ಚಂದ್ರಪಾಲ್: ಮೀನುಗಾರನ ಮಗ ಕ್ರಿಕೆಟ್ ಕ್ಷೇತ್ರದ ಮಿನುಗುತಾರೆ

Posted By:
Subscribe to Oneindia Kannada

ಆಂಟಿಗುವಾ(ವೆಸ್ಟ್ ಇಂಡೀಸ್), ಜ. 24: ಜಿಗುಟು ಬ್ಯಾಟ್ಸ್ ಮನ್ ಎಂದೇ ಖ್ಯಾತರಾಗಿದ್ದ ವೆಸ್ಟ್ ಇಂಡೀಸ್ ನ ಹಿರಿಯ ಬ್ಯಾಟ್ಸ್ ಮನ್ ಶಿವನಾರಾಯಣ್ ಚಂದ್ರಪಾಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದ ಏಳನೇ ಅತ್ಯಧಿಕ ರನ್ ಸರದಾರ ಎಂಬ ಕೀರ್ತಿಗೆ ಭಾಜನರಾಗಿರುವ ವೆಸ್ಟ್​ಇಂಡಿಸ್ ತಂಡದ ಬ್ಯಾಟ್ಸ್​ಮನ್ ಶಿವನಾರಾಯಣ್ ಚಂದ್ರಪಾಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ ಎಂದು ಶನಿವಾರ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ (ಡಬ್ಲ್ಯೂಐಸಿಬಿ) ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Shivnarine Chanderpaul

ಸರಿ ಸುಮಾರು 22 ವರ್ಷದ ಕ್ರಿಕೆಟ್ ವೃತ್ತಿ ಬದುಕು ಕಂಡಿರುವ ಚಂದ್ರಪಾಲ್ ಅವರು ಟೆಸ್ಟ್​ ಕ್ರಿಕೆಟ್ ನಲ್ಲಿ 11,867 ರನ್ ಗಳಿಸಿದ್ದಾರೆ. 41 ವರ್ಷ ವಯಸ್ಸಿನ ಚಂದ್ರಪಾಲ್ ಅವರನ್ನು 'ಟೈಗರ್' ಎಂದು ಅಡ್ಡ ಹೆಸರಿನಿಂದ ಸಹ ಆಟಗಾರರು ಕರೆಯುತ್ತಾರೆ.

1994ರಲ್ಲಿ ಇಂಗ್ಲೆಂಡ್ ವಿರುದ್ಧ ಜಾರ್ಜ್ ಟೌನ್ ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಚಂದ್ರಪಾಲ್ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯ ಕೂಡ ಇಂಗ್ಲೆಂಡ್ ಜತೆಗೆ ಆಡಿದ್ದು ವಿಶೇಷ. ಈ ನಡುವೆ ಟೆಸ್ಟ್ ಕ್ರಿಕೆಟ್ ಶ್ರೇಷ್ಠ ಕ್ರಿಕೆಟರ್ಸ್ ಗಳ ಸಾಲಿಗೆ ಸೇರಿದರು. ಕ್ರಿಕೆಟ್ ಲೋಕದ ದಿಗ್ಗಜ ಬ್ರಿಯಾನ್ ಲಾರಾ 11,953ರನ್ ಗಳಿಸಿ ವಿಂಡೀಸ್ ಪರ ಅಗ್ರಸ್ಥಾನದಲ್ಲಿದ್ದಾರೆ.

Shivnarine Chanderpaul

ಒಟ್ಟಾರೆ 164 ಟೆಸ್ಟ್ ಪಂದ್ಯ ಆಡಿದ ಚಂದ್ರಪಾಲ್ ಅವರು 51.37 ಸರಾಸರಿಯಂತೆ 11,867 ರನ್ ಅಜೇಯ 203 ವೈಯಕ್ತಿಕ ಗರಿಷ್ಠ ರನ್ ಆಗಿದೆ. ಟೆಸ್ಟ್‌ನಲ್ಲಿ 30 ಶತಕ ಮತ್ತು 66 ಅರ್ಧಶತಕ ದಾಖಲಿಸಿರುವ ಚಂದ್ರಪಾಲ್ 9 ವಿಕೆಟ್ ಗಳಿಸಿದ್ದಾರೆ.

268 ಏಕದಿನ ಪಂದ್ಯಗಳನ್ನು ಆಡಿರುವ ಚಂದ್ರಪಾಲ್ 251 ಇನಿಂಗ್ಸ್‌ಗಳಲ್ಲಿ 41.60 ಸರಾಸರಿಯಂತೆ 8,778 ರನ್ ಗಳಿಸಿದ್ದಾರೆ. 11 ಶತಕ ಮತ್ತು 59 ಅರ್ಧಶತಕ ದಾಖಲಿಸಿರುವ ಚಂದ್ರಪಾಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 150. ವಿಕೆಟ್ 14. 22 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 343 ರನ್ ಗಳಿಸಿದ್ದಾರೆ.

Shivnarine Chanderpaul

ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡುಲ್ಕರ್ ಬಳಿಕ ಸುದೀರ್ಘ ಕ್ರಿಕೆಟ್ ಆಡಿದ ಎರಡನೆ ಆಟಗಾರ ಎನಿಸಿರುವ ಚಂದ್ರಪಾಲ್ ಅವರು ಗಯಾನದ ಮೀನುಗಾರರೊಬ್ಬರ ಮಗನಾಗಿ ಹುಟ್ಟಿ ಕ್ರಿಕೆಟ್ ಲೋಕದ ತಾರೆಯಾಗಿ ಬೆಳೆದವರು. ಆಡಿದ ಮೊದಲ(62ರನ್ ಗಳಿಸಿದ್ದರು) ಹಾಗೂ ಕೊನೆ ಪಂದ್ಯ (ಡಕ್ ಬಾರಿಸಿದ್ದರು) ವನ್ನು ಗೆಲುವಿನ ಮೂಲಕ ಮುಕ್ತಾಯಗೊಳಿಸಿದರು. ( ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran West Indies' batsman Shivnarine Chanderpaul has announced his retirement from international cricket.Chanderpaul, son of fisherman, started his Test career with a 62 in his hometown Guyana.
Please Wait while comments are loading...