has managed to reach the top 10 of the ICC ODI Rankings for the first time ever.
Please Wait while comments are loading...