ಗಳಿಸಿದ ರನ್ ಗಳಿಗಿಂತ ಹೆಚ್ಚು ಹೆಣ್ಣುಗಳ ಜತೆ ಮಲಗಿದ್ದ ಕ್ರಿಕೆಟರ್

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 22: ಕೆರಿಬಿಯನ್ ತಂಡ ಹಾಗೂ ಆಟಗಾರರಿಗೆ 2016 ಪರ್ವ ಕಾಲ, ವಿಶ್ವಕಪ್ ಗೆಲುವಿನ ಸಂಭ್ರಮದ ಜೊತೆಗೆ ಅನೇಕ ಆಟಗಾರರು ವೈಯಕ್ತಿಕ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಸಮಯ. ಆದರೆ, ಇಲ್ಲೊಬ್ಬ ಆಟಗಾರ ತಾನು ತನ್ನ ವೃತ್ತಿ ಬದುಕಿನಲ್ಲಿ ಗಳಿಸಿದ ರನ್, ವಿಕೆಟ್ ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಗಳ ಜೊತೆ ಮಲಗಿದ್ದೆ ಎಂದು ಬರೆದುಕೊಂಡಿದ್ದಾನೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಜಮೈಕಾದಲ್ಲಿ ಕ್ರಿಸ್ ಗೇಲ್ ತನ್ನ ಮಗುವನ್ನು ಮುದ್ದಾಡುವ ಸಮಯದಲ್ಲಿ ವೆಸ್ಟ್ ಇಂಡೀಸ್ ನ ಮಾಜಿ ವೇಗಿ ಟೀನೊ ಬೆಸ್ಟ್ ಸುದ್ದಿಯಲ್ಲಿದ್ದಾರೆ. ತನ್ನ ಬದುಕಿನ ಚಿತ್ರಣವನ್ನು ಪುಸ್ತಕರೂಪದಲ್ಲಿ ತರುತ್ತಿರುವ ಟೀನೊ, ' Mind the Windows: My Story' ಪುಸ್ತಕದಲ್ಲಿ ಬರೆದಿರುವಂತೆ ಸುಮಾರು 500 ರಿಂದ 600 ಮಹಿಳೆಯರೊಡನೆ ಆತ ಮಲಗಿದ್ದನಂತೆ.[ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್]

ವೆಸ್ಟ್ ಇಂಡೀಸ್ ನ ಮಾಜಿ ವೇಗಿ ಟಿನೋ, 2003 ರಿಂದ 2013ರ ಅವಧಿಯಲ್ಲಿ ವೃತ್ತಿಪರ ಕ್ರಿಕೆಟ್ ಆಡಿದ್ದರು. 25 ಟೆಸ್ಟ್ ಪಂದ್ಯಗಳಲ್ಲಿ 401ರನ್, 26 ಏಕದಿನ ಪಂದ್ಯಗಳಲ್ಲಿ 26ರನ್ ಹಾಗೂ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 17ರನ್ ಮಾತ್ರ ಗಳಿಸಿದ್ದಾರೆ. ವಿಕೆಟ್ ಲೆಕ್ಕಾಚಾರದಲ್ಲಿ 57 ಟೆಸ್ಟ್ ವಿಕೆಟ್ ಗಳು ಹಾಗೂ 34 ಏಕದಿನ ಕ್ರಿಕೆಟ್ ವಿಕೆಟ್ ಪಡೆದಿದ್ದಾರೆ.[ಐಪಿಎಲ್ ನಿಂದ ಕಿರಿ ಕಿರಿ, ಪ್ರೀತಿಗ್ಯಾಕೆ ಉರಿ ಉರಿ]

This West Indian player slept with more women than runs he scored

ಮೊದಲ ಪ್ರೀತಿ: ಮೆಲಿಸ್ಸಾ ನನ್ನ ಮೊದಲ ಪ್ರೀತಿ, ಆಕೆಯಿಂದ 'ತಮಾನಿ' ಎಂಬ ಪುತ್ರಿಯನ್ನು ಪಡೆದಿದ್ದಾನೆ. ನಾನೊಬ್ಬ ಪ್ಲೇಬಾಯ್ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕೆಲವರು ನನ್ನನ್ನು 'ಗಂಡುಸೂಳೆ' ಎಂದು ಕರೆದರೂ ನನಗೇನು ಬೇಜಾರಿಲ್ಲ.

'ಕಪ್ಪು ಬಣ್ಣದ ಬಕ್ಕತಲೆಯ ಬ್ರಾಡ್ ಪಿಟ್ ನಂತೆ ಇಲ್ವ ನಾನು' ಎಂದು ಟೀನೋ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಹಿಳೆಯರೇ ಫೇವರಿಟ್ ಎಂದಿರುವ ಟಿನೋ, ಮಹಿಳೆಯರು ನನ್ನನ್ನು ಇಷ್ಟಪಡುತ್ತಾರೆ. ನಾನು ಮಹಿಳೆಯರನ್ನು ಇಷ್ಟಪಡುತ್ತೇನೆ. ನನಗೆ ಇಷ್ಟವಾದರೆ ನೇರವಾಗಿ ಹೋಗಿ ಕೇಳುತ್ತೇನೆ. ಗಾಯಕಿ ಬಿಯಾನ್ಸ್ ಮಿಸ್ ಆದಳು ಎಂದಿದ್ದಾರೆ. ತಮ್ಮ ಪುಸ್ತಕದಲ್ಲಿ ಕ್ರಿಸ್ ಗೇಲ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Best, who has played international cricket between 2003 and 2013, has dealt with more women than runs he has scored at the highest stage. Former West Indian fast bowler Tino Best has confessed in his upcoming autobiography "Mind the Windows: My Story" that he had slept with between 500 and 650 women while tou
Please Wait while comments are loading...