ಸರಣಿ ಶ್ರೇಷ್ಠ ದಾಖಲೆ: ಮುತ್ತಯ್ಯ ಅಗ್ರಸ್ಥಾನ, ಅಶ್ವಿನ್ 5ನೇ ಸ್ಥಾನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಉತ್ತಮ ಸಾಧನೆ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಸುದ್ದಿ ಓದಿರಬಹುದು. ಕ್ರಿಕೆಟ್ ದಿಗ್ಗಜ ಸಚಿನ್, ಸೆಹ್ವಾಗ್ ರನ್ನು ಹಿಂದಿಕ್ಕಿರುವ ಅಶ್ವಿನ್ ಅವರು ಸಾರ್ವಕಾಲಿಕ ದಾಖಲೆ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡು ಭಾರತ 2-0ರಲ್ಲಿ ಸರಣಿ ಗೆದ್ದುಕೊಂಡಿತು.

ಅಶ್ವಿನ್ 36 ಟೆಸ್ಟ್ ಪಂದ್ಯಗಳಲ್ಲಿ 6 ಬಾರಿ ಸರಣಿ ಶ್ರೇಷ್ಠ ಎನಿಸಿಕೊಂಡಿದ್ದಾರೆ. ಅಶ್ವಿನ್ ಅವರಿಗೆ ಕ್ರಿಕೆಟ್ ದಿಗ್ಗಜರಾದ ಮಾಲ್ಕಂ ಮಾರ್ಷಲ್, ಕರ್ಟ್ಲಿ ಆಂಬ್ರೋಸ್, ಸ್ಟೀವ್ ವಾ ಅವರಿಂದ ಶುಭ ಹಾರೈಕೆ, ಪ್ರಶಂಸೆ ಸಿಕ್ಕಿದೆ. [ಸಚಿನ್, ಸೆಹ್ವಾಗ್ ದಾಖಲೆ ಮುರಿದ ಆರ್ ಅಶ್ವಿನ್]

ಸಚಿನ್(200 ಟೆಸ್ಟ್) ಹಾಗೂ ಸೆಹ್ವಾಗ್(104) ಅವರ ದಾಖಲೆ ಮುರಿದ ಅಶ್ವಿನ್ ಗಿಂತ ವಾಸೀಂ ಅಕ್ರಮ್, ಇಮ್ರಾನ್ ಖಾನ್, ಜಾಕ್ ಕಾಲೀಸ್ ಹಾಗೂ ಮುತ್ತಯ್ಯ ಮುರಳೀದರನ್ ಮುಂದಿದ್ದಾರೆ. ಮುರಳಿ 11 ಬಾರಿ ಸರಣಿ ಶ್ರೇಷ್ಠ ಎನಿಸಿದ್ದಾರೆ.

ಮುತ್ತಯ್ಯ ಮುರಳೀದರನ್ ಅಗ್ರಸ್ಥಾನ

ಮುತ್ತಯ್ಯ ಮುರಳೀದರನ್ ಅಗ್ರಸ್ಥಾನ

ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀದರನ್ ಅಗ್ರಸ್ಥಾನದಲ್ಲಿದ್ದು 11 ಬಾರಿ ಸರಣಿ ಶ್ರೇಷ್ಠ ಪಡೆದುಕೊಂಡಿದ್ದಾರೆ.

ಜಾಕ್ ಕಾಲಿಸ್ #2

ಜಾಕ್ ಕಾಲಿಸ್ #2

ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಕ್ ಕಾಲಿಸ್ ಅವರು 9 ಬಾರಿ ಪಡೆದಿದ್ದಾರೆ.

ಮೂರನೇ ಸ್ಥಾನದಲ್ಲಿ ಮೂವರು

ಮೂರನೇ ಸ್ಥಾನದಲ್ಲಿ ಮೂವರು

8 ಬಾರಿ ಸರಣಿ ಶ್ರೇಷ್ಠ ಗೆದ್ದವರ ಪಟ್ಟಿಯಲ್ಲಿ ಇಮ್ರಾನ್ ಖಾನ್(ಪಾಕಿಸ್ತಾನ), ಸರ್ ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್), ಶೇನ್ ವಾರ್ನ್ (ಆಸ್ಟ್ರೇಲಿಯಾ)

7 ಬಾರಿ ಪ್ರಶಸ್ತಿ ಪಡೆದವರು

7 ಬಾರಿ ಪ್ರಶಸ್ತಿ ಪಡೆದವರು

ವಾಸೀಂ ಅಕ್ರಮ್(ಪಾಕಿಸ್ತಾನ), ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್)

5ನೇ ಸ್ಥಾನದಲ್ಲಿರುವವರು

5ನೇ ಸ್ಥಾನದಲ್ಲಿರುವವರು

6 ಬಾರಿ ಪ್ರಶಸ್ತಿ ಗೆದ್ದವರು: ರವಿಚಂದ್ರನ್ ಅಶ್ವಿನ್(ಭಾರತ), ಮಾಲ್ಕಂ ಮಾರ್ಷಲ್, ಕರ್ಟ್ಲಿ ಆಂಬ್ರೋಸ್(ವೆಸ್ಟ್ ಇಂಡೀಸ್), ಸ್ಟೀವ್ ವಾ (ಆಸ್ಟ್ರೇಲಿಯಾ)

5 ಬಾರಿ ಪ್ರಶಸ್ತಿ ಗೆದ್ದವರು

5 ಬಾರಿ ಪ್ರಶಸ್ತಿ ಗೆದ್ದವರು

5 ಬಾರಿ ಪ್ರಶಸ್ತಿ ಗೆದ್ದವರ ಪೈಕಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್(ಇಬ್ಬರೂ ಭಾರತ), ಗ್ಲೆನ್ ಮೆಗ್ರಾ, ಮೈಕಲ್ ಕ್ಲಾರ್ಕ್(ಇಬ್ಬರೂ ಆಸ್ಟ್ರೇಲಿಯಾ), ಆಂಡ್ರ್ಯೂ ಸ್ಟ್ರಾಸ್, ಗ್ರಹಾಂ ಗೂಚ್ (ಇಬ್ಬರೂ ಇಂಗ್ಲೆಂಡ್), ಡೇಲ್ ಸ್ಟೈನ್ (ದಕ್ಷಿಣ ಆಫ್ರಿಕಾ), ವಖಾರ್ ಯೂನಿಸ್ (ಪಾಕಿಸ್ತಾನ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the all-time list, Sri Lankan spin legend Muttaiah Muralitharan is the leader with 11 Man-of-the-series awards. He is followed by former South African all-rounder Jacques Kallis with 9. Ashwin, with 6 awards, is joint 5th in all-time list,
Please Wait while comments are loading...