ಐಪಿಎಲ್ 10 : ಪ್ಲೇ ಆಫ್ ಗೂ ಮುನ್ನ ಟಾಪ್ 10 ಬೌಲರ್ಸ್

Posted By:
Subscribe to Oneindia Kannada

ಬೆಂಗಳೂರು, ಮೇ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ಸದ್ದು ಮಾಡುತ್ತಾರೆ. ಆದರೆ, ಐಪಿಎಲ್ 10ರಲ್ಲಿ ಬ್ಯಾಟ್ಸ್ ಮನ್ ಗಳ ಸರಿ ಸಮವಾಗಿ ಬೌಲರ್ ಗಳು ಮಿಂಚಿದ್ದಾರೆ.

ಐಪಿಎಲ್ 10ರಲ್ಲಿ ಸ್ಪಿನ್ನರ್ ಗಳಲ್ಲದೆ ಭಾರತದ ಯುವ ವೇಗಿಗಳು ಗಮನ ಸೆಳೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸಿನಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಎಲ್ಲರಿಗಿಂತ ಮುಂದಿದ್ದಾರೆ. ಲೀಗ್ ಹಂತದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಭುವನೇಶ್ವರ್ ಕುಮಾರ್ ಕಣ್ಣು ಪರ್ಪಲ್ ಕ್ಯಾಪ್ ಮೇಲಿದೆ.[ಐಪಿಎಲ್ : ಪ್ಲೇ ಆಫ್ ಗೂ ಮುನ್ನ ಟಾಪ್ 10 ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ವಾರ್ನರ್ ಮುಂದೆ]

ಭುವನೇಶ್ವರ್ ಕುಮಾರ್ ಅವರು 13 ಪಂದ್ಯಗಳಿಂದ 25 ವಿಕೆಟ್ ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಪ್ಲೇ ಆಫ್ ಹಂತದಲ್ಲಿ ಟಾಪ್ 10 ಪಟ್ಟಿಯಲ್ಲಿ 6 ಮಂದಿ ಭಾರತದ ಬೌಲರ್ ಗಳಿದ್ದಾರೆ. ಟಾಪ್ 10 ಪಟ್ಟಿ ಮುಂದೆ ಓದಿ...

#1 ಭುವನೇಶ್ವರ್ ಕುಮಾರ್

#1 ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್ ಅವರು 13 ಪಂದ್ಯಗಳಿಂದ 25 ವಿಕೆಟ್ ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ ಪ್ರಮುಖ ಬೌಲರ್ ಆಗಿದ್ದಾರೆ.

#2 ಜಯದೇವ್ ಉನದ್ಕತ್

#2 ಜಯದೇವ್ ಉನದ್ಕತ್

ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡುವ ಎಡಗೈ ವೇಗಿ ಜಯದೇವ್ ಉನದ್ಕತ್ ಅವರು 10 ಪಂದ್ಯಗಳಿಂದ 21 ವಿಕೆಟ್ ಗಳಿಸಿದ್ದಾರೆ.

#3 ಇಮ್ರಾನ್ ತಾಹೀರ್

#3 ಇಮ್ರಾನ್ ತಾಹೀರ್

ದಕ್ಷಿಣ ಆಫ್ರಿಕಾ ಲೆಗ್ ಸ್ಪಿನ್ನರ್, ಇಮ್ರಾನ್ ತಾಹೀರ್ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಈ ಬಾರಿ 12 ಪಂದ್ಯಗಳಿಂದ 18 ವಿಕೆಟ್ ಕಬಳಿಸಿದ್ದಾರೆ.

#4 ಮಿಚೆಲ್ ಮೆಕ್ಲೆನಗನ್

#4 ಮಿಚೆಲ್ ಮೆಕ್ಲೆನಗನ್

ಮುಂಬೈ ಇಂಡಿಯನ್ಸ್ ನ ಪ್ರಮುಖ ವೇಗಿಯಾಗಿರುವ ಮಿಚೆಲ್ ಮೆಕ್ಲೆನಗನ್ ಅವರು ಈ ಪಟ್ಟಿಯಲ್ಲಿ ಲೀಗ್ ನಂತರ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್ ನ ವೇಗಿ 14 ಪಂದ್ಯಗಳಿಂದ 17 ವಿಕೆಟ್ ಗಳಿಸಿದ್ದಾರೆ.

