500ನೇ ಟೆಸ್ಟ್ ಪಂದ್ಯ, ನಿಮ್ಮ ಕನಸಿನ ತಂಡ ಆಯ್ಕೆ ಮಾಡಿ!

Posted By:
Subscribe to Oneindia Kannada

ಮುಂಬೈ, ಸೆ.20: ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತನ್ನ 500ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಡ್ರೀಮ್ ಟೀಮ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ.


ಭಾರತದ 'ಕನಸಿನ ತಂಡ' ಆಯ್ಕೆ ಮಾಡುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ತಂಡದ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ ಡ್ರೀಮ್ ಟೀಮ್‌ ಅನ್ನು ಆಯ್ಕೆ ಮಾಡುವಂತೆ ಆಹ್ವಾನ ನೀಡಲಾಗಿದೆ. ನೀವು ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಿಕೊಂಡು ಮತ ಹಾಕಬಹುದು. [ಭಾರತ- ಕಿವೀಸ್ ಟೆಸ್ಟ್ ಸರಣಿ, ಯಾವ ದಾಖಲೆಗಳು ಧ್ವಂಸವಾಗಲಿವೆ?]

To celebrate 500th Test, BCCI launches 'Dream Team' initiative for fans

ಯಾವ ಕ್ರಮಾಂಕದಲ್ಲಿ ಯಾವ ಆಟಗಾರ ಆಡಬೇಕು ಎಂಬುದನ್ನು ನೀವೆ ನಿರ್ಧರಿಸಿ ಸೂಚಿಸಬಹುದು.ಅಭಿಮಾನಿಗಳಿಗೆ ತಮ್ಮದೇ ಆದ ಕನಸಿನ ತಂಡ ಕಟ್ಟುವ ಬಯಕೆ ಇರುತ್ತದೆ. ಅದನ್ನು ಈ ಮೂಲಕ ತೀರಿಸಿಕೊಳ್ಳಬಹುದು. ಲಕ್ಷಾಂತರ ಮಂದಿ ಈಗಾಗಲೇ ಮತ ಹಾಕಿ ತಮ್ಮ ನೆಚ್ಚಿನ ತಂಡ ಆಯ್ಕೆ ಮಾಡುತ್ತಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ. [ಇತಿಹಾಸ ಬರೆಯಲು ಸಜ್ಜಾದ ಟೀಂ ಇಂಡಿಯಾ!]

ಭಾರತ ಕ್ರಿಕೆಟ್ ತಂಡಕ್ಕೆ ಸೆಪ್ಟಂಬರ್ 22 ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತಕ್ಕೆ 500ನೇ ಟೆಸ್ಟ್ ಪಂದ್ಯವಾಗಲಿದೆ. ಮಾಜಿ ನಾಯಕರಾದ ನಾರಿ ಕಂಟ್ರ್ಯಾಕ್ಟರ್, ಚಂದು ಬೋರ್ಡೆ, ದಿಲಿಪ್ ವೆಂಗಸರ್ಕಾರ್, ಕಪಿಲ್ ದೇವ್, ರವಿಶಾಸ್ತ್ರಿ, ಸುನಿಲ್ ಗಾವಸ್ಕರ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕೆ. ಶ್ರೀಕಾಂತ್ ಅವರು ಭಾಗವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) has launched a fan engagement initiative "Dream Team" to mark the 500th Test of Team India. The first Test match of the New Zealand tour of India to be played at Kanpur from September 22 (Thursday) onwards will be Team India's 500th Test match.
Please Wait while comments are loading...