ಆಸ್ಟ್ರೇಲಿಯ ಸರಣಿ ಬಳಿಕ ಕ್ರಿಕೆಟ್ ಗೆ ದಿಲ್ಶನ್ ವಿದಾಯ

By: ಕ್ರೀಡಾ ಡೆಸ್ಕ್
Subscribe to Oneindia Kannada

ಕೊಲಂಬೊ, ಆಗಸ್ಟ್ 25: ಶ್ರೀಲಂಕಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ತಿಲಕರತ್ನೆ ದಿಲ್ಶನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಸೆಪ್ಟೆಂಬರ್ 9 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯ ದಿಲ್ಶನ್ ಅವರ ಕೊನೆ ಪಂದ್ಯವಾಗಲಿದೆ.

ಶ್ರೀಲಂಕಾ ತಂಡದ 39 ವರ್ಷದ ಆಲ್ ರೌಂಡರ್ ದಿಲ್ಶನ್ ಅವರು 2013ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಈಗ ನಿಗದಿತ ಓವರ್ ಹಾಗೂ ಟ್ವೆಂಟಿ-20 ಮತ್ತು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ.

Tillakaratne Dilshan to retire from ODIs, T20Is after Australia series

1999 ರಲ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟಿದ್ದ ದಿಲ್ಶನ್ ಈವರೆಗೆ 329 ಪಂದ್ಯಗಳನ್ನಾಡಿ 10,248 ರನ್ ಗಳಿಸಿದ ಸರದಾರ ಎನಿಸಿಕೊಂಡಿದ್ದಾರೆ. ಇದರಲ್ಲಿ 22 ಶತಕ ಹಾಗೂ 47 ಅರ್ಧಶತಕಗಳನ್ನು ಬಾರಿಸಿದ್ದಾರೆ. 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 29ರನ್ ಸರಾಸರಿಯಂತೆ 1,884 ರನ್ ಗಳಿಸಿದ್ದಾರೆ. 2016ರಲ್ಲಿ ವಿಶ್ವ ಟಿ20ಯಲ್ಲಿ ಶ್ರೀಲಂಕಾ ಪರ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran Sri Lanka cricketer Tillakaratne Dilshan on Thursday (Aug 25) announced his retirement from international cricket after playing third ODI match against Australia in Dambulla on Sunday (Aug 28), and play his last T20I on Sep 9 in Colombo.
Please Wait while comments are loading...