ಐಪಿಎಲ್ : ಪ್ಲೇ ಆಫ್ ಗೂ ಮುನ್ನ ಟಾಪ್ 10 ಬ್ಯಾಟ್ಸ್ ಮನ್

Posted By:
Subscribe to Oneindia Kannada

ಬೆಂಗಳೂರು, ಮೇ 15: ಐಪಿಎಲ್ 10ರ 50 ಪಂದ್ಯಗಳಲ್ಲಿ ಅಗ್ರ ಸ್ಥಾನ ಪಡೆದ ಬ್ಯಾಟ್ಸ್ ಮನ್ ಗಳ ಪೈಕಿ ಬಹುತೇಕ ಮಂದಿ ಪ್ಲೇ ಆಪ್ ನಲ್ಲಿ ಆಡುತ್ತಿಲ್ಲ. ಡೇವಿಡ್ ವಾರ್ನರ್ ಅವರು ಪ್ಲೇ ಆಫ್ ಆರಂಭಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಮಿಕ್ಕಂತೆ ಯಾರೆಲ್ಲ ಟಾಪ್ 10 ಪಟ್ಟಿಯಲ್ಲಿದ್ದಾರೆ ಮುಂದೆ ಓದಿ...

ಐಪಿಎಲ್ 2017ರ ಲೀಗ್ ಹಂತ ಮುಗಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (8), ಗುಜರಾತ್ ಲಯನ್ಸ್ (7), ಕಿಂಗ್ಸ್ ‍XI ಪಂಜಾಬ್ (5) ತಂಡಗಳು ಪ್ಲೇ ಆಫ್ ಹಂತಗಳಿಂದ ಹೊರ ಬಿದ್ದ ಮೊದಲ ತಂಡಗಳಾದವು.

ಡೆಲ್ಲಿ ಡೇರ್ ಡೆವಿಲ್ಸ್ (6), ಕಿಂಗ್ಸ್ ಎಲೆವನ್ ಪಂಜಾಬ್ (5) ಕೊನೆ ತನಕ ಪ್ಲೇ ಆಫ್ ಹಂತಕ್ಕೇರುವ ಹೋರಾಟ ನಡೆಸಿ, ವಿಫಲವಾದವು. ಲೀಗ್ ನಂತರ 20 ಅಂಕಗಳಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಸ್ಥಾನಕ್ಕೇರಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಮಂಗಳವಾರ(ಮೇ 16) ಮೊದಲ ಕ್ವಾಲಿಫೈಯರ್ ನಲ್ಲಿ ಸೆಣೆಸುವ ಮೂಲಕ ಪ್ಲೇ ಆಫ್ ಹಂತದ ಪಂದ್ಯಾವಳಿ ಆರಂಭಗೊಳ್ಳಲಿದೆ.

#1 ಡೇವಿಡ್ ವಾರ್ನರ್

#1 ಡೇವಿಡ್ ವಾರ್ನರ್

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ, ಆರಂಭಿಕ ಆಟಗಾರ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಐಪಿಎಲ್ ನಲ್ಲಿ ಈವರೆಗೆ 13 ಇನಿಂಗ್ಸ್ 604 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.

#2 ಶಿಖರ್ ಧವನ್

#2 ಶಿಖರ್ ಧವನ್

ಸನ್ ರೈಸರ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಭಾರತದ ಶಿಖರ್ ಧವನ್, ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ 13 ಪಂದ್ಯಗಳಿಂದ 4680 ರನ್ ಗಳಿಸಿದ್ದಾರೆ. ಈ ಎಡಗೈ ಬ್ಯಾಟ್ಸ್ ಮನ್ ನ ಈ ಸಾಧನೆಯಲ್ಲಿ 3 ಅರ್ಧಶತಕ ಇವೆ.

#3 ಗೌತಮ್ ಗಂಭೀರ್

#3 ಗೌತಮ್ ಗಂಭೀರ್

ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ 14 ಪಂದ್ಯಗಳಿಂದ 454 ರನ್ ಗಳಿಸಿದ್ದಾರೆ. ಆರೇಂಜ್ ಕ್ಯಾಪ್ ಕ್ರಿಕೆಟಿಗರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.

