ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಹಂಚಿದ ವೈರಲ್ ವಿಡಿಯೋದಲ್ಲಿರುವ ಮಗು ಪತ್ತೆ

By Mahesh

ಬೆಂಗಳೂರು, ಆಗಸ್ಟ್ 23: ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್, ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡ ವಿಡಿಯೋದಲ್ಲಿರುವ ಪುಟ್ಟ ಹುಡುಗಿ ಯಾರು ಎಂಬ ವಿಷಯ ಪತ್ತೆಯಾಗಿದೆ.

ಬಾಲಿವುಡ್ ನ ಬಾಲಿವುಡ್ ಗಾಯಕರಾದ ತೋಷಿ ಮತ್ತು ಶರಿಬ್ ಸಬ್ರಿ ಅವರ ಸೋದರನ ಪುತ್ರಿ. ಮೂರು ವರ್ಷ ವಯಸ್ಸಿನ ಹಯಾ ಎಂದು ತಿಳಿದು ಬಂದಿದೆ.

The child in Virat Kohli’s Instagram post is singer Toshi’s niece


ಸಣ್ಣ ಬಾಲಕಿಯೊಬ್ಬಳು ಕಂಠಪಾಠ ಮಾಡುವ ವೀಡಿಯೊ ದೃಶ್ಯವೊಂದನ್ನು ಕ್ರಿಕೆಟರ್ ಗಳು ಹಂಚಿಕೊಂಡಿದ್ದರು. 'ಮಕ್ಕಳನ್ನು ಬೈಯಬೇಡಿ' ಎಂದು ವಿನಂತಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಒಂದೂವರೆ ನಿಮಿಷದ ಈ ವೀಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ಬೈಯುವ ದೃಶ್ಯವಿತ್ತು.


ಈ ಕುರಿತು ಪ್ರತಿಕ್ರಿಯೆ ನೀಡಿರುವ ತೋಷಿ ಹಾಗೂ ಸಬ್ರಿ, ನಮ್ಮ ಸೋದರನ ಮಗಳು ಹಯಾ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ.

ಹಯಾಳನ್ನು ಬಯ್ದರೆ ಕೆಲ ಕ್ಷಣದಲ್ಲೇ ಅದನ್ನು ಮರೆತುಬಿಟ್ಟು ಆಡಲು ಓಡುತ್ತಾಳೆ. ಆದರೆ, ಹಾಗೆಂದು ಅವಳನ್ನು ಕೇವಲ ಮುದ್ದು ಮಾಡಿದರೆ ಆಕೆ ಓದಿನ ಬಗ್ಗೆ ನಿರ್ಲಕ್ಷ ತಳೆಯುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ.

Independance day wish from my jaanam baby JAI HIND

A post shared by Sharib Sabri (@sharibsabri) on

ವೀಡಿಯೊ ವೈರಲ್ ಆಗುತ್ತದೆ ಎಂದು ಈ ದಂಪತಿ ಭಾವಿಸಿರಲಿಲ್ಲ. ಈ ವೀಡಿಯೊವನ್ನು ಮಗುವಿನ ತಾಯಿ ರೆಕಾರ್ಡ್ ಮಾಡಿಕೊಂಡಿದ್ದು ತನ್ನ ಮಗಳು ಎಷ್ಟೊಂದು ಹಠಮಾರಿ ಎಂಬುದನ್ನು ತೋರಿಸಿಕೊಡುವ ಉದ್ದೇಶ ಅವರದ್ದಾಗಿತ್ತು ಎನ್ನುತ್ತಾರೆ ತೋಷಿ

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X