#5 ರಶೀದ್ ಖಾನ್

#5 ರಶೀದ್ ಖಾನ್

18 ವರ್ಷ ವಯಸ್ಸಿನ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಅವರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸನ್ ರೈಸರ್ಸ್ ಹೈದರಬಾದ್ ಪರ ಆಡುವ ರಶೀದ್ 13 ಪಂದ್ಯಗಳಲ್ಲಿ 17 ವಿಕೆಟ್ ಗಳನ್ನು ಗಳಿಸಿದ್ದಾರೆ.

#6 ಸಂದೀಪ್ ಶರ್ಮ

#6 ಸಂದೀಪ್ ಶರ್ಮ

ಕಿಂಗ್ಸ್ ಎಲೆವನ್ ಪಂಜಾಬ್ ನ ಪ್ರಮುಖ ಬೌಲರ್ ಆಗಿರುವ ಸಂದೀಪ್ ಶರ್ಮ ಅವರು 13 ಪಂದ್ಯಗಳಿಂದ 17 ವಿಕೆಟ್ ಗಳನ್ನು ಗಳಿಸಿದ್ದಾರೆ. ಡೆಲ್ಲಿ ವಿರುದ್ಧ 4/20 ಇವರ ಶ್ರೇಷ್ಠ ಬೌಲಿಂಗ್ ಆಗಿದೆ.

#7 ಕ್ರಿಸ್ ವೋಕ್ಸ್

#7 ಕ್ರಿಸ್ ವೋಕ್ಸ್

ಕೋಲ್ಕತಾ ನೈಟ್ ರೈಡರ್ಸ್ ಪರ ಆಡುವ ವೇಗಿ, ಇಂಗ್ಲೆಂಡಿನ ಕ್ರಿಸ್ ವೋಕ್ಸ್ ಅವರು 13 ಪಂದ್ಯಗಳಲ್ಲಿ 17 ವಿಕೆಟ್ ಪಡೆದು 7ನೇ ಸ್ಥಾನದಲ್ಲಿದ್ದಾರೆ.

#8 ಪವನ್ ನೇಗಿ

#8 ಪವನ್ ನೇಗಿ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕಳಪೆ ಸಾಧನೆ ನಡುವೆ ಆಲ್ ರೌಂಡರ್ ಪವನ್ ನೇಗಿ ಈ ಪಟ್ಟಿಯಲ್ಲಿ ಸೇರಿರುವುದೇ ಸಾಧನೆ. ಎಡಗೈ ಸ್ಪಿನ್ನರ್ ಗಳಿಂದ ನೇಗಿ 12 ಪಂದ್ಯಗಳಿಂದ 16 ವಿಕೆಟ್ ಗಳಿಸಿದ್ದಾರೆ.

#9 ಸಿದ್ದಾರ್ಥ್ ಕೌಲ್

#9 ಸಿದ್ದಾರ್ಥ್ ಕೌಲ್

ಸನ್ ರೈಸರ್ಸ್ ಹೈದರಾಬಾದ್ ವೇಗಿ ಸಿದ್ದಾರ್ಥ್ ಕೌಲ್ ಅವರು ಪಟ್ಟಿಯಲ್ಲಿರುವ ಭಾರತದ ಮತ್ತೊಬ್ಬ ವೇಗಿಯಾಗಿದ್ದಾರೆ. 9 ಪಂದ್ಯಗಳಿಂದ 16 ವಿಕೆಟ್ ಗಳನ್ನು ಗಳಿಸಿದ್ದಾರೆ.

#10 ಅಕ್ಷರ್ ಪಟೇಲ್

#10 ಅಕ್ಷರ್ ಪಟೇಲ್

ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡುವ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರು 14 ಪಂದ್ಯಗಳ ನಂತರ 15 ವಿಕೆಟ್ ಗಳಿಸಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Top 10 bowlers : Indian Premier League (IPL) has reached its business end as the league stages are over and playoffs have arrived.
Please Wait while comments are loading...