#4 ಸುರೇಶ್ ರೈನಾ

#4 ಸುರೇಶ್ ರೈನಾ

ಸುರೇಶ್ ರೈನಾ ಅವಾರ್ ಗುಜರಾತ್ ಲಯನ್ಸ್ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆದಿಲ್ಲ. ಆದರೆ, ಲೀಗ್ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಸುರೇಶ್ ರೈನಾ, 14 ಪಂದ್ಯಗಳಿಂದ 442ರನ್ ಗಳಿಸಿದ್ದಾರೆ.

#5 ಸ್ಟೀವ್ ಸ್ಮಿತ್

#5 ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನ ಕ್ಯಾಪ್ಟನ್ ಸ್ಟೀವನ್ ಸ್ಮಿತ್ ಅವರು 13 ಪಂದ್ಯಗಳಿಂದ 420 ರನ್ ಗಳಿಸಿ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

#6 ಹಶೀಂ ಆಮ್ಲಾ

#6 ಹಶೀಂ ಆಮ್ಲಾ

ಹಶೀಂ ಆಮ್ಲಾ ಅವರು ಕಿಂಗ್ಸ್ ಎಲೆವನ್ ಪಂಜಾಬ್ ಪರ ಎರಡು ಶತಕ ಸೇರಿದಂತೆ ಪ್ಲೇ ಆಫ್ ಗೂ ಮುನ್ನ 10 ಪಂದ್ಯಗಳಿಂದ 420 ರನ್ ಗಳಿಸಿದ್ದಾರೆ. ಇದು ಇವರ ಮೊದಲ ಐಪಿಎಲ್ ಅನುಭವ.

#7 ಮನೀಶ್ ಪಾಂಡೆ

#7 ಮನೀಶ್ ಪಾಂಡೆ

ಕರ್ನಾಟಕ ಮೂಲದ ಮನೀಶ್ ಪಾಂಡೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾ ಈ ಬಾರಿ ಐಪಿಎಲ್ ನಲ್ಲಿ 14 ಪಂದ್ಯಗಳಿಂದ 396ರನ್ ಗಳಿಸಿದ್ದಾರೆ.

#8 ರಾಹುಲ್ ತ್ರಿಪಾಠಿ

#8 ರಾಹುಲ್ ತ್ರಿಪಾಠಿ

ಈ ಬಾರಿಯ ಅಚ್ಚರಿಯ ಪ್ಯಾಕೇಜ್ ಎನಿಸಿಕೊಂಡಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ನ ಬ್ಯಾಟ್ಸ್ ಮನ್ ರಾಹುಲ್ ತ್ರಿಪಾಠಿ ಅವರು 12 ಪಂದ್ಯಗಳಿಂದ 388ರನ್ ಗಳಿಸಿದ್ದಾರೆ.

#9 ರಾಬಿನ್ ಉತ್ತಪ್ಪ

#9 ರಾಬಿನ್ ಉತ್ತಪ್ಪ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ವಿಕೆಟ್ ಕೀಪರ್ ಕರ್ನಾಟಕ ಮೂಲದ ರಾಬಿನ್ ಉತ್ತಪ್ಪ ಅವರು 12 ಪಂದ್ಯಗಳಿಂದ 386ರನ್ ಗಳಿಸಿದ್ದಾರೆ.

#10 ಸಂಜು ಸ್ಯಾಮ್ಸನ್

#10 ಸಂಜು ಸ್ಯಾಮ್ಸನ್

ಡೆಲ್ಲಿ ಡೇರ್ ಡೆವಿಲ್ಸ್ ನ ಆರಂಭಿಕ ಬ್ಯಾಟ್ಸ್ ಮನ್ ಸಂಜು ಸಾಮ್ಸನ್ ಅವರು 14 ಪಂದ್ಯಗಳಿಂದ 386 ರನ್ ಗಳಿಸಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Premier League (IPL) 2017 has reached its business end 4 out of teams have been eliminated from the tournament.
Please Wait while comments are loading...